| ಶಶಿಕಾಂತ ಮೆಂಡೆಗಾರ ವಿಜಯಪುರ
ಕುಟುಂಬದಲ್ಲಿ ಯಾರಾದರೂ ಸಾವಿಗೀಡಾದಾಗ ಜನನ- ಮರಣ ಪ್ರಮಾಣ ಪತ್ರ ಪಡೆಯುವುದು ಕಡ್ಡಾಯ. ಆದರೆ ತಾಯಿ ನಿಧನರಾದ ಸಂಬಂಧ ಅವರ ಡೆತ್ ಸರ್ಟಿಫಿಕೇಟ್ ಕೊಡಿ ಎಂದು ಜನನ-ಮರಣ ನೋಂದಣಿ ಕಚೇರಿಗೆ ಮಗಳು ಅರ್ಜಿ ಸಲ್ಲಿಸಿದರೆ ಅಲ್ಲಿ ಕಾರ್ಯನಿರ್ವಹಿಸುವ ಮಹಾನುಭಾವ ಸತ್ತವರದ್ದು ಬಿಟ್ಟು, ಅರ್ಜಿ ಕೊಟ್ಟವರ ಮರಣ ಪ್ರಮಾಣ ಪತ್ರ ನೀಡಿ ಬೇಜವಾಬ್ದಾರಿತನ ಮೆರೆದಿದ್ದಾರೆ.
ಈ ಘಟನೆ ನಡೆದಿರುವುದು ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ದೇವರ ನಿಂಬರಗಿ ವೃತ್ತದ ಜನನ-ಮರಣ ನೋಂದಣಿ ವಿಭಾಗದ ವ್ಯಾಪ್ತಿಯಲ್ಲಿ.
ಇದನ್ನೂ ಓದಿ:ಜೆಡಿಎಸ್ ನಡೆಯಿಂದ ವರುಣದಲ್ಲಿ ಸಿದ್ದರಾಮಯ್ಯಗೆ ನೀರು ಕುಡಿದಷ್ಟೇ ಸುಲಭ ಗೆಲುವು ಸಾಧ್ಯತೆ!
ಮೂಲತಃ ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮದ ನಿವಾಸಿ, ಸದ್ಯ ವಿಜಯಪುರ ತಾಲೂಕಿನ ಹೊನ್ನಳ್ಳಿ ಗ್ರಾಮದಲ್ಲಿ ಗಂಡನೊಂದಿಗೆ ವಾಸವಾಗಿರುವ ಅರವತ್ತು ವರ್ಷದ ವೃದ್ಧೆ ಸಾವಿತ್ರಿ ತನ್ನ ತಾಯಿ ಸಾಂಯವ್ವ ಮರಣ ಪ್ರಮಾಣ ಪತ್ರ ಪಡೆಯಲು ದೇವರನಿಂಬರಗಿ ವೃತ್ತದ ಜನನ-ಮರಣ ನೋಂದಣಿ ವಿಭಾಗದಲ್ಲಿ ಮನವಿ ಸಲ್ಲಿಸಿದ್ದಾರೆ. ಸಂಬಂಧಿತ ಅಧಿಕಾರಿ 15 ದಿನ ಬಿಟ್ಟು ಮರಣ ಪ್ರಮಾಣ ಪತ್ರ ವಿತರಿಸಿದ್ದು, ಆದರೆ ಮೃತ ಸಾಂಯವ್ವ ಬದಲು ಮನವಿ ಕೊಟ್ಟ ಸಾವಿತ್ರಿಯವರ ಹೆಸರಲ್ಲಿ ಮರಣ ಪ್ರಮಾಣಪತ್ರ ನೀಡಲಾಗಿದೆ.
