|ವೇಣುವಿನೋದ್ ಕೆ.ಎಸ್.ಮಂಗಳೂರು
ಮೂರನೇ ತ್ರೖೆಮಾಸಿಕ ಅವಧಿಯಲ್ಲಿ ಲಾಭದ ಹಳಿಗೆ ಮರಳಿರುವ ಸಾರ್ವಜನಿಕ ರಂಗದ ಉದ್ದಿಮೆ ಎಂಆರ್​ಪಿಎಲ್ ತನ್ನ ತೆಕ್ಕೆಯಲ್ಲೇ ಇರುವ ಸಹಸಂಸ್ಥೆ ಒಎಂಪಿಎಲ್ ಖರೀದಿಗೆ ಪೂರಕ ಪ್ರಕ್ರಿಯೆಗಳು ಶುರು ಮಾಡಿದೆ. ಇದರೊಂದಿಗೆ ಮುಂದಿನ ಕೆಲ ತಿಂಗಳಲ್ಲಿ ಎಂಆರ್​ಪಿಎಲ್ ಅನ್ನು ಎಚ್​ಪಿಸಿಎಲ್ (ಹಿಂದುಸ್ಥಾನ್ ಪೆಟ್ರೋಲಿಯಂ) ಜತೆ ವಿಲೀನಗೊಳಿಸುವ ಕೆಲಸವೂ ಚುರುಕಾಗಲಿದೆ. ಇತ್ತೀಚೆಗಷ್ಟೇ ಒಎಂಪಿಎಲ್​ನಲ್ಲಿರುವ ಒಎನ್​ಜಿಸಿಯ ಶೇ.49 ಷೇರು ಖರೀದಿಗೆ ಎಂಆರ್​ಪಿಎಲ್​ನ ಆಡಳಿತ ಮಂಡಳಿ ಅನುಮೋದನೆ ನೀಡಿತ್ತು. ಅಂದರೆ 1200 ಕೋಟಿ ರೂ. ವಿನಿಯೋಗಿಸಿ ಈ ಷೇರು ಖರೀದಿ ನಡೆಯಲಿದೆ.
ಎಂಆರ್​ಪಿಎಲ್ ಹಾಗೂ ಒಎನ್​ಜಿಸಿಯ ಪಾಲು ಹೊಂದಿರುವ ಒಎಂಪಿಎಲ್ (ಒಎನ್​ಜಿಸಿ ಮಂಗಳೂರು ಪೆಟ್ರೋಕೆಮಿಕಲ್ಸ್ ಲಿಮಿಟೆಡ್) ಎಂಆರ್​ಪಿಎಲ್​ನ ನಾಫ್ತಾವನ್ನು ಬಳಸಿ ಬೆನ್ಸಿನ್ ಮತ್ತು ಪಾರಾಕ್ಸೈಲಿನ್ ಎಂಬ ಎರಡು ಆರೋಮಾಟಿಕ್ಸ್ ಉತ್ಪನ್ನಗಳನ್ನು ತಯಾರಿಸುತ್ತದೆ. ಮಂಗಳೂರು ವಿಶೇಷ ಆರ್ಥಿಕ ವಲಯದಲ್ಲಿ ಎಂಆರ್​ಪಿಎಲ್​ನ ಪೆಟ್ರೋಕೆಮಿಕಲ್ ಕಾಂಪ್ಲೆಕ್ಸ್​ನ ಸನಿಹದಲ್ಲೇ ಕಾರ್ಯನಿರ್ವಹಿಸುತ್ತಿರುವ ಒಎಂಪಿಎಲ್ ದಕ್ಷಿಣ ಭಾರತದಲ್ಲೇ ಅತೀ ದೊಡ್ಡ ಪೆಟ್ರೋಕೆಮಿಕಲ್ಸ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ನಿರ್ದೇಶಕರ ಮಂಡಳಿಯಿಂದ ಒಎಂಪಿಎಲ್​ನಲ್ಲಿರುವ ಒಎನ್​ಜಿಸಿಯ ಶೇ.49 ಷೇರು ಖರೀದಿಗೆ ಅನುಮೋದನೆ ಸಿಕ್ಕಿದೆ. ಆದರೆ ಮುಂದೆ ಈ ಕಂಪನಿಯನ್ನು ಎಂಆರ್​ಪಿಎಲ್​ನಲ್ಲಿ ವಿಲೀನಗೊಳಿಸುವ ಪ್ರಕ್ರಿಯೆ ಇನ್ನಷ್ಟೇ ಆಗಬೇಕಿದೆ. ಇದಕ್ಕೆ 6ರಿಂದ 8 ತಿಂಗಳು ಬೇಕಾಗಬಹುದು ಎಂದು ಎಂಆರ್​ಪಿಎಲ್ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಎರಡರ ವಿಲೀನದಿಂದ ಕಂಪನಿಗಳ ಘಟಕಗಳು ಗರಿಷ್ಠ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿವೆ. ಇದು ಎರಡು ಕಂಪನಿಗಳಿಗೂ ಆರ್ಥಿಕ ಲಾಭ ತರಲಿವೆ.
