ಆನೇಕಲ್:‘ಅವನಿಗೆ ಚಿತ್ರದುರ್ಗದಲ್ಲಿ ಕೆಲಸ ಮಾಡಲು ಹೇಳು. ಇಲ್ಲಿ ನಾನು ಸಂಸದ, ಇಲ್ಲಿ ನೀನು ನಾನು ಹೇಳಿದ ಹಾಗೆ ಕೇಳು..’ ಹೀಗೆಂದು ಸಂಸದ ಡಿ.ಕೆ. ಸುರೇಶ್ ಅಧಿಕಾರಿಯೊಬ್ಬರ ಮೇಲೆ ಫುಲ್ ಗರಂ ಆಗಿದ್ದಷ್ಟೇ ಅಲ್ಲ, ತಾಕತ್ತಿದ್ದರೆ ನನ್ನ ಜೊತೆ ಬಂದು ಕೆಲಸ ಮಾಡಲು ಹೇಳು ಎಂದು ಇನ್ನೊಬ್ಬ ಸಂಸದರಿಗೆ ಸವಾಲನ್ನೂ ಎಸೆದಿದ್ದಾರೆ.
ಆನೇಕಲ್ ತಾಲ್ಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡುತ್ತಿದ್ದ ಹಾಗೆ ಇನ್ನೊಬ್ಬ ಸಂಸದರ ಹೆಸರು ಪ್ರಸ್ತಾಪವಾಗುತ್ತಿದ್ದಂತೆ ಡಿ.ಕೆ. ಸುರೇಶ್ ಸಿಟ್ಟಾಗಿದ್ದಾರೆ. ಹೀಗೆ ಸಂಸದರೊಬ್ಬರ ಹೆಸರನ್ನು ಪ್ರಸ್ತಾಪಿಸಿದ್ದಕ್ಕೆ ಆನೇಕಲ್ ತಹಸೀಲ್ದಾರ್​ಗೆ ಡಿ.ಕೆ. ಸುರೇಶ್​ ಕಟುವಾಗಿ ಮಾತನಾಡಿದ್ದಾರೆ.
ನೀನು ಬಿಜೆಪಿಯವರ ಹಿಂದೆ ಹೋಗಿ ಕೆಲಸ ಮಾಡಬೇಡ. ಅವನಿಗೆ ಚಿತ್ರದುರ್ಗದಲ್ಲಿ ಹೋಗಿ ಕೆಲಸ ಮಾಡಲು ಹೇಳು. ಇಲ್ಲಿ ನಾನು ಸಂಸದ ನಾನು ಹೇಳಿದ ಹಾಗೆ ಕೇಳು. ನಿನಗೆ ಇಲ್ಲಿನ ಸಂಸದ ಯಾರು ಅಂತ ಗೊತ್ತು ತಾನೇ? ನಾನಿನ್ನೂ ಗಟ್ಟಿಮುಟ್ಟಾಗಿ ಇದ್ದೀನಿ. ಅವನಿಗೆ ಚಿತ್ರದುರ್ಗದಲ್ಲಿ ಕೆಲಸ ಇದೆ, ಅದನ್ನು ಮಾಡಲಿಕ್ಕೆ ಹೇಳು. ಇಲ್ಲ ತಾಕತ್ತಿದ್ದರೆ ಬಂದು ನನ್ನ ಜತೆ ಕೆಲಸ ಮಾಡಲು ಹೇಳು ಎಂಬುದಾಗಿ ಡಿ.ಕೆ. ಸುರೇಶ್​ ಗದರಿದ್ದಾರೆ.
ಇದನ್ನೂ ಓದಿ:ಸೋಂಕಿತ ತಾಯಿಯ ಶವಸಂಸ್ಕಾರಕ್ಕೆ ಮುಂದಾದ ಮಗನಿಗೆ ಗ್ರಾಮಸ್ಥರಿಂದ ವಿರೋಧ; ಕಾರಣವೇನು, ಆಮೇಲೇನಾಯಿತು?
ಸರ್ಜಾಪುರ ತಿಂಡ್ಲು ಬಳಿ 300 ಹಾಸಿಗೆ ಆಸ್ಪತ್ರೆ ಮಾಡುವ ವಿಚಾರ ಸಂಬಂಧ ನಡೆಯುತ್ತಿದ್ದ ಮಾತುಕತೆ ಇಷ್ಟಕ್ಕೆಲ್ಲ ಕಾರಣವಾಗಿದೆ. ಚಿತ್ರದುರ್ಗ ಸಂಸದರಾಗಿರುವ ಆನೇಕಲ್ ನಾರಾಯಣ ಸ್ವಾಮಿ ಅವರು ಎರಡು ದಿನಗಳ ಹಿಂದೆ ಜಿಲ್ಲಾಧಿಕಾರಿ ಮತ್ತು ತಹಸೀಲ್ದಾರರ ಜೊತೆ ಸರ್ಜಾಪುರಕ್ಕೆ ಪರಿಶೀಲನೆಗೆ ಹೋಗಿದ್ದರು. ಇದನ್ನು ತಮ್ಮೆದುರು ತಹಸೀಲ್ದಾರ್ ಪ್ರಸ್ತಾಪಿಸಿದ್ದಕ್ಕೆ ಡಿ.ಕೆ. ಸುರೇಶ್​ ಸಿಟ್ಟಾಗಿ, ಚಿತ್ರದುರ್ಗ ಸಂಸದರ ಬಗ್ಗೆ ಏಕವಚನದಲ್ಲೇ ಮಾತನಾಡಿದರು.
ಶವಗಳು ಹುಟ್ಟುಹಾಕಿದ ಚಿಂತೆ!?: ಕರೊನಾ ಸೋಂಕು ಹರಡುವಿಕೆ ಬಗ್ಗೆ ಕಾಡುತ್ತಿವೆ ಈ 2 ಪ್ರಮುಖ ಪ್ರಶ್ನೆಗಳು!

ಮಗ ಮಾಡಿದ ಆ ಒಂದು ಕೆಲಸ ಅಮ್ಮನನ್ನೂ ಬಲಿ ಪಡೆಯಿತಾ?; ಪತಿ ಸತ್ತ ಕೆಲವೇ ಕ್ಷಣಗಳಲ್ಲಿ ಪತ್ನಿಗೂ ಸಾವು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − one =
Remember me
