ಕೋಲಾರ:ಸಚಿವರ ಮುಂದೆಯೇ ಶಾಸಕ ಮತ್ತು ಸಂಸದರ ನಡುವೆ ವಾಗ್ವಾದ ನಡೆದಿದೆ.
ಮಾಲೂರಿನ ಕೊಮ್ಮನಹಳ್ಳಿ ಬಳಿಯ ನಂಜೇಗೌಡ ಮಾಲೀಕತ್ವದ ಕ್ರಷರ್​ಗೆ ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ. ಪಾಟೀಲ್ ಗುರುವಾರ ಆಗಮಿಸಿದ್ದರು. ಈ ವೇಳೆ ಮಾತನಾಡಿದ ಕೋಲಾರ ಸಂಸದ ಮುನಿಸ್ವಾಮಿ, ‘ಸರ್ಕಾರಿ ಗುಂಡುತೋಪಿನಲ್ಲಿ ಕ್ರಷರ್ ಮಾಡಿದ್ದಾರೆ’ ಎನ್ನುತ್ತಿದ್ದಂತೆ ಸಿಟ್ಟಿಗೆದ್ದ ಮಾಲೂರು ಶಾಸಕ ನಂಜೇಗೌಡ, ಸಂಸದರನ್ನು ಬಹಿರಂಗವಾಗಿಯೇ ತರಾಟೆಗೆ ತೆಗೆದುಕೊಂಡರು.ಇದನ್ನೂ ಓದಿರಿಶರವೇಗದ ರೈಲಿನ ಎದುರು ಧರ್ಮೇಗೌಡ ನಿಂತಿದ್ಹೇಗೆ? ರೈಲು ಚಾಲಕ ಬಾಯ್ಬಿಟ್ಟ ಭಯಾನಕ ಸತ್ಯ
‘ಇದೆಲ್ಲಾ ಬಿಡಪ್ಪ, ವೈಯಕ್ತಿಕವಾಗಿ ತಗೋಬೇಡ’ ಎಂದು ಶಾಸಕರು ಹೇಳುತ್ತಿದ್ದಂತೆ ಪ್ರತಿಕ್ರಿಯಿಸಿದ ಸಂಸದರು, ‘ನೀವೂ ಇದೆಲ್ಲ ಬಿಡಿ. ನನಗೆ ಎಲ್ಲ ಗೊತ್ತಿದೆ’ ಎಂದರು.
‘ರಾಜಕೀಯವನ್ನು ರಾಜಕೀಯವಾಗಿ ಎದುರಿಸಿ. ವೈಯಕ್ತಿಕ ಬೇಡ. ನೀನು ಗಾಳಿಯಲ್ಲಿ ಬಂದಿದ್ದೀಯ. ಗಾಳಿಯಲ್ಲೇ ಹೋಗ್ತೀಯ ಬಿಡು’ ಎಂದು ಶಾಸಕರು ತಿರುಗೇಟು ನೀಡಿದರು. ಅಲ್ಲದೆ ‘ನಾವಿಬ್ಬರೂ ಒಂದೇ ಹೋಬಳಿಯವರು. ಇದೆಲ್ಲ ಬಿಟ್ಟು ಬಿಡು’ ಎಂದು ಶಾಸಕರು ಹೇಳುತ್ತಿದ್ದಂತೆ ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು, ‘ಒಂದೇ ಹೋಬಳಿಯವರು ಆದರೇನು?’ ಎಂದು ಖಾರವಾಗಿಯೇ ಪ್ರಶ್ನಿಸಿದರು.
ಸುಮ್ಮನಿರಿ ಕಿತ್ತಾಡಬೇಡಿ ಎಂದು ಸಚಿವರು ಹೇಳಿದರೂ ಶಾಸಕ-ಸಂಸದರ ನಡುವಿನ ವಾಗ್ವಾದ ತಾರಕಕ್ಕೇರಿತ್ತು. ಮೂಕಪ್ರೇಕ್ಷಕರಂತೆ ಸಾರ್ವಜನಿಕರು ನೋಡುತ್ತ ನಿಂತಿದ್ದರು.
ಗ್ರಾಪಂ ಚುನಾವಣೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಕಾಂಗ್ರೆಸ್​​ಗೆ ಶುರುವಾಯ್ತು ಟೆನ್ಷನ್​!

ಪ್ರಣಾಳಿಕೆ ಪತ್ರದಲ್ಲೇ ಮತದಾರರನ್ನು ಬೆದರಿಸಿದ್ದ ಗಂಡೆದೆ ಗಂಗಮ್ಮನಿಗೆ ಬಿದ್ದ ಮತ ಎಷ್ಟು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + twelve =
Remember me
