ಯಾದಗಿರಿ:ರಾಜ್ಯದಲ್ಲಿ ಆಗಾಗ ಸಿಡಿಲು ಅಪ್ಪಳಿಸಿ ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಕರಣ ನಡೆಯುತ್ತಿದ್ದು, ಇದೀಗ ಆ ಪಟ್ಟಿಗೆ ಮತ್ತೊಂದು ಪ್ರಕರಣ ಸೇರಿಕೊಂಡಿದೆ. ಅದರಲ್ಲೂ ಈ ಬಾರಿ ಸಿಡಿಲು ಬಡಿದು ತಾಯಿ ಹಾಗೂ ಆಕೆಯ ಮಕ್ಕಳಿಬ್ಬರು ಕೂಡ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಮತ್ತೊಂದೆಡೆ ಮೈದುನನ ಸ್ಥಿತಿ ಚಿಂತಾಜನಕವಾಗಿದೆ.
ಯಾದಗಿರಿ ತಾಲೂಕಿನ ಎಮ್ ಹೊಸಳ್ಳಿ ಗ್ರಾಮದ ಬಳಿ ಈ ಪ್ರಕರಣ ನಡೆದಿದೆ. ಗಾಜರಕೋಟ್ ಗ್ರಾಮದ ಮೋನಮ್ಮ (25), ಈಕೆಯ ಮಕ್ಕಳಾದ ಬಾನು (4), ಶ್ರೀನಿವಾಸ (2) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಆಸ್ಪತ್ರೆಗೆಂದು ತೆರಳಿದ್ದ ಇವರು ಮರಳುವಾಗ ಏಕಾಏಕಿ ಮಳೆ ಬಂದಿದ್ದರಿಂದ ಅದರಿಂದ ರಕ್ಷಿಸಿಕೊಳ್ಳಲು ಗಿಡವೊಂದರ ಬಳಿ ನಿಂತಿದ್ದರು. ಇದೇ ಸಂದರ್ಭದಲ್ಲಿ ಸಿಡಿಲು ಬಡಿದಿದ್ದು, ಮಕ್ಕಳಿಬ್ಬರ ಜತೆಗೆ ತಾಯಿಯೂ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಮೋನಮ್ಮನ ಮೈದುನ ಭೀಮಾಶಂಕರ್ (32) ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅದೇ ಗ್ರಾಮದಲ್ಲಿ ಮತ್ತೊಬ್ಬ ಸಾವು: ಅದೇ ಗ್ರಾಮದ ಇನ್ನೊಂದು ಕಡೆ ಸಿಡಿಲು ಬಡಿದು ಸಾಬಣ್ಣ (17) ಎಂಬ ಯುವಕನೊಬ್ಬ ಸಾವಿಗೀಡಾಗಿದ್ದಾನೆ. ಈತ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲಿಗೆ ಬಲಿಯಾಗಿದ್ದಾನೆ.
ಹುಣಸೇಮರದಲ್ಲಿ ಕೋತಿಗಳಿಗೆ ನೇಣು; 2 ಮಂಗಗಳ ಸಾವು, ಇನ್ನೆರಡು ಬಚಾವು: ಇದೆಂಥ ವಿಕೃತಿ?
ಬಿಜೆಪಿ ಟಿಕೆಟ್​ಗಾಗಿ ರಾಜ್ಯಾಧ್ಯಕ್ಷರ ಸಮ್ಮುಖದಲ್ಲೇ ಗಲಾಟೆ; ಆಕಾಂಕ್ಷಿಗಳ ಬೆಂಬಲಿಗರಿಂದ ಮಾತಿನ ಚಕಮಕಿ..
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
Sign in to your account
Please enter an answer in digits:five × two =
Remember me
