ಬೇಲೂರು ಹರೀಶಬೆಂಗಳೂರು: ರಾಜ್ಯದಲ್ಲಿ ಮರಳಿನ ಕೊರತೆ ನೀಗಿಸಲು ಜಾರಿಗೆ ಬಂದಿದ್ದ ಮಹತ್ವಾಕಾಂಕ್ಷಿ ಮಲೇಷ್ಯಾ ಮರಳು ಯೋಜನೆಗೆ ಗ್ರಹಣ ಬಡಿದಿದೆ. ಬಿಡದಿಯ ಮೈಸೂರು ಸೇಲ್ಸ್ ಇಂಟರ್​ನ್ಯಾಷನಲ್ ಲಿ. (ಎಂಎಸ್​ಐಎಲ್) ಯಾರ್ಡ್​ನಲ್ಲಿ 55 ಸಾವಿರ ಟನ್ ಮರಳು ಸಂಗ್ರಹವಾಗಿದ್ದು, ಈವರೆಗೂ 3 ಸಾವಿರ ಟನ್ ಮಾತ್ರ ಮಾರಾಟವಾಗಿದೆ. ಜನರ ನಿರಾಸಕ್ತಿಯಿಂದ ಹೆಚ್ಚಿನ ಪ್ರಮಾಣದಲ್ಲಿ ಮರಳು ಮಾರಾಟವಾಗದ ಯಾರ್ಡ್​ನಲ್ಲೇ ಉಳಿದಿದೆ.
ಮರಳು ಮಾರಾಟಕ್ಕೆ ಏಕೆ ನಿರಾಸಕ್ತಿ?
ಕರ್ನಾಟಕದಲ್ಲಿ ವಾರ್ಷಿಕ 40 ಲಕ್ಷ ಟನ್ ಮರಳಿನ ಬೇಡಿಕೆಯಿದೆ. ಪ್ರತಿವರ್ಷ 36 ಲಕ್ಷ ಟನ್​ನಂತೆ 5 ವರ್ಷದಲ್ಲಿ 180 ಲಕ್ಷ ಟನ್ ಮರಳು ಖರೀದಿಗೆ ಸಿದ್ದರಾಮಯ್ಯ ನೇತೃತ್ವವಿದ್ದ ಕಾಂಗ್ರೆಸ್ ಸರ್ಕಾರ ಮಲೇಷ್ಯಾ ಜತೆ 7,020 ಕೋಟಿ ರೂ.ಗಳ ಯೋಜನೆಗೆ ಒಪ್ಪಂದ ಮಾಡಿಕೊಂಡಿತ್ತು. ಮೊದಲ ಹಂತದಲ್ಲಿ 55 ಸಾವಿರ ಟನ್ ಮರಳು ಸಮುದ್ರದ ಮೂಲಕ ಹಡಗಿನಲ್ಲಿ ಆಂಧ್ರಪ್ರದೇಶದ ಕೃಷ್ಣಪಟ್ಣಂ ಬಂದರಿಗೆ ತಂದು ಅಲ್ಲಿಂದ ರಾಜ್ಯಕ್ಕೆ ಗೂಡ್ಸ್ ರೈಲುಗಳ ಮೂಲಕ ಎಂಎಸ್​ಐಎಲ್ ಮಾರಾಟ ಮಳಿಗೆಗಳಿಗೆ ಸಾಗಾಟ ಮಾಡಲಾಗಿದೆ. ಯೋಜನೆ ಜಾರಿಗೆ ಬಂದು 3-4 ವರ್ಷ ಕಳೆದರೂ ಮರಳು ಮಾರಾಟ ಮಾಡಲು ಎಂಎಸ್​ಐಎಲ್ ವಿಫಲವಾಗಿದೆ.
ಮರಳು ಮಾಫಿಯಾ
ರಾಜ್ಯಲ್ಲಿ ಮರಳು ಮಾಫಿಯಾ ಸದ್ದಿಲ್ಲದೆ ನಡೆಯುತ್ತಿದೆ. ಇದರಲ್ಲಿ ಪ್ರಬಲ ರಾಜಕಾರಣಿಗಳ ಮಕ್ಕಳು, ಸಂಬಂಧಿಕರು ಹಾಗೂ ಸ್ನೇಹಿತರು ಶಾಮೀಲಾಗಿದ್ದಾರೆ. ಆಡಳಿತ ನಡೆಸಿರುವ ಎಲ್ಲ ಸರ್ಕಾರಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲು ವಿಫಲವಾಗಿವೆ.
