ಬೆಂಗಳೂರು:ಫೋಕ್ಸ್ ವ್ಯಾಗನ್ ಸಹಯೋಗದಲ್ಲಿ ವಿಜಯವಾಣಿ ಹಾಗೂ ದಿಗ್ವಿಜಯ 247 ಸುದ್ದಿವಾಹಿನಿ ಜಯನಗರದ ಎಂಇಎಸ್ ಮೈದಾನದಲ್ಲಿ ಆಯೋಜಿಸಿದ್ದ ‘ಮೋಟೋ ಫೆಸ್ಟ್’ಗೆ ತೆರೆ ಬಿದ್ದಿದೆ. ಪ್ರದರ್ಶನದ ಕೊನೆಯ ದಿನವಾಗಿದ್ದ ಭಾನುವಾರ ಕೂಡ ಪ್ರದರ್ಶನಕ್ಕೆ ಭಾರಿ ಜನಪ್ರವಾಹ ಹರಿದುಬಂದಿತ್ತು.
ಭಾನುವಾರ ಬೆಳಗ್ಗೆಯಿಂದಲೇ ಸಹಸ್ರಾರು ಸಂಖ್ಯೆಯಲ್ಲಿ ಬಂದ ಗ್ರಾಹಕರು ತಮ್ಮ ಕನಸಿನ ಕಾರು ಹಾಗೂ ದ್ವಿಚಕ್ರವಾಹನವನ್ನು ಮುಂಗಡವಾಗಿ ಕಾಯ್ದಿರಿಸಿಕೊಂಡರು. ಕಾರು ಕಂಪನಿ ಹಾಗೂ ಹೋಂಡಾ ದ್ವಿಚಕ್ರ ವಾಹನ ವಿತರಕರು ಅತ್ಯಾಕರ್ಷಕ ರಿಯಾಯಿತಿ ಆಫರ್​ಗಳನ್ನು ಕೊಟ್ಟಿದ್ದರಿಂದ, ಆ ಮಳಿಗೆಯಲ್ಲಿ ವಹಿವಾಟಿನ ಭರಾಟೆ ತೀವ್ರವಾಗಿತ್ತು. ಶುಕ್ರವಾರ ಮತ್ತು ಶನಿವಾರ ಮೋಟೋ ಫೆಸ್ಟ್​ಗೆ ಆಗಮಿಸಿದ್ದ ಕೆಲ ವಾಹನ ಪ್ರಿಯರು ಕೆಲ ಕಾರುಗಳ ಬಗ್ಗೆ ಮಾಹಿತಿ ಪಡೆದು ತೆರಳಿದ್ದರು. ಭಾನುವಾರ ಮತ್ತೆ ಪ್ರದರ್ಶನಕ್ಕೆ ಬಂದು ತಮ್ಮಿಷ್ಟದ ಕಾರುಗಳನ್ನು ಖರೀದಿಸಿ ಸಂಭ್ರಮಿಸಿದರು.