2006ರಲ್ಲಿ ಒಎನ್​ಜಿಸಿಯ ಶೇ.49 ಹಾಗೂ ಎಂಆರ್​ಪಿಎಲ್​ನ ಶೇ.51 ಷೇರಿನಲ್ಲಿ ಒಎಂಪಿಎಲ್ ಜನಿಸಿತ್ತು. ಇದರ ಉತ್ಪನ್ನಗಳಿಗೆ ಅಷ್ಟಾಗಿ ಬೇಡಿಕೆ ಇಲ್ಲದಿರುವ ಹಿನ್ನೆಲೆಯಲ್ಲಿ ಖರೀದಿ ಬೇಕಿತ್ತೇ ಎಂಬ ಸಂಶಯಗಳು ವ್ಯಕ್ತವಾಗಿವೆ. ಆದರೆ, ಇವೆರಡನ್ನೂ ವಿಲೀನಗೊಳಿಸಿ ಮುಂದೆ ಎಚ್​ಪಿಸಿಎಲ್ ಜತೆ ಎಂಆರ್​ಪಿಎಲ್ ವಿಲೀನಕ್ಕೆ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಉತ್ಸುಕವಾಗಿರುವುದಾಗಿ ಹೇಳಲಾಗುತ್ತಿದೆ. ಎಚ್​ಪಿಸಿಎಲ್​ಗೆ ಇದರಿಂದ ದಕ್ಷಿಣ ಭಾರತದಲ್ಲಿ ಪೆಟ್ರೋಲಿಯಂ ಉತ್ಪನ್ನಗಳು ನೇರ ಲಭ್ಯವಾಗಲಿದೆ. ಎಂಆರ್​ಪಿಎಲ್​ನ ರಿಫೈನರಿ ಪೂರ್ಣ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲಿದೆ ಎನ್ನುವುದು ಅಧಿಕಾರಿಗಳ ಸಮರ್ಥನೆ.
ಪ್ರಸ್ತುತ ಒಎನ್​ಜಿಸಿ ಪೂರ್ಣವಾಗಿ ತೈಲ ಹಾಗೂ ಅನಿಲ ಶೋಧನೆಯಲ್ಲೇ ತೊಡಗಿಸಿಕೊಳ್ಳಬೇಕು ಹೊರತು ಸಂಸ್ಕರಣೆಯಲ್ಲಿ ಅಲ್ಲ. ಅದಕ್ಕಾಗಿ ಒಎನ್​ಜಿಸಿ ಅಧೀನದ ಎಂಆರ್​ಪಿಎಲ್​ನ್ನು ಎಚ್​ಪಿಸಿಎಲ್ ಜತೆಗೆ ವಿಲೀನಗೊಳಿಸಬೇಕು ಎನ್ನುವುದು ಕೇಂದ್ರ ಸರ್ಕಾರದ ನಿಲುವು. ಇದರಿಂದ ಸಂಸ್ಕರಣೆ ಹಾಗೂ ಶೋಧನೆಯನ್ನು ಪ್ರತ್ಯೇಕವಾಗಿರಿಸುವುದು, ಜತೆಯಲ್ಲಿ ಸರ್ಕಾರಿ ಸ್ವಾಮ್ಯದ ಎಚ್​ಪಿಸಿಎಲ್​ಗೂ ಸಂಸ್ಕರಣೆಯೊಂದಿಗೆ ಮಾರುಕಟ್ಟೆ ವಿಸ್ತರಣೆಯಲ್ಲಿ ಬಲ ಸಿಗಲಿದೆ ಎನ್ನುತ್ತಾರೆ ಅಧಿಕಾರಿಗಳು.
ನಿರಂತರ ಆದಾಯ ವೃದ್ಧಿ ಉದ್ದೇಶದಿಂದ ರಿಫೈನರಿ ಹಾಗೂ ಆರೋಮ್ಯಾಟಿಕ್ ಘಟಕಗಳೆರಡೂ ಒಂದೇ ಆಡಳಿತದ ಕೆಳಗೆ ಬರುವುದು ಉತ್ತಮ ಎಂಬ ಉದ್ದೇಶದಿಂದ ಈ ನಿರ್ಣಯ ಕೈಗೊಳ್ಳಲಾಗುತ್ತಿದೆ. ಒಎಂಪಿಎಲ್ ವಿಲೀನಕ್ಕಾಗಿ ಕಾರ್ಪೆರೇಟ್ ವ್ಯವಹಾರಗಳ ಸಚಿವಾಲಯಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ. ಇದು 6-8 ತಿಂಗಳು ಹಿಡಿಯಲಿದೆ.
|ವೆಂಕಟೇಶ್ ಎಂ.ವ್ಯವಸ್ಥಾಪಕ ನಿರ್ದೇಶಕ, ಎಂಆರ್​ಪಿಎಲ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + eight =
Remember me
