
ಬೆಂಗಳೂರು:ಲೋಕಸಭೆ ಚುನಾವಣೆಯಲ್ಲಿ ಯಾವುದೇ ಮೈತ್ರಿ ಮಾಡಿಕೊಳ್ಳದೆ ಸ್ವತಂತ್ರವಾಗಿ ಸ್ಪರ್ಧೆ ಮಾಡಲಾಗುವುದು ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ(ಕೆಆರ್‌ಪಿಪಿ)ದ ಸಂಸ್ಥಾಪಕ ಮತ್ತು ಶಾಸಕ ಜನಾರ್ಧನ ರೆಡ್ಡಿ ಹೇಳಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಕ್ಷ ಸ್ಥಾಪನೆಯಾಗಿ ಒಂದು ವರ್ಷ ತುಂಬುತ್ತಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿಯೂ ಯಾರ ಜೊತೆಗೆಗೂ ಹೊಂದಾಣಿಕೆ ಮಾಡಿಕೊಳ್ಳದೆ ಎಂಟೊಂಬತ್ತು ಕ್ಷೇತ್ರದಲ್ಲಿ ಉತ್ತಮ ಸ್ಪರ್ಧೆ ಮಾಡಿದ್ದೇವೆ ಎಂದರು.ಯಾವುದೇ ಪ್ರಾದೇಶಿಕ ಪಕ್ಷದ ಪ್ರಾರಂಭ ಒಂದು ಎರಡು ಸ್ಥಾನದಿಂದಲೇ ಪ್ರಾರಂಭವಾಗಿವೆ. ಬಿಜೆಪಿ ಕೂಡ 2 ಕ್ಷೇತ್ರ ಗೆಲುವಿನ ಮೂಲಕವೇ ಹೆಜ್ಜೆ ಇಟ್ಟಿತ್ತು. ವಿಧಾನಸಭೆ ಚುನಾವಣೆಗೆ 4 ತಿಂಗಳು ಇದ್ದ ಸಂದರ್ಭದಲ್ಲಿ ಪಕ್ಷ ಹುಟ್ಟು ಹಾಕಲಾಗಿತ್ತು. ಈಗ ಪಕ್ಷ ತನ್ನ ನೆಲೆಯನ್ನು ವಿಸ್ತಾರ ಮಾಡಿಕೊಳ್ಳಲು ಪ್ರಯತ್ನ ನಡೆಸಿದೆ ಎಂದರು.ಬಿಜೆಪಿ ಮುಸ್ಲಿಂ ವಿರೋಧಿ ಪಕ್ಷವಾಗಿದೆ. ಭಾರತದಲ್ಲಿ ವಸುದೈವ ಕುಟುಂಬ ಸಂಸ್ಕೃತಿ ಇದೆ. ಆದರೆ, ಬಿಜೆಪಿ ಇದಕ್ಕೆ ತದ್ವಿರುದ್ದವಾಗಿದೆ. ಹಿಂದುತ್ವ ಮುಂದಿಟ್ಟು ಸಮಾಜದಲ್ಲಿ ಒಡಕು ಮೂಡಿಸಿ ಲಾಭ ಪಡೆಯಲು ಮುಂದಾಗಿದೆ ಎಂದರು.ರಾಮಣ್ಣ ಹೆಸರಿನಲ್ಲಿ ಪ್ರಾರಂಭಿಸಿದ್ದ ಪಕ್ಷ, ಇಂದು ನನ್ನ ಹೆಸರಿಗೆ ತ್ರಯೋದಶಿಯಂದೇ ನನಗೆ ವರ್ಗಾವಣೆಯಾಗಿದೆ. ಲೋಕಸಭೆ ಚುನಾವಣೆಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಪ್ರಯತ್ನ ಮಾಡಿ ನಮ್ಮ ಕಾಲ ಮೇಲೆ ನಾವು ನಿಲ್ಲಬೇಕು ಎನ್ನುವ ಗುರಿ ಇದೆ ಎಂದರು.ಗಂಗಾವತಿಯಲ್ಲಿ 2 ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿದ್ದರೂ ಜನರು ನನ್ನನ್ನು ಆರಿಸಿದ್ದಾರೆ. ಹಿಂದು, ಮುಸ್ಲಿಂ ಭಾಂಧವ್ಯವನ್ನೇ ಬೆಸೆಯುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಸರ್ವರಿಗೂ ಸಮಬಾಳು, ಸಮಪಾಲು ಸಿಗಬೇಕು. ಬಸವಣ್ಣನವರ ತತ್ವ, ಆದರ್ಶ ಆಚರಣೆ ಮುಖ್ಯ ಎಂದರು.ಎಸ್ಸಿ,ಎಸ್ಟಿ ರಿಸರ್ವೇಶನ್ ವ್ಯವಸ್ಥೆ ನಮ್ಮಲ್ಲಿದೆ. ಅದನ್ನು ಬಳಸಿಕೊಂಡು ಮೇಲಕ್ಕೆ ಬರ್ತಾರೆ. ಆದರೆ ಅಲ್ಲಿ ತಾತಾ, ಮುತ್ತಾತ ಆದ್ರೂ ಅವರ ಕುಟುಂಬವೇ ಇರುತ್ತೆ ಎಂದರು.