ಮಧ್ಯಮವರ್ಗವರಿಗೆ ಅವರಲ್ಲಿರುವ ವ್ಯವಸ್ಥೆಗೆ ಅನುಗುಣವಾಗಿ ಕೆನರಾ ಬ್ಯಾಂಕ್​ನಿಂದ ಸಾಲ ಸೌಲಭ್ಯ ಒದಗಿಸುವ ವ್ಯವಸ್ಥೆ ಮಾಡಿಕೊಂಡಿತ್ತು. ಇದರಿಂದ ಗ್ರಾಹಕರಿಗೆ ತುಂಬಾ ಅನುಕೂಲವಾಯಿತು. ವಾಹನ ಮಾರಾಟ ಕಂಪನಿಗಳು ಸ್ಥಾಪಿಸಿದ ಮಳಿಗೆಗಳಲ್ಲಿ ಮೊದಲೆರಡು ದಿನಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ವಾಹನ ಖರೀದಿಸಲು ಮುಗಿ ಬೀಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಗ್ರಾಹಕರಿಂದ ಉತ್ತಮ ಸ್ಪಂದನೆ:ತಮಗೆ ಯೋಗ್ಯವಾದ ಬೆಲೆಗೆ ದೊರಕುವ ವಾಹನಗಳನ್ನು ಹುಡುಕುವವರ ಸಂಖ್ಯೆ ಅಧಿಕವಾಗಿತ್ತು. ಖರೀದಿಗೆ ಮುಂದಾದ ಗ್ರಾಹಕರಿಗೆ ತಮ್ಮ ಶೋರೂಂ ಬಗ್ಗೆ ಮಾಹಿತಿ ನೀಡಿದ ಪ್ರತಿನಿಧಿಗಳು ಇನ್ನಷ್ಟು ಮಾದರಿಗಳ ಕಾರುಗಳನ್ನು ತೋರಿಸುವುದಾಗಿ ತಿಳಿಸಿದರು. ಅಲ್ಲದೆ, ಕಂಪನಿಯು ಖರೀದಿದಾರರಿಗೆ ಒದಗಿಸುವ ಹೆಚ್ಚಿನ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಅನೇಕ ಗ್ರಾಹಕರು ಕುಟುಂಬಸ್ಥರೊಂದಿಗೆ ಬಂದು ತಾವು ಖರೀದಿಸಲು ಮುಂದಾಗಿರುವ ಕಾರುಗಳ ಹೆಚ್ಚುವರಿ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಮೋಟೋ ಫೆಸ್ಟ್​ನಲ್ಲಿ ಯಾವುದೇ ಆತಂಕವಿಲ್ಲದೇ ವಾಹನ ಖರೀದಿ ಮಾಡಬಹುದಾಗಿದ್ದು, ಮೋಟೋ ಫೆಸ್ಟ್ ಆಯೋಜನೆ ಮಾಡಿದ್ದ ವಿಜಯವಾಣಿ ಹಾಗೂ ದಿಗ್ವಿಜಯ 24*7 ಸುದ್ದಿವಾಹಿನಿಗೆ ಗ್ರಾಹಕರು ಧನ್ಯವಾದ ಅರ್ಪಿಸಿದರು.
ಎಲ್ಲ ವರ್ಗದವರಿಗೂ ಇತ್ತು ಬಹುಆಯ್ಕೆಗಳು:ಮೋಟೋ ಫೆಸ್ಟ್​ನಲ್ಲಿ ಸಾಕಷ್ಟು ಸಂಖ್ಯೆಯ ವಾಹನಗಳು ಮಾರಾಟವಾದವು. ಎಲ್ಲ ವರ್ಗದವರ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ತಮ್ಮ ಸಂಸ್ಥೆಯಿಂದ ಹೊಸದಾಗಿ ಬಿಡುಗಡೆಗೊಳ್ಳಲಿರುವ ವಾಹನಗಳ ಬಗ್ಗೆ ವಾಹನ ಕಂಪನಿಗಳ ಮಾರಾಟ ಪ್ರತಿನಿಧಿಗಳು ಮಾಹಿತಿ ನೀಡಿದರು. ವಾಹನ ವಿತರಕರು ಕೇವಲ ಶ್ರೀಮಂತ ವರ್ಗಕ್ಕೆ ಮಾತ್ರ ಸೀಮಿತವಾಗದೆ ಮಧ್ಯಮ ವರ್ಗದವರಿಗೂ ಕೈಗೆಟುಕುವ ದರದಲ್ಲಿ ಹಲವಾರು ಕಾರುಗಳು ನೀಡಲು ಮುಂದಾಗಿದ್ದು, ಗ್ರಾಹಕರ ಹೆಚ್ಚಿನ ಸಂತಸಕ್ಕೆ ಕಾರಣವಾಗಿತ್ತು. ಮುಂದಿನ ಮೋಟೋ ಫೆಸ್ಟ್ ಯಾವಾಗ ಎಂಬುದು ಪ್ರತಿಯೊಬ್ಬ ಗ್ರಾಹಕರ ಪ್ರಶ್ನೆಯಾಗಿತ್ತು. ಮುಂದಿನ ಮೋಟೋ ಫೆಸ್ ್ಟಲ್ಲಿ ಇನ್ನಷ್ಟು ಸಂಸ್ಥೆಗಳ ವಾಹನ ವಿತರಕರನ್ನು ಕರೆಸಿ, ಹಲವು ಮಾದರಿಗಳ ಕಾರುಗಳನ್ನು ಪ್ರದರ್ಶಿಸುವಂತೆ ಮನವಿ ಮಾಡಿಕೊಂಡರು.