ಹರಿದು ಬಿದ್ದಿರುವ ಚೀಲಗಳು:ಬಿಡದಿಯ ಎಂಎಸ್​ಐಎಲ್ ಯಾರ್ಡ್​ಗಳಲ್ಲಿ ಶೇಖರಿಸಿರುವ 50 ಕೆ.ಜಿ. ಕಿಲೋಗ್ರಾಂ ತೂಕದ ಮರಳಿನ ಚೀಲಗಳು ಹರಿದುಹೋಗಿವೆ. ಮರಳಿನ ಜತೆಗೆ ಸಾಕಷ್ಟು ಪ್ರಮಾಣದ ಸಣ್ಣಪುಟ್ಟ ಕಲ್ಲುಗಳು ಮಿಶ್ರಿತವಾಗಿದೆ. ದುಬಾರಿ ದರ ಹಾಗೂ ಸಾಗಣೆ ವೆಚ್ಚ ಮತ್ತಿತರರ ಕಾರಣಗಳಿಂದ ಜನರು ಮರಳು ಖರೀದಿಸಲು ನಿರಾಸಕ್ತಿ ತೋರುತ್ತಿದ್ದಾರೆ.
ಇದನ್ನೂ ಓದಿ:ನ್ಯಾಯಾಲಯಗಳ ವಿರುದ್ಧ ವೃಥಾ ಟೀಕೆ ಅಕ್ಷಮ್ಯ
ಘಟಕಗಳು ಹೆಸರಿಗೆ ಮಾತ್ರ:ಮಲೇಷ್ಯಾ ಮರಳು ಮಾರಾಟದ ಜವಾಬ್ದಾರಿ ವಹಿಸಿಕೊಂಡಿರುವ ಎಂಎಸ್ಐಎಲ್, ನಾಮ್ ಕೇ ವಾಸ್ತೆ ಎಂಬಂತೆ ಬಿಡದಿ, ಕ್ಯಾತ್ಸಂದ್ರ ಮತ್ತು ದೊಡ್ಡಬಳ್ಳಾಪುರದಲ್ಲಿ ಮಳಿಗೆಗಳನ್ನು ತೆರೆದಿದೆ. ಬಿಡದಿಯಲ್ಲಿ ಮಾತ್ರ ಮರಳು ಶೇಖರಿಸಲಾಗಿದೆ. ಕ್ಯಾತ್ಸಂದ್ರ, ದೊಡ್ಡಬಳ್ಳಾಪುರ ಘಟಕಗಳಲ್ಲಿ ಈವರೆಗೂ ಮರಳು ಸಂಗ್ರಹ ಮಾಡಿಲ್ಲ. ಆ ಘಟಕಗಳದಲ್ಲಿರುವ ಬೋರ್ಡ್​ಗಳು ಜಾಹೀರಾತಿಗೆ ಸೀಮಿತವಾಗಿವೆ.
ಟನ್​ಗೆ 4 ಸಾವಿರ ರೂಪಾಯಿ: ಪ್ರತಿ ಟನ್ ಮಲೇಷ್ಯಾ ಮರಳಿಗೆ 4 ಸಾವಿರ ರೂ. ನಿಗದಿ ಮಾಡಲಾಗಿದೆ. 50 ಕೆ.ಜಿ. ಚೀಲಕ್ಕೆ 200ರಿಂದ 220 ರೂ. ಇದೆ.
ದಾಖಲೆ ಬಿಡುಗಡೆ ಮಾಡಿದ ಬಿಜೆಪಿ:ಕಾಂಗ್ರೆಸ್ ಸರ್ಕಾರವಿದ್ದಾಗ ಪ್ರತಿಪಕ್ಷವಾಗಿದ್ದ ಬಿಜೆಪಿ ನಾಯಕರು ಮಲೇಷ್ಯಾ ಮರಳು ಯೋಜನೆಯ ಅಕ್ರಮವನ್ನು ದಾಖಲೆ ಸಮೇತ ಬಿಡುಗಡೆ ಮಾಡಿದ್ದರು. ಟೆಂಡರ್ ನೀಡುವ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘಿಸಿ ದುಬೈ ಮೂಲದ ಬೋಗಸ್ ಕಂಪನಿಗೆ ಮರಳು ಪೂರೈಸುವ ಜವಾಬ್ದಾರಿ ನೀಡಲಾಗಿದೆ. ಇದರಲ್ಲಿ ಅವ್ಯವಹಾರ ನಡೆದಿದೆ. ಕಾಂಗ್ರೆಸ್ ಸರ್ಕಾರ ಮತ್ತು ಎಂಎಸ್​ಐಎಲ್ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಿದ್ದರು.
ಆಭರಣ ಮಾಡಿಕೊಡುವೆ ಎಂದಾತನಿಗೆ 10 ಕಿಲೋ ಚಿನ್ನ ಕೊಟ್ಟ ಜ್ಯುವೆಲರಿ ಶಾಪ್ ಮಾಲೀಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − seven =
Remember me
