ಮೈಸೂರು:ಸನಾತನ ಧರ್ಮವನ್ನು ಡೇಂಘಿ ಮತ್ತು ಮಲೇರಿಯಾಗೆ ಹೋಲಿಕೆ ಮಾಡಿದ ತಮಿಳುನಾಡು ಸಿಎಂ ಪುತ್ರ ಹಾಗೂ ಸಚಿವ ಉದಯನಿಧಿ ಸ್ಟಾಲಿನ್​ನನ್ನು ಸಂಸದ ಪ್ರತಾಪ್​ ಸಿಂಹ ಸೊಳ್ಳೆ ಮತ್ತು ನೊಣಗಳಿಗೆ ಹೋಲಿಕೆ ಮಾಡಿ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್​ ಸಿಂಹ, ಸೂರ್ಯನ ಸುತ್ತ ಭೂಮಿ ಸುತ್ತುತ್ತಿದೆ ಎಂದು ಹೇಳಿದ ಏಕೈಕ ಧರ್ಮ ಅಂದರೆ ಅದು ಹಿಂದು ಧರ್ಮ ಮಾತ್ರ. ಈ ಖಗೋಳ ವಿಜ್ಞಾನಕ್ಕೆ ನಮ್ಮ ಋಷಿಮುನಿಗಳು ಹಿಂದಿನ ಕಾಲದಲ್ಲಿಯೇ ಕೊಡುಗೆ ನೀಡಿದ್ದಾರೆ. ಆದರೆ ಬೇರೆ ಧರ್ಮಗಳಿಗೆ ಖಗೋಳ ವಿಜ್ಞಾನದ ಬಗ್ಗೆ ಅರಿವೇ ಇರಲಿಲ್ಲ ಎಂದರು.
ಭೂಮಿ ಸುತ್ತ ಸೂರ್ಯ ಸುತ್ತುತ್ತಾನೆ ಅಂತ ಅವರು ಹೇಳ್ತಾರೆ. ಹಿಂದು ಧರ್ಮದ ಬಗ್ಗೆ ಅರಿವೇ ಇಲ್ಲದೆ, ಜ್ಞಾನ ಇಲ್ಲದೆ ಅಸಂಬದ್ಧ ಮಾತುಗಳನ್ನು ಆಡುತ್ತಾರೆ. ಏಳು ನೂರು ವರ್ಷಗಳ ಮುಸಲ್ಮಾನರ ದಾಳಿಯನ್ನು ಮತ್ತು ಇನ್ನೂರು ವರ್ಷಗಳ ಕ್ರೈಸ್ತರ ದಾಳಿಯನ್ನು ಸಹಿಸಿಕೊಂಡು ಇವತ್ತಿಗೂ ಶೇ. 80 ರಷ್ಟು ಹಿಂದುಗಳು ಈ ದೇಶದಲ್ಲಿ ಇದಾರೆ ಅಂದ್ರೆ, ಹಿಂದು ಧರ್ಮಕ್ಕೆ ಈ ಸೊಳ್ಳೆ, ನೊಣಗಳನ್ನೆಲ್ಲ ನುಂಗಿ ಜೀರ್ಣಸಿಕೊಳ್ಳುವ ಶಕ್ತಿ ಇದೆ ಎಂದರ್ಥ ಎಂದು ಪ್ರತಾಪ್​ ಸಿಂಹ ಖಡಕ್​ ತಿರುಗೇಟು ನೀಡಿದರು.
ಇದನ್ನೂ ಓದಿ:ಡಿಜಿಟಲ್ ಕ್ರಾಂತಿಯ ಮೂಲಕ ಕೃಷಿಯಲ್ಲಿ ಪರಿವರ್ತನೆ: ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್
