ಕಲಬುರಗಿ:ಅತ್ತೆ-ಸೊಸೆ ನಡುವಿನ ಜಗಳ-ಭಿನ್ನಾಭಿಪ್ರಾಯಗಳೇನೂ ಹೊಸದಲ್ಲ. ಬಹುತೇಕ ಎಲ್ಲ ಕಡೆಯೂ ಕಂಡುಬರುವಂಥದ್ದೇ. ಆದರೆ ಅದರ ತೀವ್ರತೆ ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಇರುತ್ತದೆ. ಅಂಥದ್ದೇ ಒಂದು ಅತ್ತೆ-ಸೊಸೆ ಜಗಳದ ವಿಚಾರ ಇದೀಗ ಬೀದಿಗೆ ಬಂದಿದ್ದಷ್ಟೇ ಅಲ್ಲ, ಜಿಲ್ಲಾಧಿಕಾರಿಯವರೆಗೂ ತಲುಪಿದೆ.
ಕಲಬುರಗಿ ಜಿಲ್ಲೆಯಲ್ಲಿ ಅಂಥದ್ದೊಂದು ಅತ್ತೆ-ಸೊಸೆ ಭಿನ್ನಾಭಿಪ್ರಾಯ ಕಂಡುಬಂದಿದೆ. ಕಲಬುರಗಿ ಜಿಲ್ಲಾಧಿಕಾರಿ ಯಶವಂತ್ ಗುರುಕರ್ ಅವರು ಕೈಗೊಂಡ ಗ್ರಾಮವಾಸ್ತವ್ಯ ಸಂದರ್ಭದಲ್ಲಿ ಈ ಅತ್ತೆಯೊಬ್ಬರ ಸಂಕಷ್ಟ ಅನಾವರಣಗೊಂಡಿದೆ. ಜೇವರ್ಗಿ ತಾಲೂಕಿನ ಗಂವ್ಹಾರ ಗ್ರಾಮದಲ್ಲಿ ಜಿಲ್ಲಾಧಿಕಾರಿ ವಾಸ್ತವ್ಯ ಹೂಡಿದ್ದಾಗ ಅತ್ತೆಯೊಬ್ಬರು ತಮ್ಮ ಅಹವಾಲು ಸಲ್ಲಿಸಿದ್ದಾರೆ.
ಸ್ಥಳೀಯ ನಿವಾಸಿ ಕಾಳಮ್ಮ ಎಂಬಾಕೆ ತನ್ನ ಸೊಸೆ ಹಿಂಸೆ ನೀಡುತ್ತಿದ್ದಾಳೆ, ಏನು ಮಾಡಬೇಕು ಸಾಹೇಬ್ರೇ ಎಂದು ಜಿಲ್ಲಾಧಿಕಾರಿಯವರ ಬಳಿ ಅಲವತ್ತುಕೊಂಡಿದ್ದಾರೆ. ನನಗೆ ಕಣ್ಣು ಕಾಣುವುದಿಲ್ಲ, ಸೊಸೆ ಮನೆಯಿಂದ ಹೊರ ಹಾಕುತ್ತಿದ್ದಾಳೆ ಎಂದು ಅವರು ಸಂಕಷ್ಟ ತೋಡಿಕೊಂಡಿದ್ದಾರೆ. ತನ್ನ ಸಮಸ್ಯೆ ಬಗೆಹರಿಸಿ ಅಂತ ಕೈ ಮುಗಿದ ಕಾಳಮ್ಮನ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ, ಆಕೆಯ ಕಣ್ಣಿನ ಆಪರೇಷನ್​ಗೆ ವ್ಯವಸ್ಥೆ ಮಾಡಿ ಎಂದು ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
‘ಡಾ.ಬ್ರೋ’ಗೆ ರಾಜ್ಯೋತ್ಸವ ಪ್ರಶಸ್ತಿ ನೀಡುವಂತೆ ಕನ್ನಡಿಗರ ಆಗ್ರಹ; ಏನಂತಾರೆ ‘ನಮಸ್ಕಾರ ದೇವರು’?

ಏಳನೇ ವೇತನ ಆಯೋಗ ರಚನೆಗೆ ಸಿಎಂ ಅನುಮೋದನೆ; ಮೂವರು ಸದಸ್ಯರ ನೇಮಕ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − three =
Remember me
