ಶಿರಾ:ಸಚಿವ ಸ್ಥಾನ ಆಕಾಂಕ್ಷಿಯಾಗಿ ಬಿಜೆಪಿ ಸೇರಿದ್ದ ಎಂ.ಟಿ.ಬಿ.ನಾಗರಾಜ್​ ಅವರಿಗೆ ನಂತರ ಕಾರಣಾಂತರಗಳಿಂದ ಸಚಿವ ಸ್ಥಾನ ಸಿಕ್ಕಿಲ್ಲ. ಅದಾದ ಬಳಿಕ ವಿಧಾನ ಪರಿಷತ್​ ಸದಸ್ಯರಾಗಿ ಪಕ್ಷದಲ್ಲಿ ಮುಂದುವರಿದಿದ್ದಾರೆ. ಆದರೆ ಅವರಿನ್ನೂ ಸಚಿವ ಸ್ಥಾನದ ಆಸೆಯನ್ನು ತೊರೆದಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪನವರು ಕೊಟ್ಟ ಭರವಸೆ ಉಳಿಸಿಕೊಂಡೇ ತೀರುತ್ತಾರೆ ಎಂದು ಹೇಳಿದ್ದಾರೆ.
ನಗರದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಡಿಯೂರಪ್ಪನವರು ಸಚಿವ ಸ್ಥಾನ ನೀಡುವುದಾಗಿ ಮಾತು ಕೊಟ್ಟಿದ್ದಾರೆ. ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಂದವನು ನಾನು, ಹಾಗಾಗಿ ಮತ್ತೆ ಖಂಡಿತ ಮಂತ್ರಿ ಆಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಕೂಗು ಕೇಳಿಬರುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಬದಲಾವಣೆಗೆ ಖುರ್ಚಿ ಖಾಲಿ ಇಲ್ಲ. ಅದರ ಮೇಲೆ ಯಡಿಯೂರಪ್ಪನವರು ಕುಳಿತಿದ್ದಾರೆ. ಮೂರು ವರ್ಷ ಅವರೇ ಮುಂದುವರಿಯುತ್ತಾರೆ ಎಂದು ಸ್ಪಷ್ಟಪಡಿಸಿದರು.
ಶಿರಾದಲ್ಲಿ ಸುಮಾರು 23 ಸಾವಿರದಷ್ಟು ಕುರುಬ ಸಮುದಾಯದ ಜನರಿದ್ದು ಈ ಬಾರಿ ಅವರ ಒಲವು ಬಿಜೆಪಿ ಕಡೆಗಿದೆ. ಸಿದ್ಧರಾಮಯ್ಯ ಬಂದು ಪ್ರಚಾರ ನಡೆಸಿರಬಹುದು. ಅವರು ಈಗಾಗಲೇ ಮುಖ್ಯಮಂತ್ರಿಯಾಗಿದ್ದವರು. ಬೇರೆಯವರಿಗೆ ಅವಕಾಶ ಬೇಡವೇ? ಬೇರೆಯವರಿಗೂ ಅವಕಾಶ ಸಿಗಲಿ. ಎರಡನೇ ಹಂತದ ನಾಯಕರು ಬೆಳೆಯಬೇಕಲ್ಲವೇ ಸಿದ್ಧರಾಮಯ್ಯ ಮಾತನ್ನು ಈಗಾಗಲೇ ಕುರುಬ ಜನ 25 ವರ್ಷಗಳಿಂದ ಕೇಳಿದ್ದಾರೆ. ಅವರು ಡಿಸಿಎಂ, ಸಿಎಂ ಎಲ್ಲವೂ ಆಗಿದ್ದಾರೆ. ಈಗ ನಮ್ಮಂಥವರು ಬೆಳೆಯಬೇಕು. ಸಿದ್ದರಾಮಯ್ಯ ನನಗೆ ಅನ್ಯಾಯ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಅಮೆರಿಕ ಫಲಿತಾಂಶ ವಿಳಂಬ ಸಾಧ್ಯತೆ: ಮೆಲ್ ಇನ್ ಮತಪತ್ರ ಮೂಲಕ ದೊಡ್ಡ ಸಂಖ್ಯೆಯಲ್ಲಿ ಮತ ಚಲಾವಣೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:10 + ten =
Remember me