ಇದೇ ವೇಳೆ ಮಹಿಷ ದಸರಾ ಆಚರಣೆ ವಿಚಾರವಾಗಿ ಪ್ರತಿಕ್ರಿಯಿಸಿ, ತಾಯಿ ಆಶೀರ್ವಾದ ಪಡೆಯುವುದಕ್ಕೆ ಚಾಮುಂಡಿ ಬೆಟ್ಟಕ್ಕೆ ದಿನ ಸಾವಿರಾರು ಜನ ಬರ್ತಾರೆ. ನಂಬಿಕಸ್ಥರಿಗೆ ಮಾತ್ರ ತಾಯಿ ಇರೋದು. ಅದನ್ನು ಚಾಮುಂಡಿ ಬೆಟ್ಟ ಅಂತಾರೆ ಹೊರತು ಮಹಿಷ ಬೆಟ್ಟ ಅನ್ನಲ್ಲ. ಮಹಿಷ ದಸರಾ ಮಾಡಲು ನಾವು ಬಿಡಲ್ಲ. ಆ ದಿನ ನಾನು ಅಲ್ಲೇ ಇರ್ತೀನಿ ಸಂಘರ್ಷ ಆದ್ರೂ ಪರ್ವಾಗಿಲ್ಲ. ಆದರ, ಮಹಿಷ ದಸರಾ ಮಾಡಲು ಮಾತ್ರ ನಾನು ಬಿಡಲ್ಲ ಎಂದು ಸವಾಲು ಹಾಕಿದರು.
ಮಹಿಷ ದಸರಾ ಮಾಡುವವರು ಮನೆಯಲ್ಲೇ ಫೋಟೋ ಇಟ್ಟು ಪೂಜೆ ಮಾಡಲಿ. ಮಹಿಷನಂತೆ ಮಗನನ್ನು ಕೊಡು ಎಂದು ಬೇಡಿ ಕೊಳ್ಳಲಿ ಎನ್ನುವ ಮೂಲಕ ಮಹಿಷ ದಸರಾ ಆಚರಣೆಗೆ ಮುಂದಾದ ಪ್ರಗತಿಪರರಿಗೆ ಪ್ರತಾಪ್ ಸಿಂಹ ಟಾಂಗ್ ನೀಡಿದರು. ಬಿಜೆಪಿ ಸರ್ಕಾರ ಇದ್ದಾಗ ಇಂತಹ ಅನಾಚರವನ್ನು ನಿಲ್ಲಿಸಿದ್ದೇವೆ. ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಮಹಿಷ ದಸರಾಗೆ ಅನುಮತಿ ಕೊಟ್ಟಿದ್ದರು. ಆದರೆ, ಈ ಬಾರಿ ಮಹಿಷ ದಸರಾ ಆಚರಣೆ ಅವಕಾಶ ಕೊಡಬೇಡಿ ಎಂದು ಮುಖ್ಯಮಂತ್ರಿ, ಜಿಲ್ಲಾಡಳಿತ ಮತ್ತು ಪೊಲೀಸರಿಗೆ ಕೇಳಿಕೊಳ್ಳುತ್ತೇನೆ ಎಂದರು.
ಜಿ-20 ಶೃಂಗಸಭೆ ವೇಳೆ 15 ದೇಶದ ನಾಯಕರ ಜತೆ ಪ್ರಧಾನಿ ಮೋದಿ ಪ್ರತ್ಯೇಕ ದ್ವಿಪಕ್ಷೀಯ ಸಭೆ

ಚಂದ್ರನಲ್ಲಿ ಎಕರೆಗಟ್ಟಲೆ ಜಮೀನು ಖರೀದಿಸಿ ಪತ್ನಿಗೆ ಉಡುಗೊರೆ ನೀಡಿದ ಪತಿ

ಬಂಗಾರ, ಬೆಳ್ಳಿ ದರ ಕೊಂಚ ಇಳಿಕೆ; ಬೆಂಗಳೂರಿನಲ್ಲಿ ಇಂದು ಚಿನ್ನದ ದರ ಎಷ್ಟಿದೆ?

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:six + 18 =
Remember me