ಬಂಧುಗಳೊಂದಿಗೆ ಬಂದಿದ್ದ ಜನತೆ:ವಾರಾಂತ್ಯವಾಗಿದ್ದರಿಂದ ಹಲವು ಮಂದಿ ತಮ್ಮ ಬಂಧುಬಳಗದೊಂದಿಗೆ ಪ್ರದರ್ಶನಕ್ಕೆ ಆಗಮಿಸಿ, ವಾಹನಗಳನ್ನು ಖರೀದಿಸಲು ಉತ್ತೇಜಿಸಿದ್ದು ವಿಶೇಷವಾಗಿತ್ತು. ಬೆಳಗ್ಗೆ 10 ಗಂಟೆಯಿಂದ ಆರಂಭಗೊಂಡ ಜನರ ಆಗಮನ ಮೋಟೋ ಫೆಸ್ಟ್ ಮುಕ್ತಾಯವಾಗುವವರೆಗೂ ನಿರಂತರವಾಗಿ ಮುಂದುವರಿದಿತ್ತು. ಒಟ್ಟಾರೆ ಮೂರು ದಿನ ನಡೆದ ಮೋಟೋ ಫೆಸ್ಟ್​ನಲ್ಲಿ ಭರ್ಜರಿ ವಾಹನ ಮಾರಾಟವಾದ ಖಷಿಯಲ್ಲಿ ವಾಹನ ಕಂಪನಿ ವಿತರಕರು ಮರಳಿದರು. ಸಂಜೆ ತೆರೆಬೀಳುವ ವೇಳೆಯಲ್ಲೂ ಜನ ಸಂದಣಿ ಹೆಚ್ಚಾಗಿದ್ದುದರಿಂದ ಮೋಟೋ ಫೆಸ್ಟ್ ಅವಧಿಯನ್ನು ವಿಸ್ತರಿಸಲಾಗಿತ್ತು.
ಇಷ್ಟೊಂದು ಜನರನ್ನು ನಿರೀಕ್ಷಿಸಿರಲಿಲ್ಲ…:ತಮಗೊಂದು ಸ್ವಂತ ವಾಹನ ಖರೀದಿಸಬೇಕು ಎಂಬುದಾಗಿ ಜನರಲ್ಲಿ ಕನಸಿರುತ್ತದೆ. ವಿಜಯವಾಣಿ ಮತ್ತು ದಿಗ್ವಿಜಯ 247 ಸುದ್ದಿವಾಹಿನಿಯ ಎಕ್ಸ್​ಪೋ ಮೂಲಕ ಜನರ ಕನಸಿನ ಹತ್ತಿರಕ್ಕೆ ಕರೆದುಕೊಂಡು ಹೋಗುತ್ತಿದ್ದೀರಿ. ಮೋಟೋ ಫೆಸ್ಟ್​ಗೆ ಇಷ್ಟೊಂದು ಗ್ರಾಹಕರು ಬರುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ. ಈ ಎಕ್ಸ್​ಪೋಗೆ ಬಂದ ಸಹಸ್ರಾರು ಜನ ವಾಹನ ಖರೀದಿಗೆ ಉತ್ಸುಕರಾಗಿದ್ದಾರೆ. ಗ್ರಾಹಕರಿಂದ ಉತ್ತಮ ಸ್ಪಂದನೆ ದೊರೆತಿದೆ ಎಂದು ಮೋಟೊ ಫೆಸ್ಟ್​ನಲ್ಲಿ ಭಾಗವಹಿಸಿದ್ದ ವಿವಿಧ ವಾಹನ ವಿತರಕ ಕಂಪನಿಯ ಸಿಬ್ಬಂದಿ ಅಭಿಪ್ರಾಯಪಟ್ಟರು.
