ಮುದ್ದೇಬಿಹಾಳ: ಪಟ್ಟಣದ ವ್ಯಾಪ್ತಿಯಲ್ಲಿ ಮಾಂಸದ ಮಾರುಕಟ್ಟೆ ಇದ್ದರೂ ಅಲ್ಲಿ ಮಾಂಸ ಮಾರಾಟ ಮಾಡಲು ಮಳಿಗೆ ಪಡೆದುಕೊಂಡವರು ಮುಂದಾಗದ್ದರಿಂದ ಎಲ್ಲೆಂದರಲ್ಲಿ ರಸ್ತೆ ಬದಿ ಮಾಂಸ ಮಾರಾಟಕ್ಕಿಳಿದಿರುವ ಪರಿಣಾಮ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ.
ನೇತಾಜಿ ನಗರಕ್ಕೆ ತೆರಳುವ ರಸ್ತೆ ಎರಡೂ ಬದಿ ಅಂದಾಜು 30-40 ಅಂಗಡಿಕಾರರು ಕೋಳಿ, ಆಡು, ಕುರಿಗಳ, ದನಗಳ ಮಾಂಸ ಮಾರುತ್ತಿದ್ದಾರೆ. ಆದರೆ, ಕೆಲವು ಅಂಗಡಿಕಾರರು ವೈಜ್ಞಾನಿಕವಾಗಿ ಮಾಂಸದ ತ್ಯಾಜ್ಯವನ್ನು ವಿಲೇವಾರಿ ಮಾಡದೆ ಎಲ್ಲೆಂದರಲ್ಲಿ ಎಸೆಯುತ್ತಿದ್ದು, ಇದರಿಂದಾಗಿ ನೇತಾಜಿ ನಗರದಲ್ಲೆಲ್ಲ ಕೊಳೆತ ಮಾಂಸದ ದುರ್ವಾಸನೆ ಬೀರುತ್ತಿದೆ.
ಮಾರುಕಟ್ಟೆ ಇದ್ದರೂ ಹೋಗಲ್ಲ:ಮಾಂಸದ ಮಾರಾಟಕ್ಕೆಂದೆ ಪುರಸಭೆಯಿಂದ 15 ವರ್ಷಗಳ ಹಿಂದೆ 26 ಮಳಿಗೆಗಳ ಮಾರುಕಟ್ಟೆ ನಿರ್ಮಿಸಿದ್ದರೂ ಅಲ್ಲಿ ಒಬ್ಬ ವ್ಯಾಪಾರಿ ಹೊರತುಪಡಿಸಿ ಬೇರೆ ಯಾರೊಬ್ಬರು ವ್ಯಾಪಾರ ಮಾಡುತ್ತಿಲ್ಲ. ತಮಗೆ ತಿಳಿದ ಸ್ಥಳದಲ್ಲಿ ಬಾಡಿಗೆ ಅಂಗಡಿ ಹಿಡಿದು ಅಲ್ಲೇ ವ್ಯಾಪಾರ ಮಾಡುತ್ತಿದ್ದಾರೆ. ಓಣಿಯಲ್ಲಿರುವ ಮಾಂಸದ ಅಂಗಡಿಗಳಿಂದಾಗಿ ಮನೆಗಳಲ್ಲಿರುವ ಜನ ನಿತ್ಯ ವಾಕರಿಸುತ್ತಲೇ ಬದುಕು ನಡೆಸಬೇಕಾಗಿದೆ.
ಮಾಂಸದ ಅಂಗಡಿಕಾರರಲ್ಲಿ ಎರಡ್ಮೂರು ಬಣಗಳಿರುವುದರಿಂದಾಗಿ ಯಾರು ಯಾರೊಬ್ಬರ ಮಾತನ್ನೂ ಕೇಳದ ಸ್ಥಿತಿಯಲ್ಲಿಲ್ಲ. ಎಲ್ಲರೂ ಮುಖ್ಯರಸ್ತೆ ಸಮೀಪದಲ್ಲೇ ವ್ಯಾಪಾರ ಮಾಡುತ್ತಾರೆ. ಬಹಿರಂಗವಾಗಿಯೇ ಯಾವುದೇ ಸುರಕ್ಷಿತ ಕ್ರಮಗಳನ್ನು ಅನುಸರಿಸದೆ ವ್ಯಾಪಾರ ಮಾಡುತ್ತಿದ್ದಾರೆ. ಪುರಸಭೆಯಿಂದ ಅಂಗಡಿ ಪಡೆದುಕೊಂಡವರೂ ಮತ್ತೆ ಬೇರೆ ಬಾಡಿಗೆ ಅಂಗಡಿ ಪಡೆದು ವ್ಯಾಪಾರ ಮಾಡುತ್ತಿದ್ದಾರೆ.
