ಬೆಳಗಾವಿ:ಆಟೋದಲ್ಲಿ ಪತಿ ಜತೆಗೇ ಬಂದಿದ್ದ ಪತ್ನಿ, ಬಳಿಕ ಬಾಡಿಗೆ ಹಣ ಕೊಡಲು ಗಂಡ ಚಿಲ್ಲರೆ ತರಲು ಹೋಗಿ ಬರುವಷ್ಟರಲ್ಲಿ ಆಕೆ ಮಗನೊಂದಿಗೆ ಕಣ್ಮರೆಯಾಗಿದ್ದಾಳೆ. ಇಂಥದ್ದೊಂದು ಪ್ರಕರಣ ಬೆಳಗಾವಿ ಜಿಲ್ಲೆಯಲ್ಲಿ ಸಂಭವಿಸಿದೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ಈ ಪ್ರಕರಣ ನಡೆದಿದ್ದು, ರುದ್ರವ್ವ ಬಸವರಾಜ್ ಬನ್ನೂರು (30) ಮತ್ತು ಆಕೆಯ ಪುತ್ರ ಶಿವಲಿಂಗಪ್ಪ ಬನ್ನೂರ (2) ನಾಪತ್ತೆಯಾದವರು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ರುದ್ರವ್ವ ತನ್ನ ಎರಡು ವರ್ಷದ ಪುತ್ರನ ಜೊತೆಗೆ ಇಡಗುಂಡಿಯಲ್ಲಿನ ತವರು ಮನೆಯಲ್ಲಿ ವಾಸವಿದ್ದಳು. ಆಕೆಯನ್ನು ಮನವೊಲಿಸಿದ್ದ ಬಸವರಾಜ್ ಆಕೆಯನ್ನು ರಾಮದುರ್ಗಕ್ಕೆ ಕರೆದುಕೊಂಡು ಬಂದಿದ್ದ. ಇಲ್ಲಿ ಆಟೋ ಬಾಡಿಗೆ ಕೊಡಲು ಬಸವರಾಜ್ ಚಿಲ್ಲರೆ ತರಲು ಹೋದಾಗ ಪುತ್ರನ ಜೊತೆಗೆ ರುದ್ರವ್ವ ಪಕ್ಕದ ನದಿಗೆ ಹಾರಿದ್ದಾಳೆ.
ಪಟ್ಟಣದ ವೆಂಕಟೇಶ್ವರ ದೇವಸ್ಥಾನದ ಪಕ್ಕದ ಮಲಪ್ರಭಾ ನದಿಗೆ ಪುತ್ರನೊಂದಿಗೆ ಈಕೆ ಹಾರಿದ್ದಾಳೆ. ತಾಯಿ-ಮಗು ನದಿಗೆ ಹಾರಿರುವುದನ್ನು ನೋಡಿದ ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ನದಿಯ ಪಕ್ಕದಲ್ಲಿರುವ ಚಪ್ಪಲಿ ನನ್ನ ಪತ್ನಿಯದ್ದು ಎಂದು ಬಸವರಾಜ್ ಮಾಹಿತಿ ನೀಡಿದ್ದು, ಅವರಿಬ್ಬರೂ ನದಿಗೆ ಹಾರಿರುವುದನ್ನು ಖಚಿತ ಪಡಿಸಿದೆ. ಸ್ಥಳಕ್ಕೆ ರಾಮದುರ್ಗ ಪೊಲೀಸರು ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿದ್ದು, ತಾಯಿ-ಮಗುವಿಗೆ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಸ್ನೇಹಿತನ ಜತೆ ಸೇರಿ ಗಂಡನ ಕೊಂದಾಕೆ ತಮ್ಮನಿಂದಲೇ ಕೊಲೆಯಾದ್ಲು; ಆಕೆಯನ್ನು ಕೊಂದು ಸಹೋದರ ಆತ್ಮಹತ್ಯೆ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + eighteen =
Remember me