ಟಿ-ರಾಕ್ ಮತ್ತು ಟಿಗ್ವಾನ್-ಆಲ್ ಸ್ಪೇಸ್:ಕಾರು ಉತ್ಪಾದನೆಯಲ್ಲಿ ಪ್ರಸಿದ್ಧಿ ಪಡೆದಿರುವ ಫೋಕ್ಸ್ ವ್ಯಾಗನ್ ಸಂಸ್ಥೆಯು ಮುಂದಿನ ಏಪ್ರಿಲ್​ನಲ್ಲಿ ಟಿ-ರಾಕ್ ಫೋಲ್ಸ್ ವ್ಯಾಗನ್ ಹಾಗೂ ಟಿಗ್ವಾನ್-ಆಲ್ ಸ್ಪೇಸ್ ಹೊಸ ಕಾರನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ಟಿ-ರಾಕ್ 1.5 ಪೆಟ್ರೋಲ್ ಡಿಎಸ್​ಜಿ, ಟಿಗ್ವಾನ್-ಆಲ್ ಸ್ಪೇಸ್ 2.0 ಪೆಟ್ರೋಲ್ ಡಿಎಸ್​ಜಿ ಸಾಮರ್ಥ್ಯ ಹೊಂದಿದೆ. ಈ ಎರಡೂ ಕಾರುಗಳನ್ನೂ ಜರ್ಮನಿಯಿಂದ ರಫ್ತು ಮಾಡಲಾಗುತ್ತದೆ. ಎಲ್ಲ ಐಶಾರಾಮಿ ಕಾರುಗಳಲ್ಲೂ ಬಳಸುವ ಡಿಎಸ್​ಜಿ ಗೇರ್ ಬಾಕ್ಸ್ ಈ ಎರಡೂ ಕಾರುಗಳಲ್ಲಿ ಬಳಸಲಾಗುತ್ತದೆ. ಬಿಲ್ಟ್ ಕ್ವಾಲಿಟಿ ಸೇಫ್ಟಿಸ್ ಇರಲಿದೆ. ನಾವಿಗೇಷನ್ ಸಿಸ್ಟಮ್ ಕ್ರೂಸ್ ಕಂಟ್ರೋಲ್, ಎಲ್​ಇಡಿ , ಡಿಆರ್​ಎಲ್ಸ್, ಉತ್ತಮ ಗುಣಮಟ್ಟದ ಕ್ಯಾಮರಾಗಳನ್ನು ಈ ಕಾರುಗಳಲ್ಲಿ ಕಾಣಬಹುದಾಗಿದೆ ಎಂದು ಆಪಲ್ ಆಟೋ ಪ್ರೖೆ.ಲಿ (ಫೋಕ್ಸ್ ವ್ಯಾಗನ್) ಸಂಸ್ಥೆಯ ಸೀನಿಯರ್ ಸೇಲ್ಸ್ ಕನ್ಸಲ್ಟೆಂಟ್ ಭರತ್ ವಿವರಿಸಿದರು.
