ಬೆಂಗಳೂರು:ಅಕ್ರಮವಾಗಿ ಸಿಕ್ಕಿದ ಮೈಸೂರು ಮುಡಾದ 14 ನಿವೇಶನಗಳನ್ನು ವಾಪಸ್ ಮಾಡಬೇಕು ಹಾಗೂ ಅಕ್ರಮದ ಆ ತಪ್ಪಿಗೆ ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಆಗ್ರಹಿಸಿದರು.
ಬಿಜೆಪಿ ರಾಜ್ಯ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಂಗಳವಾರ ಮಾತನಾಡಿದ ಅವರು, ಕಾನೂನು, ನಿಯಮ, ನಿರ್ದೇಶನಗಳಿಗೆ ಅವರು ವಿರುದ್ಧವಾಗಿ ವರ್ತಿಸಿದ್ದರು ಎಂಬ ಕಾರಣಕ್ಕೆ ಮುಡಾದ ಹಿಂದಿನ ಅಧಿಕಾರಿ ದಿನೇಶ್ ಕುಮಾರ್ ಅವರನ್ನು ಅಮಾನತು ಮಾಡಿದ್ದಾರೆ. ಈ ಮೂಲಕ ಮುಡಾದ ನಿರ್ಣಯಗಳು, ನಿರ್ದೇಶನಗಳು, ನಿರ್ಧಾರಗಳು ತಪ್ಪಾಗಿದೆ ಎಂದು ಸರ್ಕಾರ ಒಪ್ಪಿಕೊಂಡಿದೆ.
ಮುಖ್ಯಮಂತ್ರಿಯವರ ಪತ್ನಿಗೆ ಸಮಾನಾಂತರ ಬಡಾವಣೆಯಲ್ಲಿ ಸೈಟ್ ಸಿಕ್ಕಿದ್ದಲ್ಲ. ಬಹಳ ದೊಡ್ಡ ಮಟ್ಟದಲ್ಲಿ ಬೆಲೆಬಾಳುವ ನಿವೇಶನಗಳಿರುವ ಬಡಾವಣೆ ಅದಾಗಿದೆ. ಚದರಡಿಗೆ 1 ಸಾವಿರ ರೂ. ಸಿಗುವ ಜಾಗ ಬಿಟ್ಟು 10 ಸಾವಿರದಿಂದ 12 ಸಾವಿರ ರೂ.ಗೆ ಚದರಡಿ ಇರುವಂಥ ಪ್ರದೇಶದಲ್ಲಿ ಸೈಟ್ ಪಡೆದುದು ಅಕ್ರಮ ಎಂದು ದೂರಿದರು.
ದಿನೇಶ್ ಕುಮಾರ್ ಅಮಾನತು ತಮಗೆ ಗೊತ್ತಿಲ್ಲ ಎಂದು ಸಿಎಂ ಹೇಳುತ್ತಿದ್ದಾರೆ. ಮೈಸೂರು ಮುಡಾದ ಅಕ್ರಮ ಸಂಬಂಧದಲ್ಲೇ ಅಧಿಕಾರಿ ಅಮಾನತಾಗಿದ್ದಾರೆ. ನಿಮ್ಮ ಜಾಣ ಉತ್ತರವು ಕರ್ನಾಟಕದ ಜನರನ್ನು ದಿಗ್ಭ್ರಾಂತರನ್ನಾಗಿ ಮಾಡಿದೆ ಎಂದು ಹೇಳಿದರು. ದಿನೇಶ್ ಕುಮಾರ್ ಅಮಾನತು ತಮಗೆ ಗೊತ್ತಿಲ್ಲ ಎಂಬ ಉತ್ತರವು ಕರ್ನಾಟಕದ ಜನರನ್ನು ದಿಗ್ಭ್ರಾಂತರನ್ನಾಗಿ ಮತ್ತು ಮೂಢರನ್ನಾಗಿ ಮಾಡುವಂಥದ್ದು ಎಂದು ಟೀಕಿಸಿದರು.
