ಚಾಮರಾಜನಗರ:ಪುಟ್ಟ ಆನೆಮರಿಗೆ ರಸ್ತೆಬದಿಯ ತಡೆಗೋಡೆ ದಾಟುವುದರ ಬಗ್ಗೆ ತಾಯಿಆನೆ ಪಾಠ ಹೇಳಿಕೊಡುತ್ತಿರುವ ವಿಡಿಯೋ ವೈರಲ್​ ಆಗಿದೆ.
ಆನೆ-ಮರಿಯಾನೆಯ ಆಪ್ತತೆಗೆ ಸಾಕ್ಷೀಕರಿಸುವ ಈ ಘಟನೆ ಚಾಮರಾಜನಗರ ಜಿಲ್ಲೆಯ ಗಡಿಯಲ್ಲಿರುವ ತಮಿಳುನಾಡಿನ ಗೂಡಲೂರು ಮತ್ತು ನೀಲಂಬೂರು ಮಾರ್ಗದ ರಸ್ತೆಯಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.ಇದನ್ನೂ ಓದಿರಿಈ ಮದುವೆಗೆ ಹೋಗಿದ್ದ 20ಕ್ಕೂ ಹೆಚ್ಚು ಜನರಿಗೆ ಕರೊನಾ ಪಾಸಿಟಿವ್​!
ಹೆಣ್ಣಾನೆಯೊಂದು ತನ್ನ ಎರಡು ಮರಿಗಳೊಂದಿಗೆ ರಸ್ತೆದಾಟಿದೆ. ಈ ವೇಳೆ ಒಂದು ಮರಿ ಸುಲಭವಾಗಿ ರಸ್ತೆ ತಡೆಗೋಡೆ‌ ದಾಟಿ ತಾಯಿಯೊಂದಿಗೆ ಹೆಜ್ಜೆ ಇಟ್ಟಿದೆ. ಆದರೆ ಚಿಕ್ಕ ಮರಿಯಾನೆಗೆ ಎಷ್ಟೇ ಪ್ರಯತ್ನ ಪಟ್ಟರೂ ತಡೆಗೋಡೆ‌ ದಾಟಲು‌ ಸಾಧ್ಯವಾಗಿಲ್ಲ.‌ ಇದನ್ನು ಗಮನಿಸಿದ ತಾಯಿ ಆನೆ ಮತ್ತೊಮ್ಮೆ ರಸ್ತೆಗಿಳಿದು‌ ಮರಿಯ ಮುಂದೆ ತನ್ನ ಎರಡು ಮುಂಗಾಲುಗಳನ್ನು ತಡೆಗೋಡೆ ಮೇಲೆ ಇಟ್ಟು ಗೋಡೆ ದಾಟುವ ಪಾಠ ಹೇಳಿಕೊಟ್ಟಿದೆ. ಆದರೆ ಮರಿ ಆನೆಗೆ ಇದು ಸಾಧ್ಯವಾಗದೆ ಇದ್ದಾಗ ತನ್ನ ಸೊಂಡಿಲಿನಿಂದ ತಡೆಗೋಡೆ ದಾಟಿಸಿ ಕಾಡಿನತ್ತ ಕರೆದುಕೊಂಡು ಹೋಗಿದೆ.
ಇದನ್ನೂ ಓದಿರಿಕೋವಿಡ್​ಗೆ ಔಷಧಿ ಕೊಡಿಸುವ ನೆಪದಲ್ಲಿ ಅತ್ಯಾಚಾರ! ಸೋಂಕಿನ ಹೆಸರಲ್ಲಿ ಕಾಮುಕರ ಅಟ್ಟಹಾಸ
ಆನೆಗಳು ರಸ್ತೆ ದಾಟುವವರೆಗೂ ಕಾದು ನಿಂತಿದ್ದ ವಾಹನ ಸವಾರರು ಈ ಘಟನೆಯನ್ನು ವಿಡಿಯೋ ಮಾಡಿ‌ ಸಾಮಾಜಿಕ ಜಾಲತಾಣಗಳಿಗೆ ಅಪ್​ಲೋಡ್ ಮಾಡಿದ್ದಾರೆ.
ಸಕಲ ಜೀವರಾಶಿಗಳಲ್ಲೂ ಕಾಣಬಹುದಾದ ತಾಯಿ ಪ್ರೀತಿಯನ್ನು ತೋರ್ಪಡಿಸಿದ ಈ ವಿಡಿಯೋವನ್ನು ಲಕ್ಷಾಂತರ ಜನ ವೀಕ್ಷಿಸಿದ್ದಾರೆ. “ತಾಯಿ-ಮಗು”ವಿನ ಆಪ್ತತೆ ಬಿಚ್ಚಿಡುವ ಈ ವಿಡಿಯೋ ಜಾಲತಾಣದಲ್ಲಿ ಸಖತ್​ ವೈರಲ್ ಆಗಿದೆ.
https://www.facebook.com/VVani4U/videos/1417113188677603/?v=1417113188677603
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + nineteen =
Remember me
