ಶಿವಮೊಗ್ಗ:ಕಳೆದ ಫೆಬ್ರವರಿ 20ರಂದು ಹತ್ಯೆಗೀಡಾದ ಹಿಂದೂ ಕಾರ್ಯಕರ್ತ ಶಿವಮೊಗ್ಗದ ಹರ್ಷನ ಮನೆಗೆ ಬಿಜೆಪಿ ಸಂಸದೆ, ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್ ಭೇಟಿ ನೀಡಿ ಹರ್ಷನ ಕುಟುಂಬಸ್ಥರಿಗೆ ಧೈರ್ಯ ತುಂಬಿದರು.
ಶಿವಮೊಗ್ಗದಲ್ಲಿ ಭಾನುವಾರ ಆಯೋಜಿಸಿದ್ದ ಹಿಂದೂ ಜಾಗರಣ ವೇದಿಕೆಯ 3ನೇ ತ್ರೈಮಾಸಿಕ ಪ್ರಾಂತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಾಧ್ವಿ ಪ್ರಜ್ಞಾ, ಇದೇ ವೇಳೆ ಹರ್ಷನ ಮನೆಗೂ ಭೇಟಿ ನೀಡಿದ್ದರು.ಬಳಿಕ ಮಾತನಾಡಿದ ಅವರು, ಹರ್ಷ ಹಿಂದೂ ಧರ್ಮದ ಜಾಗೃತಿಗಾಗಿ ಸಾವನ್ನಪ್ಪಿದ್ದಾನೆ. ಭೀಭತ್ಸವಾಗಿ ಹತ್ಯೆ ಮಾಡಲಾಗಿದೆ. ಪ್ರತಿಯೊಬ್ಬ ಹಿಂದೂ ಎಚ್ಚರಗೊಂಡಾಗ ಹೀಗೆ ನಡೆಯಲಿದೆ. ಆದರೆ ಹರ್ಷನ ಹಾಗೇ ಪ್ರತಿಯೊಬ್ಬ ಹುಟ್ಟುತ್ತಿರುತ್ತಾನೆ. ಹರ್ಷನ ಕುಟುಂಬದ ಜೊತೆಗೆ ಹಿಂದೂ ಸಮಾಜವಿದೆ. ಹರ್ಷನ ಸಾವು ವ್ಯರ್ಥವಾಗಲು ಬಿಡಲ್ಲ ಎಂದರು.
ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರು ಭಯೋತ್ಪಾದಕತೆಯನ್ನು ಸಮರ್ಥವಾಗಿ ಮಟ್ಟ ಹಾಕುತ್ತಾರೆ. ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನ್ ಗಿರಿ ದತ್ತಪೀಠಕ್ಕೆ ಭೇಟಿ ನೀಡಲಿದ್ದೇನೆ. ಶಂಕರಾಚಾರ್ಯರು ಸಂಚಾರ ಮಾಡಿದ ನಾಡಿದು. ನಾನು ದತ್ತ ಭಗವಾನ್​ರ ಭಕ್ತೆಯೂ ಹೌದು. ಹಾಗಾಗಿ ದತ್ತಪೀಠದಲ್ಲಿ ಪೂಜೆ ಸಲ್ಲಿಸಲಿದ್ದೇನೆ. ದತ್ತ ಪೀಠದ ವಿವಾದ ಇತರೆ ವಿವಾದಗಳಂತೆ ಶೀಘ್ರವಾಗಿ ಬಗೆಹರಿಯುವ ವಿಶ್ವಾಸವಿದೆ. ಪಕ್ಷ ಬಯಸಿದರೆ ಮಧ್ಯಪ್ರದೇಶ ಹಾಗೂ ಕರ್ನಾಟಕದ ಸಮಾವೇಶಗಳಲ್ಲಿ ಪಾಲ್ಗೊಳ್ಳಲಿದ್ದೇನೆ ಎಂದರು.
ತರಕಾರಿ ಕತ್ತರಿಸೋ ಚಾಕು ಇದೆಯಲ್ವಾ ಮನೇಲಿ? ಅದರಿಂದ ಶತ್ರುಗಳ ತಲೆಯನ್ನೂ ಕತ್ತರಿಸಬಹುದು: ಸಾಧ್ವಿ ಪ್ರಜ್ಞಾ

ಮಾಸ್ಕ್​ ಕಡ್ಡಾಯ, ನ್ಯೂ ಇಯರ್​ ಪಾರ್ಟಿಗೆ ಗರ್ಭಿಣಿ-ಮಕ್ಕಳಿಗಿಲ್ಲ ಅವಕಾಶ, ಡಬಲ್​ ಡೋಸ್​ ಪಡೆದಿಲ್ಲ ಅಂದ್ರೆ ಬಾರ್​ಗೂ ಎಂಟ್ರಿಯಿಲ್ಲ: ಆರ್​.ಅಶೋಕ್​

ಚಾಮರಾಜನಗರದಲ್ಲಿ ದುರಂತ: ಕಲ್ಲು ಕ್ವಾರೆಯಲ್ಲಿ ಬಂಡೆ ಕುಸಿದು ಸ್ಥಳದಲ್ಲೇ ಇಬ್ಬರ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − six =
Remember me
