ಬೆಂಗಳೂರು:ರಾಜ್ಯದಲ್ಲಿ ಮಾತ್ರವಲ್ಲ ದೇಶದಲ್ಲಿ ಕೂಡ ಕುಸಿದು ಬಿದ್ದು ಜನರು ಸಾವಿಗೀಡಾಗುತ್ತಿರುವ ಪ್ರಕರಣಗಳು ಮೇಲಿಂದ ಮೇಲೆ ಸಂಭವಿಸುತ್ತಿದ್ದರೂ ಆ ಕುರಿತ ಚರ್ಚೆ-ಅಧ್ಯಯನಗಳು ನಡೆಯುತ್ತಿಲ್ಲ. ಇದರ ನಡುವೆಯೇ ಅಂಥ ಪ್ರಕರಣಗಳು ಮುಂದುವರಿದಿದ್ದು, ಬಾಣಂತಿಯೊಬ್ಬರು ಮಗುವಿಗೆ ಹಾಲು ಕುಡಿಸುವಾಗ ಕುಸಿದು ಬಿದ್ದು ಸಾವಿಗೀಡಾಗಿದ್ದಾರೆ.
ಉಡುಪಿ ಜಿಲ್ಲೆಯ ಕೋಟದ ಗುಣವತಿ (39) ಸಾವಿಗೀಡಾದ ಮಹಿಳೆ. ಇತ್ತೀಚೆಗಷ್ಟೇ ಮಗುವಿಗೆ ಜನ್ಮ ನೀಡಿದ್ದ ಇವರು ನಿನ್ನೆ ಬೆಳಗ್ಗೆ ಎದೆಹಾಲು ಕುಡಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಕುಸಿದುಬಿದ್ದಿದ್ದರು. ತೀವ್ರ ಅಸ್ವಸ್ಥ ಸ್ಥಿತಿಯಲ್ಲಿದ್ದ ಇವರನ್ನು ಕೂಡಲೇ ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗಮಧ್ಯೆ ಸಾವಿಗೀಡಾಗಿದರು.
ಉಡುಪಿಯ ತಾಯಿ ಮಕ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಗುಣವತಿ ಡಿ.23ರಂದು ಗಂಡು ಮಗುವಿನ ಜನ್ಮ ನೀಡಿದ್ದರು. ಅಲ್ಲಿ 21 ದಿನಗಳ ಆರೈಕೆಯ ನಂತರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಮನೆಗೆ ಬಂದಿದ್ದರು. ಒಂದು ವಾರದ ಹಿಂದೆ ಇವರು ವಾಂತಿ-ಭೇದಿಯಿಂದ ಬಳಲಿದ್ದರು ಎನ್ನಲಾಗಿದೆ. ಈಗ ಹಠಾತ್ ಸಾವಿನ ಹಿನ್ನೆಲೆಯಲ್ಲಿ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಳಿಯನನ್ನೇ ಅಪಹರಿಸಿ ಮಾನಸಿಕ ಅಸ್ವಸ್ಥ ಎಂದು ಬಿಂಬಿಸಿದ ಅತ್ತೆ; ಕಾಂಗ್ರೆಸ್ ನಾಯಕಿ ದಿವ್ಯಪ್ರಭಾ ಮತ್ತು ಕುಟುಂಬಸ್ಥರ ವಿರುದ್ಧ ಕೇಸ್​
ಚುನಾವಣೆ ಮುಗಿಯುವವರೆಗೂ ರಾಜಕೀಯ ಪ್ರೇರಿತ ಕ್ರಿಕೆಟ್​ ಟೂರ್ನಮೆಂಟ್​​ಗಳಿಗೆ ನಿಷೇಧ; ಪಂದ್ಯಾವಳಿ ನಡೆಸಿದ್ರೆ ಕೇಸ್​!
ಡಿ.ಕೆ.ರವಿ ಹೆಸರು ಉಲ್ಲೇಖಿಸಿ ಮತ್ತೆ ರೋಹಿಣಿಗೆ ಸವಾಲೆಸೆದ ರೂಪಾ!
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:two + 7 =
Remember me
