ಮೈಸೂರು:ಹಲವು ಕೋಲಾಹಲಕ್ಕೆ ಕಾರಣವಾಗಿರುವ ಐಪಿಎಸ್ ಅಧಿಕಾರಿ ರೂಪಾ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಜಟಪಟಿ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದು, ಡಿ. ರೂಪಾ ಎತ್ತಿರುವ ಪ್ರಶ್ನೆಗಳು ನೈತಿಕವಾಗಿ ಹಾಗೂ ಕಾನೂನಾತ್ಮಕವಾಗಿವೆ. ಹೀಗಾಗಿ ಆರೋಪಗಳಿಗೆ ಸಂಬಂಧಿಸಿದಂತೆ ವಾಸ್ತವ ಏನು ನಡೆದಿದೆ ಎಂಬುದರ ಬಗ್ಗೆ ಪತ್ರಕರ್ತರು ಸತ್ಯಶೋಧನೆ ಮಾಡಬೇಕಿದೆ ಎಂದು ಹೇಳಿದ್ದಾರೆ.
ಆರೋಪಗಳ ಬಗ್ಗೆ ಸತ್ಯಾಸತ್ಯತೆ ಹೊರಬರಬೇಕು. ತನಿಖೆ ಮಾಡಲು ಮೊದಲು ಒಂದು ಕಮಿಟಿ ಮಾಡುವಂತೆ ಪತ್ರಕರ್ತರು ಸರ್ಕಾರಕ್ಕೆ ತಿಳಿಸಬೇಕು ಎಂದು ಪ್ರತಾಪ್ ಸಿಂಹ ಹೇಳಿದರು.
ಕರೊನಾ ಸಂದರ್ಭದಲ್ಲಿ ಚಾಮರಾಜನಗರದಲ್ಲಿ ನಡೆದ ಆಕ್ಸಿಜನ್ ದುರಂತದಿಂದ 24 ಜನರು ಮೃತಪಟ್ಟಿದ್ದರು. ಈ ವೇಳೆ ಮೈಸೂರಿನ ಮೇಲೆ ಆರೋಪ ಬಂತು. ಬಳಿಕ ಆಕ್ಸಿಜನ್ ನೀಡುವ ಜವಾಬ್ದಾರಿಯನ್ನು ನಾನು ಹಾಗೂ ಉಸ್ತುವಾರಿ ಸಚಿವರು ತೆಗೆದುಕೊಂಡೆವು. ಕರೊನಾದಿಂದಾಗಿ ಜಿಲ್ಲೆಯಲ್ಲಿ ಅನೇಕ ಜನರು ಸಾವನ್ನಪ್ಪಿದರು. ಈ ವೇಳೆ ಅನಗತ್ಯ ವೀಡಿಯೋ ಕಾನ್ಫಿರೆನ್ಸ್ ಮಾಡಿ ಕಾಲಹರಣ ಮಾಡುವ ಬದಲು ತಪಾಸಣೆ ಮಾಡಬೇಕು ಎಂದು ಹೇಳಿದಾಗ ನಮ್ಮ ಮೇಲೆಯೇ ಏನೇನೋ ಆರೋಪ ಬಂತು. ಇಂದು ಡಿ.ರೂಪ ಅಂದಿನ ಆರೋಪದ ಪ್ರಶ್ನೆಗಳನ್ನು ಎತ್ತಿದ್ದಾರೆ. ಹಾಸನದಲ್ಲಿ ಅವರಿದ್ದಾಗ ಏನೇನು ನಡೆದಿತ್ತು ಎಂಬುದನ್ನು ತಿಳಿದು ಉಳಿದವರನ್ನು ಪ್ರಶ್ನೆ ಕೇಳಿ ಎಂದು ಪ್ರತಾಪ್ ಸಿಂಹ ಹೇಳಿದರು.
ಇದೇ ವೇಳೆ ಸರ್ಕಾರಕ್ಕೆ ರಾಜ್ಯದಲ್ಲಿ ಅಧಿಕಾರಿಗಳ ಹಿಡಿತ ಇಲ್ಲ ಎಂಬ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲ ಹೇಳಿಕೆ ವಿಚಾರವಾಗಿ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದು, ಶ್ರವಣ ಬೆಳಗೊಳದಲ್ಲಿ ಮಹಾಮಸ್ತಕಾಭಿಷೇಕ ನಡೆದಿದ್ದಾಗ ಯಾವ ಸರ್ಕಾರ ಆಡಳಿತ ನಡೆಸುತ್ತಿತ್ತು. ಇವತ್ತು ಕಟಕಟೆಯಲ್ಲಿ ನಿಂತಿರುವ ಐಎಎಸ್ ಅಧಿಕಾರಿ ಅಂದು ಹಾಸನದ ಡಿಸಿ ಆಗಿದ್ದರು. ಎ. ಮಂಜು ಉಸ್ತುವಾರಿ ಸಚಿವರಾಗಿದ್ದಾಗ ಅವರ ಜತೆ ಬೀದಿ ರಂಪಾಟವಾಗಿತ್ತು. ಈ ವೇಳೆ ಹೆಲಿಕಾಪ್ಟರ್​​ನಲ್ಲಿ ಸಿದ್ದರಾಮಯ್ಯ ಯಾರನ್ನು ಕರೆದುಕೊಂಡು ಹೋಗಿದ್ದರು? ಎಂದು ಪ್ರಶ್ನಿಸಿದ್ದಾರೆ.
ಅಧಿಕಾರಿಗಳ ಬಗ್ಗೆ ಹೇಳುವ ಕಾಂಗ್ರೆಸ್ಸಿಗರು ಮೈಸೂರಿನ ಎಟಿಐನಲ್ಲಿ ರಶ್ಮಿ ಮಹೇಶ್ ಮೇಲೆ ಆಕ್ರಮಣವಾಗಿತ್ತು. ಅವತ್ತು ಅಧಿಕಾರಿಗಳ ಪರಿಸ್ಥಿತಿ ಏನಾಗಿತ್ತು? ಐಎಎಸ್ ಸಿ.ಶಿಖಾ ಅವರ ಮೇಲೆ ಕೆ.ಮರೀಗೌಡ ಅವಾಚ್ಯ ಶಬ್ದ ಬಳಸಿದಾಗ ಸಿದ್ದರಾಮಯ್ಯ ಸರ್ಕಾರ ಏನು ಮಾಡಿತ್ತು? ಮಲ್ಲಿಕಾರ್ಜುನ ಬಂಡೆಯನ್ನು ಡ್ರಾಗಾರ್​ನಲ್ಲಿ ಕೊಂದಿದ್ದಾಗ ಯಾವ ಸರ್ಕಾರವಿತ್ತು? ಪೊಲೀಸ್ ಅಧಿಕಾರಿ ಗಣಪತಿ ಆತ್ಮಹತ್ಯೆಯಾದಾಗ ಅಧಿಕಾರಿಗಳ ಸ್ಥಿತಿ ಏನಾಗಿತ್ತು? ಎಂದು ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲ ಅವರಿಗೆ ಮರು ಪ್ರಶ್ನೆ ಹಾಕಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 14 =
Remember me