ಜಾತಿಗಣತಿಯ ಗೊಂದಲಸರ್ಕಾರ ಜಾತಿ ಗಣತಿ ಬಗ್ಗೆ ಮಾತನಾಡುತ್ತಿದೆ. 40- 50 ಜಾತಿಯನ್ನ ಈಗ ಗುರ್ತಿಸಬಹುದು.ಆದರೆ ಗಮನಕ್ಕೆ ಬಾರದ ನೂರಾರು ಜಾತಿಗಳಿವೆ. ಇವುಗಳನ್ನ ಯಾರೂ ಗುರ್ತಿಸುತ್ತಿಲ್ಲ. ಅವೈಜ್ಞಾನಿಕ ಜಾತಿ ಗಣತಿ ಮುಂದಿಟ್ಟು ಗೊಂದಲ ಮೂಡಿಸಲಾಗುತ್ತಿದೆ. ನೈಜ ಬದ್ದತೆ ಬದಲು ರಾಜಕಾರಣ ಮಾಡುವುದರಲ್ಲಿಯೇ ಕಾಲಹರಣ ಮಾಡಲಾಗುತ್ತಿದೆ ಎಂದರು.ಎಸ್.ಎಂ.ಕೃಷ್ಣ ಅವಧಿಯಲ್ಲಿ ರಾಜ್ಯ ಅಭಿವೃದ್ಧಿಯಾಗಿದ್ದು ಬಿಟ್ಟರೆ, ಬಳಿಕ ಅಭಿವೃದ್ದಿ ಮರೀಚಿಕೆ ಆಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದು 6 ತಿಂಗಳಾದರೂ ಅಭಿವೃದ್ಧಿ ಕನಸಾಗಿದೆ ಎಂದರು.
ಸಿದ್ದರಾಮಯ್ಯ ಮೇಲೆ ಆಕ್ರೋಶಡಿಕೆ ಶಿವಕುಮಾರ್ ಮೇಲಿನ ಸಿಬಿಐ ತನಿಖೆ ವಾಪಸ್ಸು ಪಡೆರುವುದು ಸರಿಯಲ್ಲ. ಹಿಂದೆ ಇದೇ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಗಣಿ ಪ್ರಕರಣವನ್ನು ಸಿಬಿಐಗೆ ವಹಿಸಿದ್ದಲ್ಲದೆ, ಒಂದು ಎಸ್‌ಐಟಿ ರಚನೆ ಮಾಡಿದ್ದರು. ಆಗ ನಾಗೇಂದ್ರ ಮೇಲೆ 25 ಚಾರ್ಜ್‌ಶೀಟ್ ಇದ್ದರೂ ಏನೂ ಮಾಡಲಿಲ್ಲ. ಡಿಕೆಶಿಗೆ ಒಂದು ನ್ಯಾಯ? ನಾಗೇಂದ್ರಗೆ ಒಂದು ನ್ಯಾಯವೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಂದೆ ಸ್ಥಾನದಲ್ಲಿ ಬಿಎಸ್‌ವೈನಾನು ಯಡಿಯೂರಪ್ಪನವರನ್ನ ತಂದೆ ಸ್ಥಾನದಲ್ಲಿ ನೋಡಿದ್ದೇನೆ. ಶ್ರೀರಾಮುಲು ಮೇಲೆ ಮಗುವನ್ನ ಜೋಪಾನ ಮಾಡುವಷ್ಟು ಅಭಿಮಾನವಿದೆ. ರಾಜಕೀಯವೇಬೇರೆ. ಸ್ನೇಹ ಸಂಬಂಧ ಬೇರೆ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 20 =
Remember me
