ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ಆಸ್ತಿ ವಿವರ ಬಹಿರಂಗವಾಗಿದ್ದು, ಬಿಜೆಪಿಯ ಎಂಟಿಬಿ ನಾಗರಾಜ್ ಅವರೇ ಅತಿ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ.
ಅವರು 1,224 ಕೋಟಿ ರೂ.ಗಿಂತ ಅಧಿಕ ಆಸ್ತಿ ಹೊಂದಿರುವುದು ಅವರೇ ನಾಮಪತ್ರದ ಜತೆ ಸಲ್ಲಿಸಿರುವ ಅಫಿಡವಿಟ್‌ನಿಂದ ದೃಢಪಟ್ಟಿದೆ. ಅಪಾರ ಮೌಲ್ಯದ ವಜ್ರ, ಪ್ಲಾಟಿನಂ, ಚಿನ್ನದ ಆಭರಣಗಳು ಅವರ ಬಳಿ ಇವೆ. ನಾಗರಾಜ್ ಹೆಸರಿನಲ್ಲಿ 2.23 ಕೋಟಿ ರೂ.ನ ವಜ್ರ, ಪ್ಲಾಟಿನಂ, ಚಿನ್ನಾಭರಣ ಇದ್ದರೆ ಪತ್ನಿ ಹೆಸರಿನಲ್ಲಿ 1.48 ಕೋಟಿ ರೂ. ವಜ್ರ, ಪ್ಲಾಟಿನಂ, ಚಿನ್ನದ ಆಭರಣ ಇವೆ. ನಾಗರಾಜ್ ಬಳಿ 32.60 ಲಕ್ಷ ರೂ. ನಗದು, ಪತ್ನಿ ಬಳಿ 45.60 ಲಕ್ಷ ರೂ. ನಗದು ಇದೆ. 2.48 ಕೋಟಿ ರೂ. ಬೆಲೆಯ ಐದು ಕಾರ್‌ಗಳಿವೆ. ಇದರಲ್ಲಿ 51.50 ಲಕ್ಷ ರೂ.ನ ಲ್ಯಾಂಡ್‌ರೋವರ್, 96.12 ಲಕ್ಷ ರೂ.ನ ಮರ್ಸಿಡಿಸ್ ಬೆಂಜ್, 29 ಲಕ್ಷ ರೂ.ನ ಫಾರ್ಚೂನರ್ ಸೇರಿವೆ.
ಎಂಟಿಬಿ ನಾಗರಾಜ್ ಅವರ ಹೆಸರಿನಲ್ಲಿ 884 ಕೋಟಿ ರೂ. ಆಸ್ತಿ, ಪತ್ನಿ ಶಾಂತಕುಮಾರಿಯವರ ಹೆಸರಿನಲ್ಲಿ 331 ಕೋಟಿ ರೂ. ಆಸ್ತಿಯಿದೆ. ಎಂಟಿಬಿ ಹೆಸರಿನಲ್ಲಿ 461 ಕೋಟಿ ರೂ. ಚರಾಸ್ತಿ ಮತ್ತು 416 ಕೋಟಿ ರೂ. ಸ್ಥಿರಾಸ್ತಿ ಇದೆ. ಅವರ ಪತ್ನಿ 160 ಕೋಟಿ ರೂ. ಚರಾಸ್ತಿ ಮತ್ತು 179 ಕೋಟಿ ರೂ. ಸ್ಥಿರಾಸ್ತಿಗೆ ಒಡತಿಯಾಗಿದ್ದಾರೆ. ಅದಲ್ಲದೆ, ಎಂಟಿಬಿ 52.75 ಕೋಟಿ ರೂ. ಮತ್ತು ಪತ್ನಿ 1.97 ಕೋಟಿ ರೂ. ಸಾಲ ಹೊಂದಿದ್ದಾರೆ.