ನಿವೇಶನ ಅಭಿವೃದ್ಧಿ ವೇಳೆ ಶೇ 15ರಷ್ಟು ಉದ್ಯಾನ ಸಂಬಂಧಿಸಿದ ಜಮೀನು, ಶೇ 10ರಷ್ಟು ನಾಗರಿಕ ಸೌಲಭ್ಯಕ್ಕೆ ಜಾಗ ಕೊಟ್ಟಿಲ್ಲ ಎಂಬುದು ಅಮಾನತಿಗೆ ಒಂದು ಕಾರಣ. 2009ರಿಂದ ಜಾರಿಗೊಂಡ ಶೇ 50-50 ಅನುಪಾತದ ನಿಯಮಗಳು ಅನ್ವಯವಾಗುವುದಿಲ್ಲ‌.
ಹೀಗಾಗಿ ಪ್ರಾಧಿಕಾರದಿಂದ ಬದಲಿ ನಿವೇಶನ ಮಂಜೂರಾತಿಗೆ ಶೇ 50-50 ಅನುಪಾತದಂತೆ ಕೈಗೊಂಡಿರುವ ಯಾವುದೇ ಕ್ರಮವೂ ಕಾನೂನು ಬಾಹಿರವಾಗಿರುತ್ತದೆ ಎಂದು ಇನ್ನೊಂದು ಪ್ರಮುಖ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ನಾವೂ ಇದೇ ಪ್ರಶ್ನೆಯನ್ನು ಎತ್ತಿದ್ದೆವು ಎಂದು ಎನ್.ರವಿಕುಮಾರ್ ಹೇಳಿದರು.
2009ರ ಮೇಲ್ಪಟ್ಟು ಇದು ಜಾರಿಯಾಗುತ್ತದೆ. 2015ಕ್ಕೆ ಇದನ್ನು ಜಾರಿ ಮಾಡಿದ್ದರು. ಮುಡಾದಲ್ಲಿ ಈ ಸಂಬಂಧ ಸಭೆ ನಡೆದಿತ್ತು. ಆ ಜನರಲ್ ಬಾಡಿ ಮೀಟಿಂಗಿನಲ್ಲಿ ರಾಮದಾಸ್, ಜಿ.ಟಿ.ದೇವೇಗೌಡ, ಮರಿತಿÀಬ್ಬೇಗೌಡ ಮೊದಲಾದವರು ಭಾಗವಹಿಸಿದ್ದರು. ಅದರೊಳಗೆ ಇಬ್ಬರನ್ನು ಬಿಟ್ಟು ಎಲ್ಲರೂ ಅದನ್ನು (ಶೇ 50-50 ಅನುಪಾತ) ವಿರೋಧಿಸಿದ್ದರು.
ಆದರೆ, ಅಲ್ಲಿನ ಚೇರ್ಮನ್ ರಾಜೀವ್, ಕಮಿಷನರ್ (ಬಹುಶಃ) ನಟೇಶ್ ಹೊರತುಪಡಿಸಿ ಎಲ್ಲರೂ ವಿರೋಧಿಸಿದ್ದು, ಕಾನೂನೇ ಆಗಿರಲಿಲ್ಲ. ಆದರೆ, ನಿಯಮ ಆಗಿದೆ ಎಂದು ನಕಲಿ (ಫೇಕ್) ನಿರ್ಣಯ ಮಾಡಿ ಅದರ ಪ್ರಕಾರ 14 ಸೈಟ್‍ಗಳನ್ನು ಇವರಿಗೆ ಕೊಟ್ಟಿದ್ದರು ಎಂದು ಆಕ್ಷೇಪಿಸಿದರು.
ಶೇ 50-50 ಅನುಪಾತವೇ ಅನುಷ್ಠಾನಕ್ಕೆ ಬಂದಿರಲಿಲ್ಲ. ಆಗಿದೆ ಎಂದು ಸಿದ್ದರಾಮಯ್ಯನವರು ಹೇಳುತ್ತಿದ್ದರು. ಶೇ 50-50 ಅನುಪಾತವೇ ಜಾರಿಯಲ್ಲಿಲ್ಲ ಎಂದ ಮೇಲೆ ಸಿದ್ದರಾಮಯ್ಯನವರು 14 ಸೈಟ್‍ಗಳನ್ನು ಏನು ಮಾಡುತ್ತಾರೆ? ಅನಧಿಕೃತವಾಗಿ, ಕಾನೂನುಬಾಹಿರವಾಗಿ ಪಡೆದ 14 ಸೈಟ್‍ಗಳನ್ನು ವಾಪಸ್ ಕೊಡುತ್ತಾರಾ ? ಎಂದು ಕೇಳಿದರು.
