ಮಂಡ್ಯ:ಸಾಮಾನ್ಯವಾಗಿ ಹೆಚ್ಚಿನ ಕುಟುಂಬಗಳಲ್ಲಿ ಅತ್ತೆ-ಸೊಸೆ ಹಾವು ಮುಂಗುಸಿ ಥರ ಕಿತ್ತಾಡುತ್ತಾರೆ. ಸೊಸೆ ಮಾಡಿದ ಕೆಲಸ ಅತ್ತೆಗೆ ಮತ್ತು ಅತ್ತೆ ಮಾಡಿದ ಕೆಲಸ ಸೊಸೆಗೆ ಇಷ್ಟವಾಗುವುದಿಲ್ಲ. ಇಬ್ಬರ ನಡುವಿನ ಮುಸುಕಿನ ಗುದ್ದಾಟದಿಂದಾಗಿ ಸಂಸಾರವೆಂಬ ಸಾಗರದಲ್ಲಿ ಕೆಲವೊಮ್ಮೆ ಅಲ್ಲೋಲ-ಕಲ್ಲೋಲಗಳು ಉಂಟಾಗುತ್ತವೆ. ಅತ್ತೆ-ಸೊಸೆ ಇಬ್ಬರು ಅಮ್ಮ-ಮಗಳ ರೀತಿ ಇರುವುದು ತುಂಬಾ ವಿರಳ.
ಬದುಕಿರುವಾಗ ಅಮ್ಮ-ಮಗಳ ರೀತಿ ಅನ್ಯೋನ್ಯವಾಗಿ ಜೀವನ ಸಾಗಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದ ಅತ್ತೆ-ಸೊಸೆ ಇಬ್ಬರು ಇದೀಗ ಸಾವಿನಲ್ಲೂ ಒಂದಾಗಿರುವ ಕರುಣಾಜನಕ ಘಟನೆ ಮಂಡ್ಯದ ನಾಗಮಂಗಲ ತಾಲೂಕಿನ ಕಾಡು ಅಂಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ಸೊಸೆ ಸುಶೀಲಾ (42), ಮೃತಪಟ್ಟ ಸುದ್ದಿ ಕೇಳಿ ಅತ್ತೆ ಹುಚ್ಚಮ್ಮ(75) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಹುಚ್ಚಮ್ಮಗೆ ಐವರು ಗಂಡು ಮಕ್ಕಳು. ಎರಡನೇ ಮಗನ ಹೆಂಡತಿಯಾಗಿದ್ದ ಸುಶೀಲಾಗೆ ಇಬ್ಬರು ಮಕ್ಕಳಿದ್ದಾರೆ.
ಹುಚ್ಚಮ್ಮ ಮತ್ತು ಸುಶೀಲಾ ಅತ್ತೆ-ಸೊಸೆಯಂತೆ ಇರದೆ ತಾಯಿ‌-ಮಗಳಂತೆ ಇದ್ದರು. ಆದರೆ, ನಿನ್ನೆ (ನ.23) ಸಂಜೆ ಸುಶೀಲಾ ಅವರು ದಿಢೀರ್ ಸಾವಿಗೀಡಾದ ಸುದ್ದಿ ಕೇಳಿದ ಹುಚ್ಚಮ್ಮ ತಕ್ಷಣ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಅತ್ತೆ-ಸೊಸೆ ಸಾವಿನಿಂದ ಇಡೀ ಕುಟುಂಬ ಹಾಗೂ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಇಂದೇ ಇಬ್ಬರ ಅಂತ್ಯಕ್ರಿಯೆ ಒಂದೇ ಕಡೆ ನಡೆಯಲಿದೆ.
ಕಂಬಳ ಓಟಗಾರರ ವೇಗ ಜಗತ್ತಿನ ಶರವೇಗದ ಓಟಗಾರ ಉಸೇನ್​ ಬೋಲ್ಟ್​ರನ್ನೂ ಮೀರಿಸುತ್ತೆ!

ಭಾರತದಲ್ಲಿರುವ ರಾಯಭಾರ ಕಚೇರಿಯನ್ನು ಶಾಶ್ವತವಾಗಿ ಮುಚ್ಚಿದ ಆಫ್ಘನ್‌; ಕಾರಣ ಬಹಿರಂಗ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four − one =
Remember me