ಇದನ್ನು ಕಂಡ ಸಾವಿತ್ರಿ ಆಶ್ಚರ್ಯ ಕ್ಕೊಳಗಾಗಿ ತಾವಿನ್ನೂ ಬದುಕಿರುವಾಗಲೇ ತಮ್ಮದೇ ಮರಣ ಪತ್ರ ನೋಡಿ ವೇದನೆ ಅನುಭವಿಸಿದ್ದಾರೆ. ತನ್ನ ತಾಯಿ ಸಾಂಯವ್ವ ಹಾಗೂ ತಂದೆ ನಿಂಗಪ್ಪ ಅವರಿಗೆ ಈ ಸಾವಿತ್ರಿ ಒಬ್ಬಳೇ ಮಗಳಾಗಿದ್ದು, ಊರಲ್ಲಿ ತಂದೆ-ತಾಯಿ ಹೆಸರಿನಲ್ಲಿ 12 ಎಕರೆ ಜಮೀನಿದೆ. ಅವರ ನಿಧನ ಬಳಿಕ ಆ ಆಸ್ತಿಯನ್ನು ಕೊಳ್ಳೆ ಹೊಡೆಯಲು ಸಂಬಂಧಿಕರೇ ಅಧಿಕಾರಿಗಳೊಂದಿಗೆ ಶಾಮೀಲಾಗಿ ಹೀಗೆ ಮಾಡಿರಬಹುದೇ ಎಂಬ ಸಂಶಯ ಸಾವಿತ್ರಿ ಅವರನ್ನು ಕಾಡುತ್ತಿದೆಯಂತೆ. ಹೀಗಾಗಿ ಇಳಿ ವಯಸ್ಸಿನಲ್ಲಿ ಏನು ಮಾಡಬೇಕು ಎಂಬುದು ತಿಳಿಯದೆ ನ್ಯಾಯ ಕೊಡಿಸುವಂತೆ ಜಿಲ್ಲಾ ಕಾನೂನು ಸೇವೆಗಳ ಮೊರೆ ಹೋಗಿದ್ದಾರೆ.
ಇದನ್ನೂ ಓದಿ:ವೈಭವದ ಐತಿಹಾಸಿಕ ಕರಗ ಮಹೋತ್ಸವ; ದ್ರೌಪದಿ ದೇವಿಯ ಕರಗ ಕಣ್ತುಂಬಿಕೊಳ್ಳಲು ಬಂದ ಸಾವಿರಾರು ಭಕ್ತರು
ಮರಣ ಪ್ರಮಾಣ ಪತ್ರ ವಿತರಿಸುವ ಪ್ರಕ್ರಿಯೆಯಲ್ಲಿ ದಾಖಲಾತಿ ನಮೂದಿಸುವಾಗ ಕಣ್ತಪ್ಪಿನಿಂದ ಈ ಅಚಾತುರ್ಯ ಸಂಭವಿಸಿದೆ. ಪಂಚನಾಮೆ ಎಲ್ಲವೂ ಸಾಂಯವ್ವ ಅವರ ಹೆಸರಲ್ಲೇ ಆಗಿದೆ. ತಪ್ಪನ್ನು ಸರಿಪಡಿಸಿ, ಹೊಸ ದಾಖಲೆಯನ್ನು ಕೊಡಲಾಗುವುದು.
| ಸತೀಶ ಬಿರಾದಾರ ಗ್ರಾಮ ಲೆಕ್ಕಾಧಿಕಾರಿ, ದೇವರ ನಿಂಬರಗಿ, ಚಡಚಣ.
ಒಬ್ಬ ವ್ಯಕ್ತಿ ಬದುಕಿದ್ದಾಗಲೇ ಆತ ಸತ್ತಿದ್ದಾನೆ ಎಂದು ಸುಳ್ಳು ದಾಖಲೆ ಕೊಡುವುದು ಕ್ರಿಮಿನಲ್ ಅಪರಾಧ. ತಪ್ಪು ಯಾವುದೇ ಕಾರಣಕ್ಕೆ ಆಗಿದ್ದರೂ ತಪ್ಪು ತಪ್ಪೇ. ಈ ಪ್ರಕರಣದಲ್ಲಿ ಭಾಗಿಯಾಗಿರುವ ತಪ್ಪಿತಸ್ಥ ಅಧಿಕಾರಿಯನ್ನು ಅಮಾನತು ಮಾಡಬೇಕು.
| ಮಲ್ಲಿಕಾರ್ಜುನ ಭೃಂಗಿಮಠ, ಹಿರಿಯ ನ್ಯಾಯವಾದಿ
VIDEO| ಮದ್ಯದ ಅಮಲಿನಲ್ಲಿ ದೇವಸ್ಥಾನದ ಮುಂದೆಯೇ ಡಾನ್ಸ್​ ಮಾಡಿದ ASIಗೆ ಕಾದಿತ್ತು ಆಘಾತ!

ಕೆ.ಆರ್​. ಪೇಟೆ ಕಾಂಗ್ರೆಸ್​ ಟಿಕೆಟ್​: ಒಂದೇ ಕಲ್ಲಲ್ಲಿ ಮೂರು ಹಕ್ಕಿ ಹೊಡೆದ ಮಾಜಿ ಸಿಎಂ ಸಿದ್ದು!

ತಮ್ಮನ ಸಾವಿನ ನೋವಲ್ಲೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಅಕ್ಕ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:two × four =
Remember me
