ಶಿವಮೊಗ್ಗ:ಮನೆಯಲ್ಲಿ ಆಯುಧಗಳನ್ನು ಇರಿಸಿ. ಅವು ಹರಿತವಾಗಿರಲಿ. ಬಂದೂಕಿಗೆ ಪರವಾನಗಿ ಪಡೆಯೋದನ್ನ ಮರೆಯದಿರಿ. ತರಕಾರಿ ಕತ್ತರಿಸೋ ಚಾಕು ಇದೆಯಲ್ವಾ ಮನೇಲಿ? ಅದರಿಂದ ಶತ್ರುಗಳ ತಲೆಯನ್ನೂ ಕತ್ತರಿಸಬಹುದು ಎಂದು ಬಿಜೆಪಿ ಸಂಸದೆ, ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಭಾನುವಾರ ಆಯೋಜಿಸಿದ್ದ ಹಿಂದೂ ಜಾಗರಣ ವೇದಿಕೆಯ 3ನೇ ತ್ರೈಮಾಸಿಕ ಪ್ರಾಂತ್ಯ ಸಮ್ಮೇಳನದಲ್ಲಿ ಮಾತನಾಡಿದ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್, ನಾನು ಸಂಸದೆ ಆಗಿರೋದೋ ಹಿಂದು ಧರ್ಮಕ್ಕಾಗಿ, ನನ್ನ ಕೊನೆಯುಸಿರು ಇರುವತನಕ ಹಿಂದು ಧರ್ಮದ ಪರವಾಗಿಯೇ ಮಾತನಾಡುವೆ, ಹೋರಾಡುವೆ ಎನ್ನುತ್ತಾ ಭಾಷಣದುದ್ದಕ್ಕೂ ಲವ್​ ಜಿಹಾದ್​ ವಿರುದ್ಧ ಆಕ್ರೋಶ ಹೊರಹಾಕಿದರು. ತರಕಾರಿ ಕತ್ತರಿಸೋ ಚಾಕು ಇದೆಯಲ್ವಾ ಮನೇಲಿ? ತರಕಾರಿಗಳನ್ನು ಚೆನ್ನಾಗಿ ಕತ್ತರಿಸಬಹುದು ಎಂದಾದರೆ ಅಂತಹ ಚಾಕುಗಳಿಂದ ಶತ್ರುಗಳ ತಲೆಯನ್ನೂ ಕತ್ತರಿಸಬಹುದು… ಎಂದರು.
ತಮ್ಮ ರಕ್ಷಣೆಯನ್ನೇ ತಾವೇ ಮಾಡಿಕೊಳ್ಳುವ ಮಟ್ಟಕ್ಕೆ ಹೆಣ್ಮಕ್ಕಳು ಬೆಳೆಯಬೇಕು. ಅದಕ್ಕಾಗಿ ಹೆಣ್ಣು ಮಕ್ಕಳನ್ನು ಜಾಗೃತಗೊಳಿಸಬೇಕು, ನಮ್ಮ ಹೆಣ್ಣುಮಕ್ಕಳನ್ನು ನಡೆದಾಡುವ ಆಟಂ ಬಾಂಬ್​ಗಳಂತೆ ರೂಪಿಸಬೇಕು. ಯಾವ ಸಮಯ ಬರುತ್ತೋ ಗೊತ್ತಿಲ್ಲ. ಹೆಣ್ಮಕ್ಕಳು ತರಕಾರಿ ಕತ್ತರಿಸುವ ಚಾಕುಗಳನ್ನು ಹರಿತವಾಗಿ ಇಟ್ಟುಕೊಳ್ಳಬೇಕು. ಅದರಿಂದ ಶತ್ರುಗಳ ತಲೆಯನ್ನೂ ಕತ್ತರಿಸಬಹುದು. ಅವರವರ ಆತ್ಮರಕ್ಷಣೆಗೆ ಅವರೇ ಸಿದ್ಧರಾಗಬೇಕು ಎಂದು ಕರೆ ನೀಡಿದರು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಆಸ್ಪತ್ರೆಗೆ ದಾಖಲು

ಮಾಸ್ಕ್​ ಕಡ್ಡಾಯ, ನ್ಯೂ ಇಯರ್​ ಪಾರ್ಟಿಗೆ ಗರ್ಭಿಣಿ-ಮಕ್ಕಳಿಗಿಲ್ಲ ಅವಕಾಶ, ಡಬಲ್​ ಡೋಸ್​ ಪಡೆದಿಲ್ಲ ಅಂದ್ರೆ ಬಾರ್​ಗೂ ಎಂಟ್ರಿಯಿಲ್ಲ: ಆರ್​.ಅಶೋಕ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:9 + 4 =
Remember me
