ಕಲಬುರಗಿ:ಕಂಕುಳಲ್ಲಿ ಹತ್ತು ತಿಂಗಳ ಕೂಸು, ತಲೆ ಮೇಲೆ ಚೀಲ ಹೊತ್ತು ತಾಯಿಯೊಬ್ಬಳು ಬರೋಬ್ಬರಿ 300 ಕಿ.ಮೀ ದೂರ ಕಾಲ್ನಡಿಗೆಯಲ್ಲಿ ಕ್ರಮಿಸಿರುವ ಮನಕಲಕುವ ಘಟನೆ ಬುಧವಾರ ವರದಿಯಾಗಿದೆ.
ಇದನ್ನೂ ಓದಿ:ವಾಟ್ಸ್​ಆ್ಯಪ್​​ ಬಳಕೆದಾರರಿಗೆ ಗುಡ್​ ನ್ಯೂಸ್: ಸ್ಟೇಟಸ್​ ಅವಧಿ ಮಿತಿಯಲ್ಲಿ ಏರಿಕೆ…!​
ಮುಂಬೈನಲ್ಲಿ ವಾಸವಿದ್ದ ಮಗುವಿನ ತಾಯಿ ಉಮಾದೇವಿ ಮತ್ತು ಏಳು ಜನ ವಲಸೆ ಕಾರ್ಮಿಕರ ತಂಡ ಲಾಕ್​ಡೌನ್​ ಹಿನ್ನೆಲೆಯಲ್ಲಿ ತೆಲಂಗಾಣದ ನಾರಾಯಣಪೇಟ್‌ಗೆ ಕಾಲ್ನಡಿಗೆಯಲ್ಲಿ ಹೊರಟಿದ್ದರು. ಮಾರ್ಗ ಮಧ್ಯೆ ಕಲಬುರಗಿಯ ಕಮಲಾಪುರ ಪಟ್ಟಣದ ಬಳಿ ಸಾರ್ವಜನಿಕರಿಂದ ಅವರಿಗೆ ಆಹಾರ-ನೀರು ವಿತರಣೆ ಮಾಡಲಾಯಿತು.
ಈ ವೇಳೆ ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ್ ಮತ್ತಿಮೂಡ್ ಸ್ಥಳಕ್ಕೆ ಆಗಮಿಸಿ, ಪೊಲೀಸರ ಸಹಾಯದೊಂದಿಗೆ ಪಾಸ್ ವ್ಯವಸ್ಥೆ ಮಾಡಿ, ವಾಹನದ ಮೂಲಕ ಎಂಟು ಜನರನ್ನು ನಾರಾಯಣಪೇಟ್‌ಗೆ ತೆರಳಲು ಅವಕಾಶ ಮಾಡಿ ಮಾನವೀಯತೆ ಮೆರೆದರು.
ಇದನ್ನೂ ಓದಿ:ಮೊಬೈಲ್​​ ಬಿಟ್ಟು ಓದಿಕೋ ಎಂದಿದ್ದಕ್ಕೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯಿಂದ ದುಡುಕಿನ ನಿರ್ಧಾರ
ಕರೊನಾ ಸೃಷ್ಟಿಸಿರುವ ಬಿಕ್ಕಟ್ಟಿನಿಂದ ಇಂತಹ ಹಲವಾರು ಘಟನೆಗಳು ದೇಶಾದ್ಯಂತ ನಡೆಯುತ್ತಿದ್ದು, ಸರ್ಕಾರ ಈ ಬಗ್ಗೆ ಹೆಚ್ಚಿನ ಗಮನ ವಹಿಸಬೇಕು ಎಂಬುದು ಸಾರ್ವಜನಿಕರ ಕೂಗಾಗಿದೆ. ಸುಮಾರು 300 ಕಿ.ಮೀ ದೂರವನ್ನು ಮಗು ಮತ್ತು ಚೀಲವನ್ನು ಹೊತ್ತುಕೊಂಡೇ ಸಾಗಿದ್ದ ಮಹಾತಾಯಿಯನ್ನು ಕಂಡು ಸ್ಥಳೀಯರ ಮನ ಕರಗಿತು.(ದಿಗ್ವಿಜಯ ನ್ಯೂಸ್​)
‘ಶೂನ್ಯದಿಂದ 4.5ಲಕ್ಷದವರೆಗೆ…’ -ಇದು ಭಾರತದ ಇಚ್ಛಾಶಕ್ತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 2 =
Remember me
