ಬಿಹಾರ:ದಿನದ ಹೆಚ್ಚು ಅವಧಿ ಫೇಸ್​ಬುಕ್(Facebook), ಇನ್ಸ್ಟಾಗ್ರಾಮ್(Instagram) ನೋಡುವ ಚಟ ಹೊಂದಿದ್ದ ನವವಿವಾಹಿತೆ, ತನ್ನ ಅತ್ತೆಯ ಮಾತಿಗೆ ಬೇಸತ್ತು ಪತಿಯ ಮನೆಯನ್ನೇ ತೊರೆದಿರುವ ಘಟನೆ ಬಿಹಾರದಲ್ಲಿ ವರದಿಯಾಗಿದೆ.
ಬಿಹಾರದ, ಹಜ್ಜ್​ಪುರದಲ್ಲಿರುವ ತನ್ನ ಪತಿಯ ಮನೆಗೆ ಆಗ ತಾನೇ ಹೊಸದಾಗಿ ಮದುವೆಯಾಗಿ ಬಂದಿದ್ದ ಮಹಿಳೆ, ಫೇಸ್​ಬುಕ್ ಮತ್ತು ಇನ್ಸ್ಟಾಗ್ರಾಮ್ ನೋಡುವ ಚಟವನ್ನು ಹೊಂದಿದ್ದಳು. ದಿನದ ಹೆಚ್ಚಿನ ಅವಧಿ ಸ್ಮಾರ್ಟ್​ಫೋನ್ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಸಮಯ ಕಳೆಯುತ್ತಿದ್ದ ಸೊಸೆಯನ್ನು ಕಂಡು ಅತ್ತೆ ಗದರುತ್ತಿದ್ದರು! ಅತ್ತೆಯ ಕಾಟ ತಾಳಲಾರದ ಸೊಸೆ ಸದ್ಯ ಪತಿಯ ಮನೆ ತೊರೆದಿದ್ದಾಳೆ.
ಇದನ್ನೂ ಓದಿ:ಶಾರ್ಟ್ಸ್-ರೀಲ್ಸ್ ಮಾಯಾಲೋಕ!; ಇದು ತಳವಿರದ ಪಾತಾಳ, ಆಳಕ್ಕಿಳಿದಷ್ಟೂ ಕರಾಳ..
ಮಹಿಳೆಯನ್ನು ಸಬಾ ಕಾತೂನ್ ಎಂದು ಗುರುತಿಸಲಾಗಿದ್ದು, 15 ದಿನಗಳ ಹಿಂದಷ್ಟೇ ಇಲಿಯಾಸ್ ಎಂಬ ಯುವಕನೊಂದಿಗೆ ಮದುವೆಯಾಗಿದ್ದಳು. ಮದುವೆ ಮುಗಿದರೂ ಮದುವೆ ಸಂಭ್ರಮಗಳು ಇನ್ನು ಮುಗಿದಿರಲಿಲ್ಲ. ಅಷ್ಟರೊಳಗೆ ಎರಡು ಕುಟುಂಬಗಳ ನಡುವೆ ದೊಡ್ಡ ಜಟಾಪಟಿಯೇ ನಡೆದಿದೆ!
ಸ್ಮಾರ್ಟ್​ಫೋನ್ ಉಪಯೋಗಿಸುವುದನ್ನು ತಡೆಯುತ್ತಿದ್ದ ಅತ್ತೆಯ ವರ್ತನೆಗೆ ಬೇಸತ್ತ ಮಹಿಳೆ, ತನ್ನ ಸಹೋದರ ಮತ್ತು ಅಮ್ಮನಿಗೆ ವಿಚಾರವನ್ನು ಮುಟ್ಟಿಸಿದ್ದಾಳೆ. ಈ ಬಗ್ಗೆ ಪ್ರಶ್ನಿಸಲು ಅಕ್ಕನ ಗಂಡನ ಮನೆಗೆ ಬಂದ ಸಹೋದರ, ಕುಟುಂಬದವರಿಗೆ ಗನ್ ತೋರಿಸಿ ಬೆದರಿಕೆ ಹಾಕಿದ್ದಾನೆ. ಎರಡು ಕುಟುಂಬದ ನಡುವೆ ಮಾತಿನ ಚಕಮಕಿ ತಾರಕಕ್ಕೇರಿದ್ದೇ ತಡ ಪೊಲೀಸರು ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಇದನ್ನೂ ಓದಿ:ಮದ್ವೆಯಾದ ಎರಡೇ ತಿಂಗಳಿಗೆ ನವವಿವಾಹಿತೆಯ ಬಾಳಿಗೆ ಕೊಳ್ಳಿಯಿಟ್ಟ ರೀಲ್ಸ್​ ವಿಡಿಯೋ!
ಜಗಳವನ್ನು ಶಾಂತಗೊಳಿಸಿದ ಪೊಲೀಸರು, ಎರಡು ಕುಟುಂಬವನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ವಿಚಾರಣೆಯಲ್ಲಿ ಮಾತನಾಡಿದ ಮಹಿಳೆ, “ನಾನು ಗಂಡನ ಮನೆಯಲ್ಲಿರಲು ಬಯಸುವುದಿಲ್ಲ! ನನ್ನ ಗಂಡ ಮತ್ತು ಅತ್ತೆಯಿಂದ ನಾನು ದೂರ ಉಳಿಯಲು ಬಯಸುತ್ತೇನೆ ಎಂದು ಹೇಳಿದ್ದಾಳೆ. ಜೊತೆಗೆ ನನಗೆ ಮೊಬೈಲ್ ಬಿಟ್ಟಿರಲು ಅಸಾಧ್ಯ” ಎಂದು ಒತ್ತಿ ಹೇಳಿದ್ದಾಳೆ. ಮಹಿಳೆ ಆಕೆಯ ತಾಯಿಯೊಡನೆ ತವರು ಮನೆಗೆ ಹೋದರು ಎಂದು ಪೊಲೀಸರು ತಮ್ಮ ಮಾಹಿತಿಯಲ್ಲಿ ತಿಳಿಸಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × 2 =
Remember me
