ಬೆಂಗಳೂರು:ಮಹಾಮಾರಿ ಕರೊನಾ ಅಬಕಾರಿ ಇಲಾಖೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ. ಸರ್ಕಾರಿ ಸ್ವಾಮ್ಯದ ಎಂಎಸ್​ಐಎಲ್​ ಮದ್ಯದಂಗಡಿಗಳಿಗೆ (ಸಿಎಲ್​11ಸಿ) ಅಂದಾಜು 40 ಕೋಟಿ ರೂ. ನಷ್ಟ ಸಂಭವಿಸಿದೆ.
ರಾಜ್ಯದಾದ್ಯಂತ ಒಟ್ಟು 705 ಎಂಎಸ್​ಐಎಲ್​ ಮದ್ಯದಂಗಡಿ ಇವೆ. ಈ ಪೈಕಿ ಬೆಂಗಳೂರು ವಿಭಾಗದಲ್ಲಿ 146, ಬೆಳಗಾವಿ ವಿಭಾಗ 162, ಕಲಬುರಗಿ 93, ಹೊಸಪೇಟೆ ವಿಭಾಗ 109, ಮಂಗಳೂರು 86, ಮೈಸೂರು ವಿಭಾಗದಲ್ಲಿ 109 ಎಂಎಸ್​ಐಎಲ್​ ಮದ್ಯದಂಗಡಿಗಳಿವೆ. ಇವುಗಳಿಂದ ಪ್ರತಿ ವರ್ಷ ಸರ್ಕಾರಕ್ಕೆ 2 ಸಾವಿರ ಕೋಟಿ ರೂ. ಆದಾಯ ಬರುತ್ತಿದೆ. ಆದರೆ, ಈ ವರ್ಷದ ಆದಾಯಕ್ಕೆ ಕೋವಿಡ್​ ಸೋಂಕು ಬಾರಿ ಹೊಡೆತ ನೀಡಿದೆ.
ಇದನ್ನೂ ಓದಿರಿಹಿಂದು ದೇಗುಲದಲ್ಲಿ ಏಸುಕ್ರಿಸ್ತನ ಫೋಟೋ ಇಟ್ಟು ಅರ್ಚಕನಿಂದ ಪೂಜೆ!
ಕರೊನಾ ಸೋಂಕು ಹರಡುವಿಕೆ ನಿಯಂತ್ರಿಸಲು ರಾಜ್ಯದಲ್ಲಿ ಲಾಕ್​ಡೌನ್​ ಜಾರಿ ಮಾಡಿದ್ದರ ಪರಿಣಾಮ ಎಂಎಸ್​ಐಎಲ್​ ಮದ್ಯದಂಗಡಿಗಳಿಗೆ 40 ಕೋಟಿ ರೂ. ನಷ್ಟ ಉಂಟಾಗಿದೆ.
2009ರಲ್ಲಿ 463 ಹಾಗೂ 2016ರಲ್ಲಿ 900 ಸೇರಿ ಒಟ್ಟು 1,363 ಎಂಎಸ್​ಐಎಲ್​ ಮದ್ಯದಂಗಡಿಗಳಿಗೆ ಮಂಜೂರಾತಿ ಸಿಕ್ಕಿದೆ. ಇದರಲ್ಲಿ ಈವರೆಗೆ 705 ಮದ್ಯದಂಗಡಿಗಳನ್ನು ತೆರೆದಿದ್ದು, ಉಳಿದ ಅಂಗಡಿಗಳನ್ನು ತೆರೆಯುವ ಪ್ರಕ್ರಿಯೆಗಳು ನಡೆಯುತ್ತಿವೆ.
ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಹೊಸ ಮದ್ಯದಂಗಡಿ, ವೈನ್​ಶಾಪ್ ಪ್ರಾರಂಭಿಸಲ್ಲ: ಗೋವಿಂದ ಕಾರಜೋಳ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 5 =
Remember me
