ಬೆಂಗಳೂರು:ತಾಯಿಯೊಬ್ಬಳು ತನ್ನ ಹತ್ತು ವರ್ಷದ ಅಂಗವಿಕಲ ಮಗಳನ್ನು ಕೊಲೆ ಮಾಡಿ ಕೊನೆಗೆ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆದರೆ ಆಕೆ ಬದುಕುಳಿದಿದ್ದು, ಈಗ ಪರಿತಪಿಸುವಂತಾಗಿದೆ. ನಗರದ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ತಾಯಿ ಸುಮಾ ಎಂಬಾಕೆ ತನ್ನ 10 ವರ್ಷದ ವಿಕಲಚೇತನ ಪುತ್ರಿ ಪ್ರಿಯಾಂಕಾಳನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಳು. ಫ್ಯಾನ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಕೆ ಬದುಕುಳಿದಿದ್ದಾಳೆ.
ಒಂದು ವರ್ಷದ ಹಿಂದೆ ಪತಿ ಹಾಗೂ ಮೊದಲನೇ ಮಗುವನ್ನ ಕಳೆದುಕೊಂಡಿದ್ದ ಸುಮಾ ಖಿನ್ನತೆಗೆ ಒಳಗಾಗಿದ್ದಳು. ಜತೆಗಿದ್ದ ಎರಡನೇ ಪುತ್ರಿ ಅಂಗವಿಕಲಳಾದ್ದರಿಂದ ಮತ್ತಷ್ಟು ನೊಂದಿದ್ದಳು. ಹೀಗಾಗಿ ಮಗುವನ್ನ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಬದುಕುಳಿದಿರುವ ಸುಮಾಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಬ್ಯಾಡರಹಳ್ಳಿ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಗುಟ್ಟಾಗಿ ಸೊಸೆಯ ಬೆಡ್​ರೂಮ್​ಗೆ ಹೋಗುತ್ತಿದ್ದ ಅತ್ತೆ; ಪ್ರೆಗ್ನೆನ್ಸಿ ಟೆಸ್ಟ್​ ಪಾಸಿಟಿವ್ ಪತ್ತೆ!; ನಿಜಕ್ಕೂ ಆಗಿದ್ದೇನು?

ಅಭಿಮಾನಿಗಳ ಅತಿರೇಕ: ಎಲ್ಲ ಫ್ಯಾನ್ಸ್​​ಗೆ ನಟಿ ರಮ್ಯಾ ಕಿವಿಮಾತು, ನಟರಿಗೆ ಸಲಹೆ; ಕೆಲ ಖಾತೆಗಳ ಬ್ಲಾಕ್​ ಮಾಡಲು ಮನವಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + seventeen =
Remember me