ಮೋಟೋ ಫೆಸ್ಟ್​ನಿಂದ ಅನುಕೂಲ:1.2 ಕೋಟಿಗೂ ಅಧಿಕ ಜನಸಂಖ್ಯೆ ಇರುವ ರಾಜಧಾನಿಯಲ್ಲಿ ಲಕ್ಷಾಂತರ ಜನ ಸ್ವಂತ ಕಾರು ಹಾಗೂ ದ್ವಿಚಕ್ರವಾಹನ ಖರೀದಿಗೆ ತುದಿಗಾಲಲ್ಲಿ ನಿಂತಿದ್ದಾರೆ. ಆದರೆ, ಅವರಿಗೆ ಒಂದು ವಾಹನ ವಿತರಕ ಕಂಪನಿಯಿಂದ ಮತ್ತೊಂದು ಕಂಪನಿಗೆ ಓಡಾಡಲು ಸಾಕಷ್ಟು ತೊಂದರೆಯಾಗುತ್ತದೆ. ಅಲ್ಲದೆ, ಸಾಕಷ್ಟು ಸಮಯವೂ ವ್ಯರ್ಥವಾಗುತ್ತದೆ. ಈ ನಿಟ್ಟಿನಲ್ಲಿ ಇಂತಹ ಮೋಟೋ ಫೆಸ್ಟ್​ನಿಂದಾಗಿ ಒಂದೇ ಸೂರಿನಡಿ ಎಲ್ಲ ಕಂಪನಿಗಳ ವಾಹನಗಳು ದೊರೆಯುವುದರಿಂದ, ಎಲ್ಲ ವರ್ಗದ ಜನರಿಗೂ ಬಹಳಷ್ಟು ಅನುಕೂಲವಾಗಿದೆ. ವಾಹನದ ಅವಶ್ಯಕತೆಯಿರುವ ಪ್ರತಿಯೊಬ್ಬರಿಗೂ ಒಂದೇ ಸೂರಿನಡಿ ಹಲವು ಬಗೆಯ ವಾಹನ ಖರೀದಿ ಮಾಡಲು ಅನುವು ಮಾಡಿಕೊಟ್ಟಿರುವುದು ಉತ್ತಮ ಬೆಳವಣಿಗೆಯಾಗಿದೆ. ಇದರಲ್ಲಿ ವಿಜಯವಾಣಿ ಮತ್ತು ದಿಗ್ವಿಜಯ 247 ಸುದ್ದಿವಾಹಿನಿ ಸಫಲವಾಗಿದೆ ಎಂದು ಗ್ರಾಹಕರು ಹಾಗೂ ವಾಹನ ಕಂಪನಿ ವಿತರಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಹೋಂಡಾ ಆಕ್ಟಿವಾ 6ಜಿ:ಹೋಂಡಾ ಆಕ್ಟಿವಾ 6 ಜಿ ಬಹಳಷ್ಟು ಅನುಕೂಲತೆಗಳನ್ನು ಹೊಂದಿದ್ದು, ಹೆಚ್ಚಿನ ಇಂಜಿನ್ ಸಾಮರ್ಥ್ಯ ಹೊಂದಿದೆ. ಮಾಲಿನ್ಯ ತಡೆಗಟ್ಟುವುದನ್ನು ಗಮನದಲ್ಲಿಟ್ಟುಕೊಂಡು ಈ ದ್ವಿಚಕ್ರವಾಹವನ್ನು ತಯಾರಿಸಲಾಗಿದ್ದು, ಈ ವಾಹನದಲ್ಲಿ ಹೊಗೆಯ ಪ್ರಮಾಣ ಕಡಿಮೆಯಿರಲಿದೆ. ಈ ವಾಹನ ಚಲಾಯಿಸುವಾಗ ಶಬ್ದ ಕಡಿಮೆಯಿರಲಿದೆ.
