ಮಂಡ್ಯ:ನನ್ನ ಪತ್ನಿ ಮತ್ತು ಮಗಳು ನಾಪತ್ತೆಯಾಗಿದ್ದಾರೆ, ಹುಡುಕಿಕೊಡಿ ಎಂದು ಆಕೆಯ ಗಂಡ ಪೊಲೀಸ್​ ಠಾಣೆ ಮೆಟ್ಟಿಲೇರಿದ ಎರಡು ದಿನದ ಬಳಿಕ ಅವರಿಬ್ಬರ ಶವ ನಾಲೆಯಲ್ಲಿ ಪತ್ತೆಯಾಗಿದೆ.
ಪಾಂಡವಪುರ ತಾಲೂಕಿನ ಅಮೃತಿ ಗ್ರಾಮದ ತಾಯಿ ಸಲೀಮಾ (36) ಮತ್ತು ಮಗಳು ಸಬಾನ (17) ಮೃತರು.
ಹೆಂಡತಿ ಮತ್ತು ಮಗಳು ಕಾಣೆಯಾದ ಬಗ್ಗೆ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಡಿ.14ರ ರಾತ್ರಿ ಸಲೀಮಾಳ ಪತಿ ಪ್ರಕರಣ ದಾಖಲಿಸಿದ್ದರು. ನಾಗಮಂಗಲ ತಾಲೂಕಿನ ಗಂಗವಾಡಿ ಸಮೀಪದ ನಾಲೆಯಲ್ಲಿ ಬುಧವಾರ ಮೃತ ದೇಹಗಳು ಪತ್ತೆಯಾಗಿವೆ.
ಕೌಟುಂಬಿಕ ಕಲಹಕ್ಕೆ ಮನನೊಂದು ಅವರಿಬ್ಬರೂ ಚಾಮರಾಜನಗರ-ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯ ನ್ಯಾಮನಹಳ್ಳಿ ಸಮೀಪದ ನಾಲೆಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ನಾಗಮಂಗಲ ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾ.ಪಂ.ಗೆ ಪತ್ನಿ ಅವಿರೋಧ ಆಯ್ಕೆ, ಸಂಭ್ರಮದಲ್ಲಿದ್ದ ಪತಿ ಮರುದಿನವೇ ಆತ್ಮಹತ್ಯೆ! ಕಾರಣ ಏನು?

ಕಾಂಗ್ರೆಸ್-ಬಿಜೆಪಿಯ ಕೂಸು ಜೆಡಿಎಸ್! ಮಿಠಾಯಿ ತೋರಿಸಿದವರ ಕಡೆ ಹೋಗುತ್ತೆ…

ಬೈಕ್​ನಲ್ಲಿ ಕುಳಿತು ನಿದ್ರೆಗೆ ಜಾರಿದ ತಾಯಿ-ಮಕ್ಕಳು ತರಗೆಲೆಯಂತೆ ರಸ್ತೆಗೆ ಉರುಳಿದರು! ಬೆಚ್ಚಿಬೀಳಿಸುತ್ತೆ ಈ ದೃಶ್ಯ

ಮಹಿಳಾ ಸಹೋದ್ಯೋಗಿಗಳ ಅಶ್ಲೀಲ ದೃಶ್ಯವನ್ನು ತನ್ನ ಪ್ರಿಯಕರನಿಗೆ ಕಳುಹಿಸುತ್ತಿದ್ದ ಪ್ರೇಯಸಿ! ಮುಂದೇನಾಯ್ತು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + twelve =
Remember me
