ಬಾಗಲಕೋಟೆ:ರಾಜ್ಯದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಕುರ್ಚಿ ಕಿತ್ತಾಟದ ವಿಚಾರಕ್ಕೆ ಇಂದು ಬಾಗಲಕೋಟೆಯಲ್ಲಿ ಪ್ರತಿಕ್ರಿಯಿಸಿದ ಸಂಸದ ಗೋವಿಂದ ಕಾರಜೋಳ, ಸಿಎಂ ಸಿದ್ದರಾಮಯ್ಯ ಆಡಳಿತ ಕುರಿತು ವ್ಯಂಗ್ಯವಾಡಿದರು.
ಇದನ್ನೂ ಓದಿ:ಭಾರತ-ರಷ್ಯಾ ವಿಶ್ವಾಸಾರ್ಹ ಸ್ನೇಹಕ್ಕೆ ಇದೇ ಬುನಾದಿ; ‘ನಮೋ’ ಹೇಳಿದ್ದೇನು ಗೊತ್ತಾ?
“ರಾಜ್ಯದಲ್ಲಿ ಸರ್ಕಾರವಾಗಿ ಉಳಿದಿಲ್ಲ, ಮೂರು ಭಾಗಗಳಾಗಿದೆ. ಒಂದು ಸಿದ್ದರಾಮಯ್ಯನವರದ್ದು, ಎರಡನೆಯದು ಡಿ.ಕೆ. ಶಿವಕುಮಾರ್ ಗುಂಪು ಮತ್ತೊಂದು ವೀರಶೈವ ಲಿಂಗಾಯತರದೊಂದು ಗುಂಪು. ನಮಗೆ ಸಿದ್ದರಾಮಯ್ಯ ಸ್ಥಾನಗಳನ್ನು ಬಿಟ್ಟು ಕೊಡಬೇಕು ಅಂತ ಒತ್ತಾಯ ಮಾಡುತ್ತಿದ್ದಾರೆ. ಅನೇಕ ಒತ್ತಾಯಗಳನ್ನು ಮಾಧ್ಯಮಗಳ ಮೂಲಕ ನಾನು ಕೂಡ ನೋಡಿದ್ದೇನೆ” ಎಂದಿದ್ದಾರೆ.
“ಸಿದ್ದರಾಮಯ್ಯನವರು ಆಡಳಿತದ ಮೇಲೆ ಹಿಡಿತವನ್ನು ಕಳೆದುಕೊಂಡಿದ್ದಾರೆ. ಕಾಂಗ್ರೆಸ್​ನ ಶಾಸಕರು ಮತ್ತು ಮುಖಂಡರನ್ನು ಹದ್ದುಬಸ್ತಿನಲ್ಲಿ ಇಡಲು ಅವರಿಂದ ಸಾಧ್ಯವಾಗುತ್ತಿಲ್ಲ. ಹೈಕಮಾಂಡ್​ಗೂ ಪಕ್ಷದ ಶಾಸಕರು ಹಾಗೂ ಮುಖಂಡರನ್ನು ಶಿಸ್ತಿನಲ್ಲಿಡಲು ಆಗುತ್ತಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಇದು ಆಡಳಿತಕ್ಕೆ ಒಳ್ಳೆಯ ಲಕ್ಷಣವಲ್ಲ. ಸಿದ್ದರಾಮಯ್ಯನವರಿಗೆ ನನ್ನ ಸಲಹೆ ಏನೂ ಅಂದರೆ ಒಂದು ಶಾಸಕಾಂಗ ಪಕ್ಷದ ಸಭೆ ಕರೆದು ಯಾರಿಗೆ ಬಹುಮತ ಬರುತ್ತದೆ ಎಂಬುದನ್ನು ನೋಡಿ, ಅವರಿಗೆ ಸ್ಥಾನ ಬಿಟ್ಟು ಕೊಡುವುದು ಸೂಕ್ತ” ಎಂದರು.
ಸುದೀಪ್​ ಚಿತ್ರದಲ್ಲಿ ಚಾನ್ಸ್ ಕೇಳಿದ್ರಾ ನಟ ದರ್ಶನ್​? ಶಾಕಿಂಗ್ ಆಗಿದೆ ‘ಹುಚ್ಚ’ ನಿರ್ಮಾಪಕರು ಕೊಟ್ಟ ಪ್ರತಿಕ್ರಿಯೆ

ಅಂದು ಧೋನಿ ಕ್ಯಾಪ್ಟನ್ಸಿಯಲ್ಲಿ ಗೆದ್ದ ಭಾರತ ತಂಡಕ್ಕೆ ಬಿಸಿಸಿಐ ಕೊಟ್ಟ ಬಹುಮಾನ ಹಣವೆಷ್ಟು? ಇಲ್ಲಿದೆ ಸಂಪೂರ್ಣ ವಿವರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + one =
Remember me
