ಮಂಗಳೂರು:ಈಕೆ ಬಾಳಲ್ಲಿ ದುರಂತದ ಮೇಲೆ ದುರಂತ ಎಂದರೂ ಸರಿಯೇ. ಏಕೆಂದರೆ ಮೊದಲ ಪತಿ ಸಾವಿಗೀಡಾದ ಬಳಿಕ ಇನ್ನೊಂದು ಮದುವೆಯಾದ ಈಕೆಗೆ ಮತ್ತೊಂದು ದುರಂತ ಕಾಡಿತ್ತು. ಎರಡನೇ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ನೊಂದ ತಾಯಿ, ಮಕ್ಕಳಿಬ್ಬರೊಂದಿಗೆ ಒಂದೇ ಕುಣಿಕಿಗೆ ಕೊರಳೊಡ್ಡಿದ್ದಾಳೆ.
ಇದನ್ನೂ ಓದಿ:ರಾಜ್ಯದ ಜನತೆಗೆ ರೈಲ್ವೇಯಿಂದ ಸಿಹಿಸುದ್ದಿ: ಇಲ್ಲೆಲ್ಲ ನಿಲ್ಲಲಿವೆ ಈ ರೈಲುಗಳು!
ಮಂಗಳೂರಿನ ಕೊಡಿಯಾಲ್​ಬೈಲಿನಲ್ಲಿ ಈ ಘಟನೆ ನಡೆದಿದೆ. ವಿಜಯಾ (33) ಆತ್ಮಹತ್ಯೆ ಮಾಡಿಕೊಂಡ ತಾಯಿ. ಈಕೆ ತನ್ನ ಮಕ್ಕಳಾದ ಶೋಭಿತಾ (4) ಹಾಗೂ ಯಜ್ಞಾ (12) ಜೊತೆ ಒಂದೇ ನೇಣಿಗೆ ಕೊರಳೊಡ್ಡಿದ್ದಳು. ಆದರೆ ಪುತ್ರಿ ಯಜ್ಞಾ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಇದನ್ನೂ ಓದಿ:ಒಂದೇ ಮನೆಯ ನಾಲ್ವರನ್ನು ಕೊಂದಿದ್ದ ಅಪ್ಪ-ಮಗನ ಬಂಧನ
ಪತಿ ಆರು ವರ್ಷಗಳ ಹಿಂದೆ ಮೃತಪಟ್ಟಿದ್ದರಿಂದ ವಿಜಯಾ ಇನ್ನೊಂದು ಮದುವೆಯಾಗಿದ್ದರು. ಆದರೆ ಎರಡನೇ ಪತಿ ಇತ್ತೀಚೆಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರಿಂದ ನೊಂದಿದ್ದ ವಿಜಯಾ ಇಬ್ಬರು ಹೆಣ್ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯಜ್ಞಾ ಕಾಲ ಬುಡದಲ್ಲಿ ಟೀಪಾಯಿ ಇದ್ದು ಆಕೆ ಅದರ ಆಧಾರ ಪಡೆದು ಜೀವರಕ್ಷಣೆಗಾಗಿ ಕೂಗಿಕೊಂಡಿದ್ದಳು. ತಕ್ಷಣ ಧಾವಿಸಿದ ಸ್ಥಳೀಯರು ಆಕೆಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಆದರೆ ತಾಯಿ ವಿಜಯಾ, ಮಗಳು ಶೋಭಿತಾ ಸಾವಿಗೀಡಾಗಿದ್ದರು.
16 ಸಲ ಚುಚ್ಚಿಕೊಂದ ಹುಚ್ಚುಪ್ರೇಮಿ; ಪ್ರೇಯಸಿಯ ಕೊಲ್ಲಲೆಂದೇ 2 ಚಾಕುಗಳನ್ನು ಖರೀದಿಸಿದ್ದ: ಆರೋಪಿ ಸಿಕ್ಕಿಬಿದ್ದಿದ್ದು ಹೇಗೆ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