ಪುರಸಭೆಯವರು ನಿರ್ಮಿಸಿರುವ ಮಟನ್ ಮಾರ್ಕೆಟ್‌ನಲ್ಲಿ ಮೂಲ ಸೌಕರ್ಯಗಳಿದ್ದರೂ ಯಾರೊಬ್ಬರೂ ವ್ಯಾಪಾರಕ್ಕೆ ಹೋಗುತ್ತಿಲ್ಲ. ಮುಖ್ಯರಸ್ತೆಯಿಂದ ಮಾರುಕಟ್ಟೆ ಸ್ವಲ್ಪ ದೂರವಾಗುತ್ತದೆ ಎಂಬ ಕಾರಣದ ನೆಪವೊಡ್ಡಿ, ಎಲ್ಲರೂ ಒಂದೇ ಕಡೆ ವ್ಯಾಪಾರಕ್ಕಿಳಿದರೆ ವ್ಯಾಪಾರ ಆಗುವುದಿಲ್ಲ ಎಂಬ ಕಾರಣವೊಡ್ಡಿ ಅಲ್ಲಿ ವ್ಯಾಪಾರ ಮಾಡುತ್ತಿಲ್ಲ. ಕೆಲವರು ಅಂಗಡಿಗಳಲ್ಲಿ ಕಟ್ಟಿಗೆ, ಕಬ್ಬಿಣ ಇಟ್ಟಿದ್ದು 24 ಮಳಿಗೆಗಳು ಹಾಳು ಹೊಡೆಯುತ್ತಿವೆ. ಅಂಗಡಿ ಪಡೆದರೂ ವ್ಯಾಪಾರ ಇಲ್ಲದ ಕಾರಣ ಇಲ್ಲಿ ಮಾಂಸದ ಮಾರಾಟವನ್ನು ಮಾಡುವುದೇ ಬಿಟ್ಟಿದ್ದೇನೆ ಎಂದು ಬಸವಂತ ಕಲಾಲ ಹೇಳಿದರು.
ಕೋಳಿ, ಆಡು, ದನ ಮತ್ತಿತರ ಪ್ರಾಣಿಗಳ ಮಾಂಸದ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬೀಸಾಡುತ್ತಿರುವುದರಿಂದ ಅಸಹನೀಯ ವಾತಾವರಣ ನಿರ್ಮಾಣವಾಗಿದೆ. ನಾನು ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಮಾರುಕಟ್ಟೆಗೆ ಸ್ಥಳಾಂತರಿಸಲು ಪ್ರಯತ್ನಿಸಿದರೂ ವ್ಯಾಪಾರಿಗಳಲ್ಲಿರುವ ಹೊಂದಾಣಿಕೆಯ ಮನೋಭಾವ, ಸಾರ್ವಜನಿಕರ ಆರೋಗ್ಯದ ಬಗ್ಗೆ ನಿಷ್ಕಾಳಜಿ ವಹಿಸುವ ಮಾಂಸ ಮಾರಾಟಗಾರರಿಂದಾಗಿ ಅದು ಯಶಸ್ವಿಯಾಗಿಲ್ಲ.ಬಸನಗೌಡ ಪಾಟೀಲ,ಪುರಸಭೆ ಮಾಜಿ ಅಧ್ಯಕ್ಷ
ಈಗಾಗಲೇ ಸುರಕ್ಷಿತ ಸಾಧನಗಳೊಂದಿಗೆ ವ್ಯಾಪಾರ ಮಾಡಲು ಮಾಂಸ ಮಾರಾಟಗಾರರಿಗೆ ಮೌಖಿಕವಾಗಿ ಸೂಚಿಸಲಾಗಿದೆ. ವ್ಯಾಪಾರಸ್ಥರ ಸಂಖ್ಯೆ ಹೆಚ್ಚಾಗಿದ್ದು, ಇರುವ ಮಾರುಕಟ್ಟೆಯಲ್ಲಿ ಜಾಗೆ ಸಾಲುತ್ತಿಲ್ಲ. ಬೇರೆ ಮಾರುಕಟ್ಟೆ ನಿರ್ಮಾಣಕ್ಕೆ ಜಾಗೆ ಹುಡುಕಾಟ ಪರಿಶೀಲನೆಯಲ್ಲಿದೆ. ಪುರಸಭೆಯಿಂದ ಅಲ್ಲಿನ ತ್ಯಾಜ್ಯದ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುತ್ತದೆ. ದುರ್ವಾಸನೆ ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು. ಬೀದಿ ಬದಿಯಲ್ಲಿ ತಂದು ಮಾಂಸ ಮಾರಾಟ ಮಾಡಿದವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ.ಗೋಪಾಲ ಕಾಸೆ,ಮುಖ್ಯಾಧಿಕಾರಿ ಪುರಸಭೆ
ನಮ್ಮಲ್ಲಿಯೇ ಒಗ್ಗಟ್ಟಿಲ್ಲ. ಪುರಸಭೆ ಅಧಿಕಾರಿಗಳು ಇರುವ ಮಾರುಕಟ್ಟೆಯಲ್ಲಿ ಅಂಗಡಿಗಳಿದ್ದು, ಅವುಗಳಲ್ಲಿ ಸೌಕರ್ಯವನ್ನು ಮಾಡಿಸಿ ಕೊಟ್ಟಿದ್ದಾರೆ. ಒಂದೆಡೆ ಕೂತು ವ್ಯಾಪಾರ ಮಾಡಬೇಕು. ಅದು ಬಿಟ್ಟು ಹೀಗೆ ಎಲ್ಲೆಂದರಲ್ಲಿ ಕುಳಿತು ವ್ಯಾಪಾರ ಮಾಡುವುದು ನಮಗೂ ಸರಿ ಕಾಣುವುದಿಲ್ಲ. ಆದರೆ ಉಪಜೀವನಕ್ಕಾಗಿ ಬೇರೆ ಉದ್ಯೋಗ ಗೊತ್ತಿಲ್ಲದ ನಾವು ಜಾಗೆ ಸಿಕ್ಕಲ್ಲಿ ಕೂತು ವ್ಯಾಪಾರ ಮಾಡುತ್ತಿದ್ದೇವೆ.ರವಿ ಕಲಾಲ,ಮಹ್ಮದರಫೀಕ ಬಾಗಲಕೋಟ ಅಂಗಡಿಕಾರು
|ಶಂಕರ ಈ. ಹೆಬ್ಬಾಳ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − six =
Remember me
