ಮಂಡ್ಯ:ಮೈಸೂರು-ಬೆಂಗಳೂರು ದಶಪಥ ರಸ್ತೆಯನ್ನು ವೀಕ್ಷಿಸಲು ಗುರುವಾರ ಸಂಸದ ಪ್ರತಾಪ್ ಸಿಂಹ ಬಂದಿದ್ದರು. ಈ ವೇಳೆ ಅವರ ಕಾರನ್ನು ತಡೆದ ಯುವ ರೈತನೊಬ್ಬ, ರೈತರ ಭೂಮಿಯನ್ನು ಸ್ವಾದೀನ ಮಾಡಿಕೊಂಡಿದ್ದಾರೆ. ಆದರೆ ಸೂಕ್ತ ಪರಿಹಾರ ಸಿಕ್ಕಿಲ್ಲ. ದಯವಿಟ್ಟು ಪರಿಹಾರ ಕೊಡಿಸಿ ಎಂದು ಮನವಿ ಮಾಡಿದರು.
ಮೈಸೂರು-ಬೆಂಗಳೂರು ಹೆದ್ದಾರಿ ಬಗ್ಗೆ ಶ್ರೀರಂಗಪಟ್ಟಣ ತಾಲೂಕಿನ ಕೆ.ಶೆಟ್ಟಿಹಳ್ಳಿ ಗ್ರಾಮದ ಬಳಿ ಕಾರಿನಲ್ಲಿ ಫೇಸ್​ಬುಕ್ ಮೂಲಕ ಮಾಹಿತಿ ಪ್ರತಾಪ್ ಸಿಂಹ ಮಾಹಿತಿ ನೀಡುತ್ತಿದ್ದರು. ಈ ವೇಳೆ ಸಂಸದರ ಕಾರನ್ನು ತಡೆದ ಯುವಕ, ಮೈಸೂರು-ಕುಶಾಲನಗರ ರಸ್ತೆಗಾಗಿ ರೈತರ ಜಮೀನು ಸ್ವಾದೀನ ಮಾಡಿಕೊಳ್ಳಲಾಗಿದೆ. ಇನ್ನೂ ಪರಿಹಾರ ಕೊಟ್ಟಿಲ್ಲ ಎಂದು ಅಳಲು ತೋಡಿಕೊಂಡರು.
ಯುವಕನ ಮನವಿಗೆ ಸ್ಪಂದಿಸಿದ ಸಂಸದರು, ಇನ್ನೊಂದು ವಾರ ಸಮಯ ಕೊಡಿ. ನೀವು ಭೂಮಿ‌ ಕೊಟ್ಟಿದ್ದೀರಾ, ಪರಿಹಾರ ಕೊಡಿಸ್ತೇನೆ. ನನ್ನ ಕಚೇರಿಗೆ ಬನ್ನಿ, ಅಧಿಕಾರಿಗಳೊಂದಿಗೆ ನಾನೇ ಮಾತನಾಡಿ ಪರಿಹಾರ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು. ಸಂಸದರ ಭರವಸೆ ಮಾತಿಗೆ ಧನ್ಯವಾದ ತಿಳಿಸಿದ ಯುವಕ, ನಂತರ ಸಂಸದರ ಜತೆಗೆ ಫೋಟೋ ತೆಗೆಸಿಕೊಂಡರು.
ಕುಕ್ಕೆಯಲ್ಲಿ ನ.20ರಂದು ಮಧ್ಯಾಹ್ನವರೆಗೆ ದೇವರ ದರ್ಶನವಿಲ್ಲ

ಇಂತಹ ಹೆಂಗಸು ನನಗೆ ಬೇಡ, ಮಗನೇ ನಿನ್ನ ಅಮ್ಮ ಸರಿಯಿಲ್ಲ, ಆಕೆ ಜತೆ ಇರಬೇಡ… ಎಂದು ಮನದ ನೋವು ಬಿಚ್ಚಿಟ್ಟು ದುರಂತ ಅಂತ್ಯ ಕಂಡ ತಂದೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × two =
Remember me
