ಹೊಸಕೋಟೆ:ಶರತ್ ಬಚ್ಚೇಗೌಡ ಕೇವಲ 8 ತಿಂಗಳ ಎಂಎಲ್ಎ, ನಾನು 40 ವರ್ಷದ ರಾಜಕಾರಣದಲ್ಲಿ ನಾಲ್ಕು ಭಾರಿ ಎಂಎಲ್ಎ ಆಗಿ ಒಂದು ಭಾರಿ ಸಚಿವನಾಗಿದ್ದೇನೆ. ಬಚ್ಚೇಗೌಡ ಕುಟುಂಬಕ್ಕಿಂತ ನಾನು 10 ಪಟ್ಟು ಶ್ರೀಮಂತ. ರಾಜಕೀಯದಲ್ಲಿ ಹಣ ಮಾಡುವ ಆಸೆ ನನಗಿಲ್ಲ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ವಾಗ್ದಾಳಿ ನಡೆಸಿದ್ದಾರೆ.
ಬಚ್ಚೇಗೌಡ ಕುಟುಂಬದವರು ಅಧಿಕಾರವನ್ನು ಸ್ವಾರ್ಥಕ್ಕೆ ಬಳಸಿಕೊಂಡು ಬರುತ್ತಿದ್ದಾರೆ. ಶಾಂತನಪುರದಲ್ಲಿ ಸರ್ಕಾರಿ ಜಾಗ ಮತ್ತು ಸ್ಮಶಾನ ಜಾಗವನ್ನು ಶರತ್ ಬಚ್ಚೇಗೌಡ ಹಾಗೂ ಅವರ ಕುಟುಂಬ ಅಕ್ರಮವಾಗಿ ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದಾರೆ ಎಂದು ಎಂಟಿಬಿ ನಾಗರಾಜ್​ ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ದಾಖಲೆ ಸಮೇತ ಮಾಧ್ಯಮಗಳ ಮುಂದೆ ಬರುತ್ತೇನೆ. ಅವರಿಗೆ ತಾಕತ್ತು ಇದ್ದರೆ ನನ್ನ ಮುಂದೆ ಬರಲಿ ಎಂದು ಶಾಸಕರಿಗೆ ಬಹಿರಂಗವಾಗಿಯೇ ಸವಾಲು ಎಸೆದಿದ್ದಾರೆ.
ಇದನ್ನೂ ಓದಿರಿFACT CHECK| ಜೆಡಿಎಸ್​ ಶಾಸಕ ಬಿ. ಸತ್ಯನಾರಾಯಣ ನಿಧನ ಸುದ್ದಿ ನಿಜವಾ?
ಇತ್ತೀಚೆಗಷ್ಟೆ ಕೊರಳೂರು ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಎಂಟಿಬಿ ನಾಗರಾಜ್​ ಚಾಲನೆ ನೀಡಿದ್ದರು. ಈ ಸಂದರ್ಭದಲ್ಲಿ ಶರತ್​ ಬಚ್ಚೇಗೌಡ, ‘ಸೋತಾಗಿನಿಂದ ಗಡಾರಿಯನ್ನು ಕಾರಿನಲ್ಲಿ ಇಟ್ಟುಕೊಂಡು ತಿರುಗಾಡುತ್ತಿದ್ದರು ಎಂದು ಕೇಳಿದ್ದೆ. ಅದು ತುಕ್ಕು ಹಿಡಿದಿರಬೇಕು, ಅದನ್ನು ಹೋಗಿಸಲು ಹೀಗೆ ಮಾಡಿದ್ದಾರೆ’ ಎಂದು ಹೇಳಿಕೆ ಕೊಟ್ಟಿದ್ದರು. ಇದಾದ ಬೆನ್ನಲ್ಲೇ ಮಾತನಾಡಿರುವ ಎಂಟಿಬಿ, ‘ಅವರ ಭೂ ಅಕ್ರಮವನ್ನು ಸಾಬೀತು ಮಾಡುತ್ತೇನೆ. ಶರತ್ ರಾಜೀನಾಮೆ ನೀಡಲಿ’ ಎಂದು ಆಗ್ರಹಿಸಿದ್ದಾರೆ.
ಬೆಂಗಳೂರಲ್ಲಿ ವಿದೇಶಿಗರಿದ್ದ 35 ಮನೆಗಳ ಮೇಲೆ ರಾತ್ರೋರಾತ್ರಿ ಸಿಸಿಬಿ ರೇಡ್​… ಬೆಚ್ಚಿ ಬೀಳಿಸುತ್ತೆ ಅಲ್ಲಿನ ಅಕ್ರಮ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