ಹಲವು ವಿಶೇಷತೆಗಳ ನಿಸಾನ್ ಕಿಕ್ಸ್ ಕಾರು:ನಿಸಾನ್ ಕಿಕ್ಸ್ ಕಾರಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ. ನಿಸಾನ್ ಕನೆಕ್ಟ್ ಆಯ್ಕೆ ಹೊಂದಿದೆ. 67 ಆಯ್ಕೆಗಳಿರುತ್ತದೆ. ರಿಜಿಸ್ಟ್ರರ್ ನಂಬರ್ ಬಳಸಿ ನಿಸಾನ್ ಕನೆಕ್ಟ್ ಡೌನ್​ಲೋಡ್ ಮಾಡಿಕೊಂಡರೆ ಅದರಲ್ಲಿ ಲಭ್ಯ ಇರುವ ಎಲ್ಲ ಆಯ್ಕೆಗಳನ್ನೂ ಬಳಿಸಿಕೊಳ್ಳಬಹುದು. ಈ ಆಯ್ಕೆಗಳಿಂದ ಮುಖ್ಯವಾಗಿ ವೇಗ ನಿಯಂತ್ರಣ, ಇಂಧನ ಕಡಿಮೆಯಾದರೆ ಸಂದೇಶ ಬರುವ ವ್ಯವಸ್ಥೆ, ಸರ್ವೀಸ್ ಸಂದೇಶ, ಸಾಫ್ಟ್​ವೇರ್​ವೊಂದರಲ್ಲಿ ಗ್ರೂಪ್​ಗೆ ಐದಾರು ಮಂದಿಯನ್ನು ಸೇರಿಸಿ ಕಾರು ಯಾವ ಪ್ರದೇಶದಲ್ಲಿ ಚಲಿಸುತ್ತದೆ ಎಂಬುದನ್ನು ಪತ್ತೆ ಹಚ್ಚಬಹುದಾಗಿದೆ. ಈ ಕಾರು ಕಳುವಾದರೆ ಕೂಡಲೇ ಪೊಲೀಸರಿಗೆ ನೀಡಿ, ಮಾಹಿತಿಯನ್ನು ಕಾಲ್​ಸೆಂಟರ್​ಗೆ ತಿಳಿಸಿದರೆ, ಕಾರು ಇರುವ ಪ್ರದೇಶವನ್ನು ಸುಲಭವಾಗಿ ಪತ್ತೆಹಚ್ಚಬಹುದು. ಅಲ್ಲದೆ, ಈ ಕಾರನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಲು ಸಾಧ್ಯವಾಗುತ್ತದೆ. ಈ ಕಾರು ಇತ್ತೀಚೆಗೆ ಮಾರುಕಟ್ಟೆಗೆ ಬಂದಿದ್ದು, 1.5 ಲೀ. ಇಂಜಿನ್ ಹೊಂದಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಆಯ್ಕೆಗಳೂ ಇರುತ್ತವೆ ಎಂದು ಸೂರ್ಯ ನಿಸಾನ್ ಕಾರು ವಿತರಕ ಸಂಸ್ಥೆಯ ಸೀನಿಯರ್ ಸೇಲ್ಸ್ ಎಕ್ಸಿಕ್ಯೂಟಿವ್ ಕೃಷ್ಣ ಮಾಹಿತಿ ನೀಡಿದರು.
ಸ್ಮರಣಿಕೆ ನೀಡಿ ಗೌರವ:ಮೋಟೊ ಫೆಸ್ಟ್ ನಲ್ಲಿ ಪಾಲ್ಗೊಂಡ ವಾಹನ ವಿತರಕರು ಹಾಗೂ ಆಟೋಮೊಬೈಲ್ ಕ್ಷೇತ್ರದ ಸಿಬ್ಬಂದಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಆಪಲ್ ಆಟೋ ಪ್ರೖೆ.