ಬೆಂಗಳೂರು:ಸಾರಿಗೆ ನೌಕರರ ಪ್ರತಿಭಟನೆಯ ಕಿರಿಕಿರಿ ನಡುವೆಯೂ ಸಚಿವ ಸ್ಥಾನ ಕೇಳಿಕೊಂಡು ಸಿಎಂ ಯಡಿಯೂರಪ್ಪ ಬಳಿ ಸೋಮವಾರ ಎಂಟಿಬಿ ನಾಗರಾಜ್ ಬಂದಿದ್ದರು.
ಸಚಿವ ಸಂಪುಟ ವಿಸ್ತರಣೆ ವಿಳಂಬ ಆಗುತ್ತಿರುವುದಕ್ಕೆ ಕಂಗಾಲಾಗಿರುವ ಎಂಟಿಬಿ ನಾಗರಾಜ್​ ಈಗಾಗಲೇ ಸಾಕಷ್ಟು ಬಾರಿ ಅಸಮಾಧಾನ ಹೊರಹಾಕಿದ್ದಾರೆ. ದಿನ ನಿತ್ಯ ಸಿಎಂ ನಿವಾಸಕ್ಕೆ ಭೇಟಿ ನೀಡಿ ಹೋಗುತ್ತಿರುವ ಎಂಟಿಬಿ, ಸೋಮವಾರವೂ ಆಗಮಿಸಿದ್ದರು.
ಆರ್​. ಅಶೋಕ್ ಅವರೇ ನನ್ನನ್ನು ಕರೆದುಕೊಂಡು ಬಂದಿದ್ದು. ಇಲ್ಲಿಗೆ ಬಂದು ಒಂದೂವರೆ ವರ್ಷ ಆಯ್ತು, ಇನ್ನು ನನ್ನ ಬೇಡಿಕೆ ಈಡೇರಿಲ್ಲ. ಸಾರಿಗೆ ನೌಕರರ 9 ಬೇಡಿಕೆಯನ್ನು ಅವರು ಈಡೇರಿಸಿದ್ದಾರೆ. ಆದರೆ ನನ್ನ ಒಂದೇ ಒಂದು ಬೇಡಿಕೆಯನ್ನು ಇನ್ನೂ ಈಡೇರಿಸಿಲ್ಲ ಎಂದು ಎಂಟಿಬಿ ನಾಗರಾಜ್ ಬೇಸರದಿಂದ ನುಡಿದಿದ್ದಾರೆ.
ಸಂಕ್ರಾಂತಿವರೆಗೂ ಸಚಿವ ಸ್ಥಾನದ ಬಗ್ಗೆ ಮಾತನಾಡಲೇ ಬೇಡ ಎಂದು ಎಂಟಿಬಿ ನಾಗರಾಜ್​ಗೆ ಸಿಎಂ ತಾಕೀತು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚಿಗೆ ಎಂಟಿಬಿ ನಾಗರಾಜ್​ ರಾಜೀನಾಮೆ ಮಾತು ಪ್ರಸ್ತಾಪಿಸಿದ್ದರು. ಇವರ ಮಾತಿಗೆ ಕಕ್ಕಾಬಿಕ್ಕಿಯಾದ ಸಿಎಂ, ‘ಕೈ ಮುಗಿಯುತ್ತೇನೆ ಸುಮ್ಮನಿರಿ. ರಾಜೀನಾಮೆ ನೀಡುವ ಮಾತನಾಡಬೇಡಿ. ಹೈಕಮಾಂಡ್ ಒಪ್ಪಿಗೆ ನೀಡಿದ ತಕ್ಷಣವೇ ಸಚಿವರನ್ನಾಗಿ ಮಾಡುತ್ತೇವೆ’ ಎಂದು ಮನವಿ ಮಾಡಿದ್ದರು.
ನನ್ನನ್ನು ಮಂತ್ರಿ ಮಾಡಿ, ಇಲ್ಲವೇ ವಿಷ ಕೊಡಿ… ಈ ಮಾತು ಕೇಳಿ ಕಕ್ಕಾಬಿಕ್ಕಿಯಾದ ಸಿಎಂ

https://www.vijayavani.net/love-case-suicide/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 2 =
Remember me
