ವಿಜಯಪುರ:ತಾಯಿ ಮತ್ತು ಮೂರು ಮಕ್ಕಳ ಸಾವಿಗೆ ಕಾರಣರಾದ ಇಬ್ಬರು ಸಹೋದರರು ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಮೊನ್ನೆಯಷ್ಟೇ ಈ ಪ್ರಕರಣ ನಡೆದಿದ್ದು, ಪೊಲೀಸರು ಇಂದು ಆರೋಪಿಗಳನ್ನು ಬಂಧಿಸಿದ್ದಾರೆ.
ಪಿಂಟೂ ಜಾಧವ್, ಧರ್ಮು ಜಾಧವ್, ವಿಠಲ್ ಜಾಧವ್ ಬಂಧಿತ ಆರೋಪಿಗಳು. ಜೂ. 15ರಂದು ಪ್ರವೀಣ (6), ಸುದೀಪ (4), ಮಮದಿಕಾ (2) ಎಂಬ ಮೂವರು ಮಕ್ಕಳನ್ನು ಕೃಷಿಹೊಂಡಕ್ಕೆ ಎಸೆದು ಬಳಿಕ ತಾಯಿ ಅನಿತಾ ಪಿಂಟು ಜಾಧವ್ (27) ತಾನೂ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಕುರಿತು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವಿಜಯಪುರ ‌ಜಿಲ್ಲೆ ತಿಕೋಟಾ ತಾಲೂಕಿನ ತೊರವಿ ತಾಂಡಾ 1ರ ತೋಟದಲ್ಲಿ ಈ ಪ್ರಕರಣ ನಡೆದಿದ್ದು, ಕೌಟುಂಬಿಕ ಕಲಹ ಕಾರಣಕ್ಕಾಗಿ ಈ ಆತ್ಮಹತ್ಯೆ ನಡೆದಿದೆ ಎನ್ನಲಾಗಿತ್ತು. ಆ ಮೇರೆಗೆ ದೂರು ದಾಖಲಿಸಿಕೊಂಡ ಪೊಲೀಸರು, ಅನಿತಾ ಪತಿ ಪಿಂಟೂ ಜಾಧವ್, ಆತನ ಸಹೋದರ ವಿಠಲ್ ಜಾಧವ್ ಮತ್ತು ತಂದೆ ಧರ್ಮು ಜಾಧವ್ ಎಂಬವರನ್ನು ಬಂಧಿಸಿದ್ದಾರೆ.
26 ವರ್ಷಗಳಲ್ಲೇ ಅತ್ಯಧಿಕ ಮಳೆ; ಒಂದೇ ದಿನದಲ್ಲಿ 972 ಮಿ.ಮೀ. ವರ್ಷಧಾರೆ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 3 =
Remember me
