ಕೋಲಾರ:ಮುಳಬಾಗಿಲು ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಇಬ್ಬರು ಮಕ್ಕಳಿಗೆ ತಾಯಿಯೇ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿರುವ ಅಮಾನವೀಯ ಘಟನೆ ನಿನ್ನೆ ತಡರಾತ್ರಿ(ಮಂಗಳವಾರ) ನಡೆದಿದ್ದು, ಓರ್ವ ಪುತ್ರಿ ಸುಟ್ಟುಕಲಾಗಿದ್ದು, ಮತ್ತೊಬ್ಬ ಪುತ್ರಿಯ ಸ್ಥಿತಿ ಚಿಂತಾಜನಕವಾಗಿದೆ.
ಬುಧವಾರ ಬೆಳಗ್ಗೆ ವಾಯುವಿಹಾರಕ್ಕೆಂದು ಅಂಜನಾದ್ರಿ ಬೆಟ್ಟದ ಬಳಿ ಜನ ಹೋದಾಗ ಚೀರಾಡುವ ಶಬ್ದ ಕೇಳಿಸಿದೆ. ಏನೆಂದು ಸಮೀಪಕ್ಕೆ ಹೋದಾಗ ಸುಟ್ಟಗಾಯಗಳಿಂದ ಓರ್ವ ಬಾಲಕಿ ನರಳಾಡುತ್ತಿದ್ದು, ಪಕ್ಕದಲ್ಲೇ ತಾಯಿ ರೋಧಿಸುತ್ತಿರುವ, ಹಾಗೂ ಮತ್ತೊಬ್ಬ ಬಾಲಕಿ ಶವ ಕಂಡು ಬಂದಿದೆ.
ಈ ದೃಶ್ಯ ನೋಡಿ ಬೆಚ್ಚಿಬಿದ್ದ ಸ್ಥಳೀಯರು ತಕ್ಷಣ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ತಾಯಿಯನ್ನು ವಶಕ್ಕೆ ಪಡೆದರು. ಸುಟ್ಟಗಾಯಗಳಿಂದ ನರಳಾಡುತ್ತಿದ್ದ ಬಾಲಕಿಯನ್ನ ಬೆಟ್ಟದಿಂದ ಕೆಳಕ್ಕೆ ಎತ್ತಿಕೊಂಡೇ ಓಡಿ ಬಂದ ಪಿಎಸ್ಐ ಮಂಜುನಾಥ್, ಆಸ್ಪತ್ರೆಗೆ ರವಾನಿಸಿದರು. ಈ ದೃಶ್ಯ ಮನಕಲಕುವಂತಿತ್ತು.
ಮಕ್ಕಳಿಗೆ ಬೆಂಕಿ ಹಚ್ಚಿದ ತಾಯಿಯ ಹೆಸರು ಜ್ಯೋತಿ. ಆಂಧ್ರ ಪ್ರದೇಶದ ಪಲಮನೇರು ಬಳಿಯ ಬುಸಾನಿ ಕುರುಪಲ್ಲಿ ನಿವಾಸಿಯಾದ ಈಕೆ, ಆಂಧ್ರ ತಿರುಮೇಶ್ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದಳು. ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದರು. ಕೌಟುಂಬಿಕ ಕಲಹ ಹಿನ್ನೆಲೆ ಮನನೊಂದ ಜ್ಯೋತಿ, ತನ್ನಿಬ್ಬರು ಮಕ್ಕಳೊಂದಿಗೆ ಮುಳವಾಗಿಲುಗೆ ನಿನ್ನೆ ಆಗಮಿಸಿದ್ದಾಳೆ. ಆತ್ಮಹತ್ಯೆಗೆ ನಿರ್ಧರಿಸಿ ಪೆಟ್ರೋಲ್​ ತೆಗೆದುಕೊಂಡು ಹೋಗಿದ್ದಾಳೆ. ಮೊದಲು ಮಕ್ಕಳನ್ನು ಕೊಂದು ನಂತರ ತಾನು ಸಾಯಲು ನಿರ್ಧರಿಸಿದ್ದು, ಇಬ್ಬರು ಹೆಣ್ಣುಮಕ್ಕಳಿಗೆ‌ ಬೆಂಕಿ‌ ಹಚ್ಚಿದ್ದಾಳೆ. ಮಕ್ಕಳ ಚೀರಾಟ ನೋಡಿ ಕಣ್ಣೀರು ಸುರಿಸುತ್ತಾ ಅಲ್ಲೇ ಕುಳಿತಿದ್ದಾಳೆ.
ಘಟನೆ ರಾತ್ರಿ ನಡೆದಿದ್ದರಿಂದ ಸಾರ್ವಜನಿಕರಿಗೂ ವಿಷಯ ಗೊತ್ತಾಗಿಲ್ಲ. ಮಗಳು ಅಕ್ಷಯ(8) ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ಮಗಳು ಉದಯಶ್ರೀ(6) ಸಾವು-ಬದುಕಿನ ನಡುವೆ ಹೋರಾಡುತ್ತಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಆರೋಪಿ ಜ್ಯೋತಿಯನ್ನ ಮುಳಬಾಗಿಲು ಪೊಲೀಸರು ಬಂಧಿಸಿದ್ದಾರೆ.
ಕಲಬುರಗಿಯಲ್ಲಿ ಭೀಕರ ಅಪಘಾತ: ಸರ್ಕಲ್​ ಇನ್​ಸ್ಪೆಕ್ಟರ್​ ರವಿ ಉಕ್ಕುಂದ, ಪತ್ನಿ ದುರ್ಮರಣ
ಜೂಜಾಟಕ್ಕೆ ತನ್ನನ್ನೇ ಪಣಕ್ಕಿಟ್ಟು ಸೋತು ಪರ ಪುರುಷನ ಪಾಲಾದ 2 ಮಕ್ಕಳ ತಾಯಿ! ಗಂಡನ ಗೋಳು ನೋಡಲಾಗ್ತಿಲ್ಲ…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × five =
Remember me
