ತುಮಕೂರು‌:ಕ್ಯಾಂಟರ್​ ಲಾರಿ ಹಾಗೂ ಆಟೋ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತಾಯಿ ಮತ್ತು ಮಗಳು ದುರಂತ ಸಾವಿಗೀಡಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ತುಮಕೂರು ನಗರದ ಬಂಡಿಮನೆ ಕಲ್ಯಾಣ ಮಂಟಪದ ಬಳಿ ಈ ಘಟನೆ ನಡೆದಿದೆ. ತಾಯಿ ಶಾಂತಲಕ್ಷ್ಮಿ (30) ಹಾಗೂ ಮಗಳು ಚಿನ್ಮಯಿ (5) ಮೃತ ದುರ್ದೈವಿಗಳು. ಮೃತ ತಾಯಿ ಮತ್ತು ಮಗಳು ತುಮಕೂರು ನಗರದ ಕುಂಟಮ್ಮದ ತೋಟದ ನಿವಾಸಿಗಳು.
ಇದನ್ನೂ ಓದಿ:90ರ ವೃದ್ಧ ಸೇರಿದಂತೆ ಕುಟುಂಬದ 10 ಜನರ ಮೇಲೆ ದಾಖಲಾಯ್ತು ಲೈಂಗಿಕ ದೌರ್ಜನ್ಯ ಪ್ರಕರಣ!
ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಭೀಮಸಂದ್ರದಲ್ಲಿ ಸಂಬಂಧಿಕರ ಮದುವೆ ಮುಗಿಸಿ ಆಟೋದಲ್ಲಿ ನಾಲ್ವರು ತುಮಕೂರು ನಗರಕ್ಕೆ ಬರುತ್ತಿದ್ದರು. ಈ ವೇಳೆ ತುಮಕೂರು ಕಡೆಯಿಂದ ಹೋಗ್ತಿದ್ದ ಕ್ಯಾಂಟರ್ ಲಾರಿಯ ಬ್ರೇಕ್ ಕಟ್ ಆಗಿ ಆಟೋಗೆ ಡಿಕ್ಕಿ ಹೊಡೆದಿದೆ. ಪರಿಣಾಮ ತಾಯಿ ಮತ್ತು ಮಗಳು ಸ್ಥಳದಲ್ಲೆ ಮೃತಪಟ್ಟಿದ್ದಾರೆ.
ಮೃತ ಶಾಂತಲಕ್ಷ್ಮೀಯ ಪುತ್ರ ತನ್ಮಯ್ ಹಾಗೂ ಆಟೋ ಚಾಲಕ ಗಿರೀಶ್​ಗೆ ಗಂಭೀರ ಗಾಯವಾಗಿದೆ. ಗಾಯಾಳು ತನ್ಮಯ್​ಗೆ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಟೋಚಾಲಕ ಗಿರೀಶ್​ಗೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ತುಮಕೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ದಿಗ್ವಿಜಯ ನ್ಯೂಸ್​)
ವಿವಾಹಕ್ಕೂ ಮುನ್ನವೇ ಪ್ರಾಣಬಿಟ್ಟ ವರ: ಮದುವೆ ಮನೆಯಲ್ಲಿ ಶೋಕ

ತುಮಕೂರಿನ ಅಪ್ರಾಪ್ತೆ ಸಾವಿನ ಪ್ರಕರಣಕ್ಕೆ ಸ್ಫೋಟಕ ತಿರುವು: ಪೊಲೀಸ್ ತನಿಖೆಯಲ್ಲಿ ಭೀಕರತೆ ಬಯಲು

ಕೇಂದ್ರ ಸಚಿವ ಆರ್​ಕೆ ರಂಜನ್ ಸಿಂಗ್​​ ನಿವಾಸಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 − two =
Remember me
