ಬೆಂಗಳೂರು:ಭಾರತದ ಜ್ಞಾನ ಪರಂಪರೆಯ ಮೂಲದಲ್ಲಿಯೇ ರಚನೆಯಾಗಿದ್ದು ವಚನ ಸಾಹಿತ್ಯ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹ ಸರಕಾರ್ಯವಾಹ ಮುಕುಂದ ಸಿ.ಆರ್.ಹೇಳಿದ್ದಾರೆ.
ಭಾರತೀಯ ವಿದ್ಯಾಭವನದಲ್ಲಿ ಹಮ್ಮಿಕೊಂಡಿದ್ದ ಪ್ರಜ್ಞಾ ಪ್ರವಾಹ ಪ್ರಕಟಣೆಯಲ್ಲಿ ಹೊರಬಂದ ‘ವಚನ ದರ್ಶನ’ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡು ದಿಕ್ಸೂಚಿ ಭಾಷಣ ಮಾಡಿದರು.
ಕಳೆದ ಎರಡು ನೂರು ವರ್ಷಗಳಲ್ಲಿ ಭಾರತದ ಮೇಲೆ ಉಂಟಾಗಿರುವ ಪಾಶ್ಚಾತ್ಯ ಪ್ರಭಾವದಿಂದ ನಾವು ನೋಡುವ ಪ್ರತಿಯೊಂದು ದೃಷ್ಟಿಕೋನವೂ ಬದಲಾಗಿದೆ. 12ನೇ ಶತಮಾನದಲ್ಲಿ ರಚನೆಯಾಗಿರುವ ವಚನ ಸಾಹಿತ್ಯ ಕೇವಲ ಪ್ರತಿಭಟನೆಗಾಗಿ ಸೃಷ್ಟಿಯಾದ ಸಾಹಿತ್ಯ ಎಂಬ ತಪ್ಪು ಕಲ್ಪನೆ ಮೂಡಿದೆ.ಗುಲಾಮಗಿರಿಯ ಪ್ರಭಾವದಿಂದಾಗಿರುವ ಈ ದೋಷವನ್ನು ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಪ್ರಜ್ಞಾ ಪ್ರವಾಹ ವಚನ ದರ್ಶನವನ್ನು ಪ್ರಕಟಿಸಿದೆ.
ಅನುಭವ ಸಾಹಿತ್ಯ ಸಮಾಜದಲ್ಲಿ ತೀವ್ರ ಪ್ರಭಾವ ಬೀರುತ್ತದೆ.ಅನುಭವದಿಂದ ಸೃಷ್ಟಿಯಾದ ವಚನ ಸಾಹಿತ್ಯದಲ್ಲಿ ಹಿಂದು ಸಮಾಜದ ಹಲವು ದೋಷಗಳನ್ನು ತಿದ್ದುವ ಉದ್ದೇಶವಿದ್ದಿದ್ದು ನಿಜ.ಆದರೆ ಪ್ರತಿಭಟನೆಯೇ ಅದರ ಉದ್ದೇಶವಲ್ಲ.ಈ ಗ್ರಂಥ ಪ್ರತಿರೋಧಕ್ಕೆ ಪ್ರತಿಕಾರವಾಗಿ ಪ್ರಕಟವಾಗಿದ್ದಲ್ಲ.ಜಗತ್ತಿನ ಹಲವು ಸಮಸ್ಯೆಗೆ ಪರಿಹಾರ ಒದಗಿಸುವ ಭಕ್ತಿ,ಕಾಯಕ,ದಾಸೋಹ ತತ್ವಗಳ ದರ್ಶನ ಮಾಡಿಸುವ ಸದುದ್ದೇಶದಿಂದ ಪ್ರಕಟವಾಗಿದೆ.
ಆರ್‌ಎಸ್‌ಎಸ್ ಪ್ರಕಟ ಮಾಡಿದೆ ಎಂಬ ಕಾರಣಕ್ಕಾಗಿ ಕೃತಿಯನ್ನು ಅಧ್ಯಯನ ಮಾಡಬಾರದು ಎಂದು ನಿರ್ಧರಿಸುವುದು ಸರಿಯಾದ ಕ್ರಮವಲ್ಲ ಎಂದು ಗ್ರಂಥ ಪ್ರಕಟಣೆಯ ಹಿಂದಿನ ಆಶಯವನ್ನು ವಿವರಿಸಿದರು.
ಸಮಾರಂಭದಲ್ಲಿ ಹಿರಿಯ ವಿದ್ವಾಂಸ ಮಲ್ಲೇಪುರಂ ಜಿ.ವೆಂಕಟೇಶ,ಸಂಘದ ಹಿರಿಯ ಪ್ರಚಾರಕರಾದ ರಘುನಂದನ್,ಕಿರಣಕುಮಾರ್ ವಿವೇಕ್ ಮತ್ತಿತರರು ಉಪಸ್ಥಿತರಿದ್ದರು.
ಭಾರತದ ಸುದೀರ್ಘಪರಂಪರೆಯು ಪ್ರತಿ ಹಂತದಲ್ಲೂ ವಿಕಾಸಗೊಳ್ಳುತ್ತಾ ಬಂದಿದೆ.ಅಂತಹ ವಿಕಾಸದ ಹಾದಿಗೆ ಶರಣರು ಕೂಡಾ ಹೊರತಲ್ಲ.ಪ್ರಾಚೀನ ದರ್ಶನದ ಬೆಳಕಿನಲ್ಲಿ ಅಧ್ಯಯನ ಮಾಡಿದಾಗ ವಚನಗಳಲ್ಲಿ ಕೂಡಾ ದರ್ಶನ ಮಾರ್ಗ ಕಾಣುತ್ತದೆ ಎಂದು ವಿದ್ವಾಂಸ ಮಲ್ಲೇಪುರಂ ಜಿ.ವೆಂಕಟೇಶ ತಿಳಿಸಿದರು.
ಎಂ.ಆರ್.ಶ್ರೀನಿವಾಸರ ವಚನ ಧರ್ಮಸಾರ ಗ್ರಂಥದಲ್ಲಿ ಉಪನಿಷತ್ತಿನ ಬೆಳಕಿನಲ್ಲಿ ವಚನಗಳ ರಚನೆ ಬಗ್ಗೆ ಉಲ್ಲೇಖಿಸಿದ್ದಾರೆ.ಸಿರಿಗೆರೆ ಶ್ರೀಗಳು ವಚನ ಮತ್ತು ಉಪನಿಷತ್ತು ಕುರಿತು ತೌಲನಿಕ ಅಧ್ಯಯನ ನಡೆಸಿದ್ದಾರೆ.ವಚನಗಳು ಕೇವಲ ಅಕ್ಷರ,ಪದಗಳ ಜೋಡಣೆ,ಅಲಂಕಾರ,ಮೀಮಾಂಸೆಯಿಂದ ಸೃಷ್ಟಿಯಾಗಿಲ್ಲ.ವಚನಗಳು ಅನುಭವ ಮತ್ತು ಅನುಗ್ರಹದ ಪ್ರತಿಲನಗಳು ಎಂದು ವಿವರಿಸಿದರು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:18 − ten =
Remember me