ಬಿಜೆಪಿಯ ಅಚ್ಚರಿಯ ಅಭ್ಯರ್ಥಿಯಾದ ಪ್ರತಾಪ್ ಸಿಂಹ ನಾಯಕ್ ಬಳಿ 45 ಲಕ್ಷ ರೂ.ನ ಚರಾಸ್ತಿ ಇದೆ. 1.31 ಕೋಟಿ ರೂ.ನ ಸ್ವಯಾರ್ಜಿತ ಆಸ್ತಿ, ಕೇವಲ 40,000 ರೂ. ನಗದು ಇದೆ. ಬ್ಯಾಂಕ್ ಠೇವಣಿ, ಉಳಿತಾಯ, ವಿಮೆ, ವಾಹನ ಎಲ್ಲದರ ಮೌಲ್ಯ ಕೇವಲ 45.53 ಲಕ್ಷ ರೂ.; ಅವರ ಪತ್ನಿಯ ಬಳಿ ಕೇವಲ 5 ಸಾವಿರ ರೂ. ನಗದು ಇದೆ! ಪತ್ನಿಯ ಬ್ಯಾಂಕ್ ಠೇವಣಿ, ಉಳಿತಾಯ, ವಿಮೆ, ವಾಹನದ ಒಟ್ಟು ಮೌಲ್ಯ 52.36 ಲಕ್ಷ ರೂ. ಎಂದು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಘರ್ಷಣೆ ನಡುವೆಯೇ ಕಾಮಗಾರಿ; ಸಿದ್ಧವಾಯಿತು ಗಲ್ವಾನ್​ ನದಿಯ ಸೇತುವೆ
ಬಿಜೆಪಿಯ ಇನ್ನೊಬ್ಬ ಅಭ್ಯರ್ಥಿ ಆರ್. ಶಂಕರ್ ಬಳಿ ಒಟ್ಟು 166 ಕೋಟಿ ರೂ. ಆಸ್ತಿ ಇದೆ. ಅವರ ಬಳಿ 35 ಲಕ್ಷ ರೂ. ನಗದು, ಪತ್ನಿ ಲಕ್ಷ್ಮಿ ಬಳಿ 27 ಲಕ್ಷ ರೂ. ನಗದು ಇದೆ. ಬ್ಯಾಂಕ್ ಠೇವಣಿ, ಬಾಂಡ್‌ಗಳು, ಷೇರುಗಳು, ವಾಹನ, ಚಿನ್ನ ಸೇರಿದರೆ ಮೌಲ್ಯ 28 ಕೋಟಿ ರೂ. ಆಗುತ್ತದೆ. ಮತ್ತೊಬ್ಬ ಬಿಜೆಪಿ ಅಭ್ಯರ್ಥಿ ಸುನೀಲ್ ವಲ್ಯಾಪುರೆ ಅವರ ಒಟ್ಟು ಆಸ್ತಿ 20 ಕೋಟಿ ರೂ.ನಷ್ಟಿದೆ. ಅವರ ಬಳಿ 2.50 ಲಕ್ಷ ರೂ. ನಗದು, ಪತ್ನಿ ವಿಜಯಲಕ್ಷ್ಮೀ ಬಳಿ 2 ಲಕ್ಷ ರೂ. ನಗದು ಇದೆಯಂತೆ! ಸುನೀಲ್ ಹೆಸರಲ್ಲಿ 18.3 ಕೋಟಿ ರೂ. ಆಸ್ತಿ ಇದ್ದು, ಪತ್ನಿ ಹೆಸರಲ್ಲಿ 1.98 ಕೋಟಿ ರೂ. ಮೌಲ್ಯದ ಆಸ್ತಿ ಇದೆ.
ಕಾಂಗ್ರೆಸ್‌ನ ನಜೀರ್ ಅಹ್ಮದ್ 36 ಕೋಟಿ ರೂ. ಆಸ್ತಿ ಹೊಂದಿದ್ದು, ಅದರಲ್ಲಿ ತಲಾ 17.75 ಕೋಟಿ ರೂ. ಚರಾಸ್ತಿ ಮತ್ತು ಸ್ಥಿರಾಸ್ತಿ ಇವೆ. ಅದೇ ಪಕ್ಷದ ಬಿ.ಕೆ. ಹರಿಪ್ರಸಾದ್ 14 ಕೋಟಿ ರೂ. ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. ತಮ್ಮ ಬಳಿ ಕೇವಲ 20 ಸಾವಿರ ರೂ. ಮತ್ತು ಪತ್ನಿ ಬಳಿ ಕೇವಲ 10 ಸಾವಿರ ರೂ. ನಗದು ಇದೆಯೆಂದು ಅಫಿಡವಿಟ್‌ನಲ್ಲಿ ನಮೂದಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ತಾವು 80 ಕೋಟಿ ರೂ. ಆಸ್ತಿಯ ಒಡೆಯ ಎಂದು ಘೋಷಿಸಿದ್ದಾರೆ.
ಬಿಜೆಪಿ ಸರ್ಕಾರ ಬರಲು ಆನಂದ್‌ಸಿಂಗ್ ಕಾರಣ: ಸಚಿವ ಸೋಮಶೇಖರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
