ಮೈಸೂರು:ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ವಿರುದ್ಧ ಸುತ್ತೂರು ಶ್ರೀಗಳ ಎದುರೇ ಸಂಸದ ಶ್ರೀನಿವಾಸ್ ಪ್ರಸಾದ್ ಅಸಮಾಧಾನ ಹೊರ​ಹಾಕಿದ್ದಾರೆ.
ತಾವು ಹೇಳಿದ ಒಬ್ಬರಿಗೂ ನಿಗಮ-ಮಂಡಳಿಯಲ್ಲಿ ಸ್ಥಾನ ನೀಡದಕ್ಕೆ ಗರಂ ಆಗಿರುವ ಶ್ರೀನಿವಾಸ್ ಪ್ರಸಾದ್, ಅಧಿಕಾರಕ್ಕೆ ಬರುವಾಗ ನಾವು ಬೇಕಿತ್ತು. ಈಗ ನಾವು ಹೇಳಿದ ಒಬ್ಬರಿಗೂ ಅಧ್ಯಕ್ಷ ಸ್ಥಾನ ನೀಡಲ್ಲ ಅಂದರೆ ಅದರ ಏನು ಅರ್ಥ ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಕಾಡು ಹಂದಿ ಬೇಟೆಗೆ ಹೋದವನ ದೇಹವೇ ಛಿದ್ರಛಿದ್ರ ಆಯ್ತು ! ವರಾಹನ ಶಾಪ ತಟ್ಟೀತೆ?
ಇದೇ ವೇಳೆ ಶ್ರೀನಿವಾಸ್​ ಪ್ರಸಾದ್​ರನ್ನು ಸಮಾಧಾನ ಪಡಿಸಿದ್ದ ಸಿಎಂ, ಇನ್ನೂ ಮೂರು ದಿನದಲ್ಲಿ ಎಲ್ಲವನ್ನೂ ಸರಿ ಮಾಡುತ್ತೇನೆ. ಸಿಟ್ಟು ಮಾಡಿಕೊಳ್ಳಬೇಡಿ ಎಂದು ಇನ್ನೊಮ್ಮೆ ಶ್ರೀನಿವಾಸಪ್ರಸಾದ್ ಅವರಿಂದ ಬೆಂಬಲಿಗರ ಪಟ್ಟಿ ಪಡೆದುಕೊಂಡಿದ್ದಾರೆ. ಈ ಎಲ್ಲ ಪ್ರಸಂಗ ಸುತ್ತೂರು ಮಠದ ಒಳಾಂಗಣದಲ್ಲಿ ನಡೆದಿದೆ.
ಇದಕ್ಕೂ ಮುನ್ನ ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿದ್ದ ಶ್ರೀನಿವಾಸ ಪ್ರಸಾದ್, ಯಡಿಯೂರಪ್ಪ ಸಿಎಂ ಆಗುವಾಗ ನನ್ನ ಪಾತ್ರ ಇತ್ತು. ಈಗ ಸಿಎಂ ಆದ್ರಲ್ಲ, ಇನ್ನೇನು ಆ ದರ್ದು ಅವರಿಗೆ ಇಲ್ಲ. ಈಗ ಆರಾಮಾಗಿ ಇದ್ದಾರೆ. ನೋಡ್ಕೋತಿವಿ ಬಿಡಿ ಎಂದರು.(ದಿಗ್ವಿಜಯ ನ್ಯೂಸ್​)
ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರಾಗಿ ಎನ್. ಭೃಂಗೀಶ್​ ನೇಮಕ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:5 × one =
Remember me
