ಬಾಗಲಕೋಟೆ:ಅತ್ಯಂತ ದುರಂತ ಎನ್ನುವಂಥ ಪ್ರಕರಣವೊಂದು ನಡೆದಿದೆ. ಒಬ್ಬ ಮಗನಿದ್ದರೂ ಇನ್ನೊಂದು ಗಂಡು ಮಗುವಾಗಿಲ್ಲ ಎಂದು ಮಹಿಳೆಯೊಬ್ಬಳು ಮೂವರು ಮಕ್ಕಳ ಸಹಿತ ಬಾವಿಗೆ ಹಾರಿದ್ದು, ಕೊನೆಗೆ ಮೂವರು ಮಕ್ಕಳೂ ಸಾವಿಗೀಡಾಗಿದ್ದು, ತಾಯಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಕುಂಬಾರಹಳ್ಳದಲ್ಲಿ ಈ ಪ್ರಕರಣ ನಡೆದಿದೆ. ಸಂಗೀತಾ ಗುಡೆಪ್ಪನವರ್ ಎಂಬಾಕೆ ಬದುಕುಳಿದ ತಾಯಿ. ಈಕೆಯ 17 ದಿನಗಳ ಹೆಣ್ಣು ಮಗು ಸೌಜನ್ಯ, ಮಗ ಶ್ರೀಶೈಲ (5), ಮಗಳು ಶ್ರಾವಣಿ (3) ಸಾವಿಗೀಡಾಗಿದ್ದಾರೆ.
ಇದನ್ನೂ ಓದಿ:ಚಂದ್ರಯಾನ-3 ಲ್ಯಾಂಡಿಂಗ್​ ಆದ ದಿನವನ್ನು ‘ಇಸ್ರೋ ದಿನ’ ಎಂದು ಘೋಷಿಸಿ: ಸರ್ಕಾರಕ್ಕೆ ಒತ್ತಾಯ
ಇತ್ತೀಚೆಗೆ ಹೆರಿಗೆ ಆಗಿದ್ದ ಸಂಗೀತಾಗೆ ಮೂರನೇ ಮಗು ಗಂಡೇ ಆಗಬೇಕು ಎಂಬ ಆಸೆ ಇತ್ತು. ಆದರೆ 17 ದಿನಗಳ ಹಿಂದೆ ಹೆಣ್ಣು ಮಗು ಜನಿಸಿತ್ತು. ಇದರಿಂದ ತೀವ್ರವಾಗಿ ಮನನೊಂದ ಈಕೆ ಮಗು ಸೇರಿ ಮೂವರು ಮಕ್ಕಳೊಂದಿಗೆ ಹೊಲದಲ್ಲಿದ್ದ ಬಾವಿಗೆ ಹಾರಿದ್ದಳು.
ಇದನ್ನೂ ಓದಿ:ವಿಶ್ವ ಚಾಂಪಿಯನ್​ಷಿಪ್​ನಲ್ಲಿ ಸ್ಪರ್ಧಿಸಲಿರುವ ಭಾರತೀಯ ಕುಸ್ತಿಪಟುಗಳು ಭಾರತವನ್ನು ಪ್ರತಿನಿಧಿಸುವಂತಿಲ್ಲ: ಕಾರಣ ಇದು!
ಪತಿ ಹನಮಂತ ಗುಡೆಪ್ಪನವರ್​ ತಕ್ಷಣ ರಕ್ಷಣೆಗೆ ಧಾವಿಸಿದ್ದರಿಂದ ಸಂಗೀತಾ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಮಕ್ಕಳನ್ನು ರಕ್ಷಿಸಲು ತಂದೆ ಹರಸಾಹಸ ಪಟ್ಟಿದ್ದರೂ ಸಾಧ್ಯವಾಗಿಲ್ಲ. ಮಕ್ಕಳನ್ನ ಬಾವಿಗೆ ತಳ್ಳಿದ್ದ ಹಿನ್ನೆಲೆಯಲ್ಲಿ ತಾಯಿ ಸಂಗೀತಾ ವಿರುದ್ಧ ಜಮಖಂಡಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ. ಸ್ಥಳಕ್ಕೆ ಎಸ್​ಪಿ ಜಯಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

100 ಕೋಟಿ ರೂ. ಚೆಕ್​ ದೇಣಿಗೆಯಾಗಿ ಕೊಟ್ಟ ಭಕ್ತ; ಆಮೇಲಿನ ಸಂಗತಿ ಮೂಡಿಸಿತು ಅಚ್ಚರಿ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 4 =
Remember me
