ದಾಂಡೇಲಿ:ಪತಿ ಮೇಲಿನ ಸಿಟ್ಟಿಗೆ ಹೆತ್ತ ಮಗನನ್ನೇ ತಾಯಿಯೊಬ್ಬಳು ಮೊಸಳೆ ಬಾಯಿಗೆ ಎಸೆದ ಹೃದಯವಿದ್ರಾವಕ ಘಟನೆಗೆ ದಾಂಡೇಲಿ ಪಟ್ಟಣ ಬೆಚ್ಚಿದೆ. ನಗರದ ಹಾಲಮಡ್ಡಿಯ ಸಾವಿತ್ರಿ ಸೀಳಿನ್ ಆರೋಪಿ ಮಹಿಳೆ. ಶನಿವಾರ ಸಂಜೆ ಪತಿ ರವಿಕುಮಾರ್ ಜತೆ ಸಾವಿತ್ರಿ ಜಗಳವಾಡಿದ್ದರು. ಬಳಿಕ ಅದೇ ಸಿಟ್ಟಿನಲ್ಲಿ 6 ವರ್ಷದ ಮಗ ವಿನೋದನನ್ನು ಕರೆದೊಯ್ದು ಮನೆಯ ಸಮೀಪದ ಕೊಳಚೆ ನೀರಿನ ನಾಲೆಗೆ ಎಸೆದು ಹೋಗಿದ್ದರು. ಆದರೆ ಕೆಲ ಹೊತ್ತಿನಲ್ಲೇ ತಪ್ಪಿನ ಅರಿವಾಗಿ ತನ್ನ ಕೃತ್ಯವನ್ನು ಮನೆಯವರಿಗೆ ತಿಳಿಸಿದ್ದರು.
ತಕ್ಷಣವೇ ಕುಟುಂಬಸ್ಥರು, ಸ್ಥಳೀಯರು ರಾತ್ರಿಯೇ ನಾಲೆ ಬಳಿ ಧಾವಿಸಿದರಾದರೂ ಕಾಲ ಮಿಂಚಿ ಹೋಗಿತ್ತು. ನಾಲೆಯಲ್ಲಿ ಎಷ್ಟೇ ಹುಡುಕಾಡಿದರೂ ಮಗು ಪತ್ತೆಯಾಗಿರಲಿಲ್ಲ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕದಳ ಸಿಬ್ಬಂದಿ ಹಾಗೂ ಪೊಲೀಸರು ಸುದೀರ್ಘ ಕಾರ್ಯಾಚರಣೆ ನಡೆಸಿದಾಗ ಭಾನುವಾರ ಬೆಳಗ್ಗೆ ಮೃತದೇಹ ಸಿಕ್ಕಿದೆ. ಬಾಲಕನ ಶವ ಮೊಸಳೆ ತಿಂದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ಬಾಲಕನಿಗೆ ಮೂರ್ಛೆ ರೋಗ ಇತ್ತೆಂದು ತಿಳಿದು ಬಂದಿದೆ. ಸಿಟ್ಟಿನಲ್ಲಿ ಮಗನನ್ನು ಮೊಸಳೆ ಬಾಯಿಗೆ ಎಸೆದ ಸಾವಿತ್ರಿ ಬಳಿಕ ಮೃತದೇಹದ ಎದುರು ಕಣ್ಣೀರಿಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ದಾಂಡೇಲಿ ಗ್ರಾಮೀಣ ಠಾಣೆ ಪೊಲೀಸರು ಸಾವಿತ್ರಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ದಾಂಡೇಲಿ ಡಿವೈಎಸ್ಪಿ ಶಿವಾನಂದ ಮದರಖಂಡಿ, ಸಿಪಿಐ ಭೀಮಣ್ಣ ಸೂರಿ, ಪಿಎಸ್​ಐ ಕೃಷ್ಣ ಅರಕೇರಿ, ಜಗದೀಶ ನಾಯ್ಕ, ಸಿಬ್ಬಂದಿಯಾದ ಚಿನ್ಮಯಿ ಪತ್ತಾರ, ದಯಾನಂದ, ಮಂಜುನಾಥ, ಅಬ್ದುಲ್ ಪಟೇಲ್, ರವಿ ಚೌಹಾಣ್, ಇತರರು ಮಗುವಿನ ಶೋಧ ಕಾರ್ಯದಲ್ಲಿ ಭಾಗಿಯಾಗಿದ್ದರು.
ಈತ ಕ್ರೀಸ್​ಗೆ ಬಂದ್ರೆ ಬೌಲರ್​ಗಳೇ ಬೆವರುತ್ತಾರೆ! ಅಜಯ್​ ಜಡೇಜಾ ಹೆಸರಿಸಿದ ಸ್ಟಾರ್​ ಬ್ಯಾಟ್ಸ್​ಮನ್ ಇವರೇ

5 ರೂ. ಪಾರ್ಲೆ-ಜಿ ಬಿಸ್ಕತ್​ ಬೆಲೆ ದುಬೈ, ಪಾಕಿಸ್ತಾನ ರಾಷ್ಟ್ರಗಳಲ್ಲಿ ಎಷ್ಟಿದೆ ಗೊತ್ತಾ? ಕೇಳಿದ್ರೆ ದಂಗಾಗ್ತೀರಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 7 =
Remember me