ಇದೊಂದು ಬಹುದೊಡ್ಡ ಹಗರಣ. ರಾಜ್ಯ ಸರಕಾರದ ಕೈಕೆಳಗೆ ಇರುವ ಸಂಸ್ಥೆ ಬಿಟ್ಟು ಬೇರೆ ಸಂಸ್ಥೆಗೆ ತನಿಖೆಗೆ ಕೊಡಬೇಕು ಎಂಬ ಆಗ್ರಹವನ್ನು ಎನ್.ರವಿಕುಮಾರ್ ಪುನರುಚ್ಚರಿಸಿದರು.
ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಅಧ್ಯಕ್ಷ ರಘು ಕೌಟಿಲ್ಯ ಮಾತನಾಡಿ, ಅಕ್ರಮದ ವಿರುದ್ಧ ಬಿಜೆಪಿ ಸತತ ಹೋರಾಟ ಮಾಡಿದೆ. ಬಿಜೆಪಿ ಸರಕಾರದ ಅವಧಿಯಲ್ಲಿ ನೇಮಕ ಮಾಡಿದ ತಾಂತ್ರಿಕ ಪರಿಣತರ (ತಜ್ಞರ) ಸಮಿತಿ ವರದಿಯನ್ನು 2023ರಲ್ಲೇ ಕೊಡಲಾಗಿತ್ತು. ಅಲ್ಲಿಂದ ಇಲ್ಲಿವರೆಗೆ ಅದನ್ನು ದೂಳು ಹಿಡಿಸಿ ಇಟ್ಟುಕೊಂಡು ‘’ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು” ಎಂಬ ರೀತಿಯಲ್ಲಿ ಈಗ ಒಬ್ಬ ಆಯುಕ್ತರನ್ನು ಅಮಾನತು ಮಾಡಿದ್ದಾರೆ ಎಂದು ಟೀಕಿಸಿದರು.
ಸಿದ್ದರಾಮಯ್ಯನವರ 14 ನಿವೇಶನಗಳೂ 50:50 ಅನುಪಾತದಡಿ ಸಿಕ್ಕಿದ್ದು ತಾನೇ? ಆ ಆಯುಕ್ತರನ್ನು ಯಾಕೆ ಅಮಾನತು ಮಾಡಿಲ್ಲ? ಸಿದ್ದರಾಮಯ್ಯನವರ ಕುಟುಂಬಕ್ಕೆ ನಿವೇಶನ ಕೊಟ್ಟಿದ್ದಕ್ಕೆ ಇದು ಬಳುವಳಿ ಎಂದು ಆಕ್ಷೇಪಿಸಿದರು. ಅದಕ್ಕಾಗಿಯೇ ಅವರನ್ನು ಶಿಕ್ಷೆಯಿಂದ ಹೊರಗೆ ಇಟ್ಟಿದ್ದಾರೆ ಎಂದು ದೂರಿದರು.
ಸಿಎಂ ಸಿದ್ದರಾಮಯ್ಯ ಅವರಿಗೆ ಆತ್ಮಗೌರವ, ಕಾನೂನು, ನಿಯಮದ ಕುರಿತು ಗೌರವ ಇದ್ದಲ್ಲಿ, ಸಂವಿಧಾನದ ಕುರಿತು ಗೌರವ ಇರುವುದಾದರೆ, ಮುಖ್ಯಮಂತ್ರಿಗಳ ಸ್ಥಾನದ ಘನತೆ ಕಾಪಾಡುವುದಾದರೆ ಈ ಕೂಡಲೇ ರಾಜೀನಾಮೆ ಕೊಡಬೇಕು. ಅದಕ್ಕಿಂತ ಮೊದಲು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರನ್ನು ವಜಾ ಮಾಡಿ ಎಂದು ರಘು ಕೌಟಿಲ್ಯ ಒತ್ತಾಯಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − one =
Remember me
