ಬಾಗಲಕೋಟೆ:ತಾಯಿಯೊಬ್ಬಳು ತನ್ನ ನವಜಾತ ಶಿಶುವನ್ನು ಹೊಲದಲ್ಲಿ ಎಸೆದು ಪರಾರಿ ಆಗಲೆತ್ನಿಸಿದ ಪ್ರಕರಣ ನಡೆದಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಇಂಥದ್ದೊಂದು ಘಟನೆ ನಡೆದಿದ್ದು, ಈಕೆಗೆ ಸಹೋದರನೇ ಸಾಥ್ ನೀಡಿದ್ದ.
ಬಾಗಲಕೋಟೆ ತಾಲೂಕಿನ ಬೆನಕಟ್ಟಿ ಗ್ರಾಮದ ಹೊಲದಲ್ಲಿ ಈ ಘಟನೆ ನಡೆದಿದೆ. ಸಂಗೊಂದಿ ಗ್ರಾಮದ ಬಾಣಂತಿಯೊಬ್ಬಳು ಇಲ್ಲಿನ ಹೊಲದಲ್ಲಿ ನವಜಾತ ಶಿಶುವನ್ನು ಎಸೆದಿದ್ದಳು. ಈ ಸಂದರ್ಭದಲ್ಲಿ ಈಕೆಯ ಸಹೋದರ ಜತೆಗಿದ್ದ. ಆದರೆ ಬಳಿಕ ಇಬ್ಬರೂ ಅಲ್ಲಿಂದ ಪರಾರಿಯಾಗುತ್ತಿದ್ದ ಸಂದರ್ಭದಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದವರು ಇವರನ್ನು ಅಡ್ಡಗಟ್ಟಿ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ:ಕೊಂಬೆ ಕಡಿಯಲು ಹೋದವ ಮರದಲ್ಲಿ ಕುಳಿತಲ್ಲೇ ಹೆಣವಾದ!; ಹುಯಿಲುಮನೆಯಲ್ಲಿ ನಡೆದಿದ್ದೇನು?
ದಾರಿ ಮಧ್ಯೆ ಹೆರಿಗೆಯಾಗಿದ್ದು, ಶಿಶುವನ್ನು ಹೊಲದಲ್ಲಿ ಬಿಸಾಕಿ ಹೊರಟಿದ್ದ ಇವರನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೆ ಬಾಣಂತಿ ಹಾಗೂ ಆಕೆಯ ಸಹೋದರನಿಗೆ ಕಪಾಳಮೋಕ್ಷ ಮೋಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಮಾಹಿತಿ ನೀಡಿದ್ದರು.
ಬಾಣಂತಿ ಹಾಗೂ ನವಜಾತ ಗಂಡು ಶಿಶುವನ್ನು ರಕ್ಷಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, 108 ಆ್ಯಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ಕರೆದೊಯ್ದು ಇಬ್ಬರನ್ನೂ ದಾಖಲಿಸಿದ್ದಾರೆ. ಶಿಶುವನ್ನು ಎನ್​ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮದುವೆಯಾಗುವುದಾಗಿ ಸಂಪರ್ಕ ಬೆಳೆಸಿ ವಂಚಿಸಿದ ಉದ್ಯಮಿ?: ನಟಿಯಿಂದ ಪೊಲೀಸರಿಗೆ ದೂರು

2000 ರೂ. ನೋಟು ಹಿಂಪಡೆ ವಿಚಾರ: ಆರ್​ಬಿಐನಿಂದ ಮತ್ತೆ ಮನವಿ; ಇಲ್ಲಿದೆ ವಿವರ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 14 =
Remember me
