ದಾವಣಗೆರೆ:ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಕಾಣೆಯಾಗಿರುವ ತಮ್ಮ ಸಹೋದರನ ಮಗನನ್ನು ನೆನೆದು ಕಣ್ಣೀರು ಹಾಕಿದ್ದಾರೆ.
ಅ.30ರ ರಾತ್ರಿಯಿಂದ ಎಂಪಿ ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರ್ ಕಾಣೆಯಾಗಿದ್ದಾನೆ. ಯಾವಾಗಲೂ ಸ್ನೇಹಿತರೊಂದಿಗೆ ಇರುತ್ತಿದ್ದ ಚಂದ್ರಶೇಖರ್​ ಕಳೆದ ಭಾನುವಾರ ಮಾತ್ರ ಒಬ್ಬನೇ ತೆರಳಿದ್ದಾನೆ. ತನ್ನ KA 17- MA- 2534 ನಂಬರ್​ನ ಹೋಂಡಾಯ್ ಕ್ರೇಟಾ ಕಾರಿನಲ್ಲಿ ಶಿವಮೊಗ್ಗದ ಗೌರಿಗದ್ದೆಗೆ ಹೋಗಿದ್ದಾನೆ ಎನ್ನಲಾಗಿದೆ. ಆದರೆ ಹೋದವನು ಮತ್ತೆ ವಾಪಸ್​ ಬಂದಿಲ್ಲ. ಇದಲ್ಲದೇ ಕಾಣೆಯಾದ ರಾತ್ರಿ 11:30 ರಿಂದ ಚಂದ್ರಶೇಖರ್​ನ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ. ಇದರಿಂದ ಆತನ ಮನೆಯವರು ಕಂಗಾಲಾಗಿದ್ದಾರೆ.
ತನಗೆ ಸದಾ ಬೆಂಬಲವಾಗಿ ನಿಲ್ಲುತ್ತಿದ್ದ ತನ್ನ ಸಹೋದರನ ಪುತ್ರ ಚಂದ್ರಶೇಖರ್​​ ಕಾಣೆಯಾದ ಸುದ್ದಿ ತಿಳಿದು ಶಾಸಕರು ಗೋಳಾಡುತ್ತಿದ್ದಾರೆ. ‘ಎಲ್ಲಿ ಹೋಗಿದ್ದಾನೆ, ಎಲ್ಲಿ ಇದ್ದಾನೆ ಎಂಬುದೇ ಗೊತ್ತಿಲ್ಲ. ಎಲ್ಲಿದ್ದರೂ ಬಾರಪ್ಪ’ ಎಂದು ಶಾಸಕರು ಕಣ್ಣೀರು ಹಾಕಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − nine =
Remember me