ಲಿ (ಫೋಕ್ಸ್ ವ್ಯಾಗನ್) ಸಂಸ್ಥೆಯ ಸೀನಿಯರ್ ಕನ್ಸಲ್ಟೆಂಟ್ ಭರತ್, ಸುಂದರಂ ಮೋಟಾರ್ಸ್ (ಮರ್ಸಿಡಿಸ್ ಬೆಂಜ್) ಕಂಪನಿಯ ಟೀಂ ಲೀಡರ್ ಮಧುಸೂದನ್, ಕಲ್ಯಾಣಿ ಮೋಟಾರ್ಸ್ (ಮಾರುತಿ ಸುಜುಕಿ) ಕಂಪನಿಯ ಟೀಂ ಮ್ಯಾನೇಜರ್ ನವೀನ್, ಹೋಂಡಾ ದ್ವಿಚಕ್ರವಾಹನ ವಿತರಕ ಕಂಪನಿಯ ಮಾರ್ಕೆಟಿಂಗ್ ಮ್ಯಾನೇಜರ್ ಮುರಳೀಧರ್, ಹೋಂಡಾ ಸಿಟಿ ಕಾರು ವಿತರಕ ಕಂಪನಿಯ ಸೇಲ್ಸ್ ಕನ್ಸೆಲ್ಟೆಂಟ್ ಸ್ವಯಂತ್ ಕರ್, ರೆಡ್ ಸೋಲ್ ಎಂಟರ್​ಪ್ರೖೆಸಸ್ ಪ್ರೖೆ.ಲಿ. ಎಂ.ಡಿ. ಸಿದ್ದು ಹಿರೆಮಠ್ ಹಾಗೂ ಬ್ಯಾಂಕ್ ಪಾರ್ಟ್​ನರ್ ಕೆನರಾ ಬ್ಯಾಂಕ್​ನ ಮಾರ್ಕೆಟಿಂಗ್ ಆಫೀಸರ್ ಅಜರ್ ಅವರಿಗೆ ವಿಜಯವಾಣಿ ಮತ್ತು ದಿಗ್ವಿಜಯ 247 ಸುದ್ದಿವಾಹಿನಿ ಕಡೆಯಿಂದ ಸ್ಮರಣಿಕೆಗಳನ್ನು ನೀಡಲಾಯಿತು.
ಮೋಟೋ ಫೆಸ್ಟ್ ಬಹಳ ಉತ್ತಮವಾಗಿದೆ. ವಾಹನ ಪ್ರಿಯರಿಗೆ ಇಲ್ಲಿ ಸಾಕಷ್ಟು ಮಾಹಿತಿ ಸಿಗಲಿದೆ. ಮುಂದಿನ ದಿನಗಳಲ್ಲಿ ಹೊಸ ಮಾದರಿಯ ಕಾರನ್ನು ಖರೀದಿ ಮಾಡಬೇಕೆಂದಿದ್ದೇನೆ.
| ಶ್ರೀನಿವಾಸ್
ನಾಗರಬಾವಿಯಾವ ಕಾರು ಖರೀದಿ ಮಾಡುವುದು ಎಂಬ ಗೊಂದಲವಾಗಿತ್ತು. ಮೋಟೋ ಫೆಸ್ಟ್​ಗೆ ಭೇಟಿ ನೀಡಿ ಮಾಹಿತಿ ಪಡೆದ ಬಳಿಕ ಗೊಂದಲ ನಿವಾರಣೆಯಾಗಿದೆ. ಸದ್ಯದಲ್ಲೇ ಸುಜುಕಿ ಕಂಪನಿಯ ಕಾರನ್ನು ಖರೀದಿಸುವೆ.
| ಸುಭಾಷ್ ನಾಗರಬಾವಿ
ವಿಜಯವಾಣಿ ದಿನಪತ್ರಿಕೆಯಲ್ಲಿ ಬಂದ ಜಾಹಿರಾತು ನೋಡಿ ಮೋಟೋ ಫೆಸ್ಟ್ ಗೆ ಕುಟುಂಬದವರ ಜತೆ ಬಂದಿದ್ದೇನೆ. ವಿವಿಧ ಬಗೆಯ ಕಾರು ಮತ್ತು ಬೈಕ್​ಗಳ ಬಗ್ಗೆ ಇಲ್ಲಿ ಹೆಚ್ಚಿನ ಮಾಹಿತಿ ಸಿಕ್ಕಿದೆ.
| ಗೀತಾ ಮಲ್ಲೇಶ್ವರ
ಹೊಂದಾಣಿಕೆಯಾಗುವ ವಾಹನ ಹುಡುಕಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ವಿಜಯವಾಣಿ ಮೋಟೋ ಫೆಸ್ಟ್​ನಿಂದ ಒಂದೇ ಸೂರಿನಡಿ ವಿವಿಧ ಬಗೆಯ ವಾಹನಗಳ ಮಾಹಿತಿ ಸಿಕ್ಕಿದೆ.
