ಕಲಬುರಗಿ :ಕಳೆದ ತಡರಾತ್ರಿ ಜಿಲ್ಲೆಯ ಚಿಂಚೋಳಿ ಪಟ್ಟಣದಲ್ಲಿ ಅಕಾಲಿಕ ಮಳೆ ಬಂದು ಬಿರುಗಾಳಿಯಿಂದ ಜೆಸ್ಕಾಂ ವಿದ್ಯುತ್ ತಂತಿ ಕಡಿದು ಬಿದ್ದು ತಾಯಿ, ಇಬ್ಬರು ಮಕ್ಕಳು ಮೃತಪಟ್ಟ ಹೃದಯ ವಿದ್ರಾವಕ ಘಟನೆ ನಡೆದಿದೆ.
ಚಿಂಚೋಳಿ ಪಟ್ಟಣದ ಧನಗರಗಲ್ಲಿಯ ನಿವಾಸಿಗಳಾಗಿದ್ದ ಝರಣಮ್ಮ (42) ,ಪುತ್ರರಾದ ಮಹೇಶ್ (21) , ಸುರೇಶ್( 20 ) ಅವಘಡದಲ್ಲಿ ಬಲಿಯಾದವರು. ತಂದೆ ಗಾಯಗೊಂಡಿದ್ದಾರೆ.
ಇದನ್ನೂ ಓದಿ:ಬೀದರ್​ನಲ್ಲಿ ವರುಣನ ಆರ್ಭಟ: ಆಲಿಕಲ್ಲು ಮಳೆಗೆ ಜನಜೀವನ ಅಸ್ತವ್ಯಸ್ತ, ಕಾಶ್ಮೀರವಾಗಿ ಬದಲಾದ ಬೀದರ್​
ಶನಿವಾರ ಮಧ್ಯರಾತ್ರಿ ಚಿಂಚೋಳಿ ತಾಲ್ಲೂಕಿನಾದ್ಯಂತ ಧಾರಾಕಾರ ಮಳೆಯಾಗಿದೆ. ಗುಡುಗು ಸಿಡಿಲು ಸಹಿತ ಅಬ್ಬರದ ಮಳೆ ಸುರಿದೆ. ಮಳೆ ಬರುತ್ತಿದ್ದರಿಂದ ಮನೆಯ ಹೊರಗಡೆ ಇಟ್ಟಿದ್ದ ತೊಗರಿ ಹೊಟ್ಟಿಗೆ ಪ್ಲ್ಯಾಸ್ಟಿಕ್ ಚೀಲವನ್ನು ಹೊದಿಸಲು ಹೋದಾಗ ವಿದ್ಯುತ್ ತಂತಿ ಕಟ್ ಆಗಿ ಬಿದ್ದಿದೆ‌. ತಾಯಿ ಮೊದಲು ವಿದ್ಯುತ್ ಶಾಕ್ ಹೊಡೆದಿದೆ. ತಾಯಿಯನ್ನು ವಿದ್ಯುತ್ ಶಾಕ್ ನಿಂದ ಬಿಡಿಸೋದಕ್ಕೆ ಹೊದ ಇಬ್ಬರು ಮಕ್ಕಳಿಗೂ ಒಬ್ಬರ ನಂತರ ಒಬ್ಬರಿಗೆ ಶಾಲ್ ಹೊಡೆದ ಪರಿಣಾಮ ಸ್ಥಳದಲ್ಲೆ ಮೂವರು ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದರು.
ಸ್ಥಳಕ್ಕೆ ಪೊಲೀಸರು ಹಾಗೂ ಜೆಸ್ಕಾಂ ಸಿಬ್ಬಂದಿ ಭೇಟಿ ನೀಡಿದರು. ಈ ಕುರಿತು‌ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದ್ವೆ ಮನೆಯಲ್ಲಿ ಡಾನ್ಸ್​ ಮಾಡುತ್ತಲೇ ಕುಸಿದುಬಿದ್ದ ಮಹಿಳೆ: ಕುಟುಂಬವನ್ನು ಆಘಾತಕ್ಕೆ ದೂಡಿದ ವೈದ್ಯರ ಹೇಳಿಕೆ

ಶಾಲೆಗೆ ನುಗ್ಗಿ ಮದ್ಯ, ಗಾಂಜಾ ಸೇವಿಸಿ ನನಗೂ ಪಾಠ ಮಾಡಿ ಎನ್ನುವ ಯುವಕನ ಕಾಟಕ್ಕೆ ಶಿಕ್ಷಕರು ಹೈರಾಣು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seven + seven =
Remember me