| ಚಂದ್ರಚಾರಿ ಹೊಸಕೋಟೆ
ಮೋಟೋ ಫೆಸ್ಟ್ ಉತ್ತಮವಾಗಿದ್ದು, ಹೋಂಡಾ ಕಂಪನಿಯ ಕಾರುಗಳ ಬಗ್ಗೆ ಮಾಹಿತಿ ಪಡೆದಿದ್ದೇನೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕಾರು ವಿತರಕ ಕಂಪನಿಗಳನ್ನು ಕರೆಸಿದ್ದರೆ ಚೆನ್ನಾಗಿತ್ತು.
| ಗಂಗಾಧರ್ ಈಜೀಪುರ
ಮೇಳಕ್ಕೆ ಆಗಮಿಸಿದ ನಗರದ ಗ್ರಾಹಕರ ಆಸಕ್ತಿ ನೋಡಿದರೆ ಹಿಂದೆ ಮುಂದೆ ಆಲೋಚಿಸದೇ ವಾಹನ ಖರೀದಿಸಬಹುದು ಎಂದು ಅನಿಸುತ್ತಿದೆ.
| ಹನೀಶ್ ಹನುಮಂತನಗರ
ಮೋಟೋ ಫೆಸ್ಟ್​ನಲ್ಲಿ ಹಲವುಬಗೆಯ ಕಾರುಗಳ ಮಾಹಿತಿ ಸಿಕ್ಕಿದೆ. ಇಷ್ಟೊಂದು ಮಾದರಿಯ ಕಾರುಗಳು ಲಭ್ಯ ಇರುವ ಬಗ್ಗೆ ಮಾಹಿತಿ ಸಿಕ್ಕಿದ್ದು ಇಲ್ಲಿಯೇ.
| ಸುಬ್ರಹ್ಮಣ್ಯ ಹೆಗಡೆ ಜಯನಗರ
ಮೋಟೋ ಫೆಸ್ಟ್​ನಲ್ಲಿ ಭಾಗವಹಿಸಿದ ನಂತರ ಸದ್ಯದಲ್ಲೇ ಹೊಸ ಕಾರು ಖರೀದಿಗೆ ಮುಂದಾಗಿದ್ದೇನೆ. ಒಂದೇ ಸೂರಿನಡಿ ಕಾರುಗಳ ಬಗ್ಗೆ ಮಾಹಿತಿ ಸಿಗುವುದರಿಂದ ಸಾಕಷ್ಟು ಜನರಿಗೆ ಅನುಕೂಲಗಳಾಗಲಿವೆ.
| ಸುಧಾಕರ್ ಬನ್ನೇರುಘಟ್ಟ ರಸ್ತೆ
ಮೋಟೋ ಫೆಸ್ಟ್​ನಿಂದ ಹೆಚ್ಚಿನ ಸಮಯವೂ ಉಳಿತಾಯವಾಗು ತ್ತದೆ. ಜತೆಗೆ ಬಹುಆಯ್ಕೆ ಲಭ್ಯ ಇರುವುದರಿಂದ, ನಿರ್ದಿಷ್ಟವಾದ ವಾಹನ ಖರೀದಿ ಬಗ್ಗೆ ನಿರ್ಧರಿಸಲು ಸಾಧ್ಯವಾಗುತ್ತದೆ.
| ಆಕರ್ಷ್ ಬನಶಂಕರಿ
ಹೊಸ ಮಾದರಿಯ ಫೋಕ್ಸ್ ವ್ಯಾಗನ್ ಕಾರನ್ನು ಖರೀದಿ ಮಾಡಲು ನಿರ್ಧರಿಸಿದ್ದೇನೆ. ವಿಜಯವಾಣಿ ಮೋಟೋ ಫೆಸ್ಟ್​ನಲ್ಲಿ ಇದರ ಬಗ್ಗೆ ಮಾಹಿತಿ ಪಡೆದಿದ್ದೇನೆ.
| ನಾಗೇಶ್ ಜಯನಗರ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five − three =
Remember me
