ಬೆಂಗಳೂರು:ಪ್ರಸ್ತುತ ಸನ್ನಿವೇಶದ ಸಂಶೋಧನೆಗಳು ಬಹುಶಿಸ್ತೀಯ ಸಂಶೋಧನೆಗಳಾಗಿದ್ದು, ವಿವಿಧ ನಿಕಾಯ ಮತ್ತು ವಿಭಾಗಗಳನ್ನು ಒಳಗೊಂಡ ಸಂಶೋಧನೆ ಇಂದಿನ ಕಾಲಘಟ್ಟದ ಅನಿವಾರ್ಯತೆಯಾಗಿದೆ ಎಂದು ಬೆಂಗಳೂರು ನಗರ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಲಿಂಗರಾಜ ಗಾಂಧಿ ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಂಗಳೂರು ನಗರ ವಿವಿ ಮತ್ತು ಇಂಗ್ಲೆಂಡಿನ ವ್ಹೋಲ್ವರ್ ಹ್ಯಾಪ್ಟಂನ್ ವಿವಿ ನಡುವೆ ಬುಧವಾರ ನಡೆದ ಶೈಕ್ಷಣಿಕ ಮತ್ತು ಸಂಶೋಧನಾ ಒಡಂಬಡಿಕೆ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸರ್ಕಾರ, ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯಮಗಳು ಸಂಶೋಧನೆಯ ಅವಿಭಾಜ್ಯ ಅಂಗಗಳಾಗಿವೆ. ಬಹುಮುಖ ಸಂಶೋಧನೆಯಲ್ಲಿ ತಂತ್ರಜ್ಞಾನ ಅವಲಂಬಿತವಾಗಿದ್ದು, ಸಮಾಜದ ಅಭಿವೃದ್ಧಿಯಲ್ಲಿ ಅವುಗಳ ಕೊಡುಗೆ ಇದೆ. ಹೀಗಾಗಿ, ಎಲ್ಲ ನಿಕಾಯಗಳು ಮತ್ತು ವಿಭಾಗಗಳ ಸಂಶೋಧನಾಸಕ್ತರಿಗೆ ವಿುಲ ಅವಕಾಶಗಳಿವೆ ಎಂದು ಹೇಳಿದರು.
ವ್ಹೋಲ್ವರ್ ಹ್ಯಾಪ್ಟಂನ್ ವಿವಿ ಸಂಶೋಧಕ ಪ್ರಾಧ್ಯಾಪಕ ಡಾ. ಸುರೇಶ್ ರೇಣುಕಪ್ಪ ಮತ್ತು ಸ್ನಾತಕೋತ್ತರ ಸಂಶೋಧನಾ ನಿರ್ದೇಶಕ ಡಾ. ಸುಭಾಶಿನಿ ಸುರೇಶ್ ಮಾತನಾಡಿ, ಪ್ರಸ್ತುತ ಸನ್ನಿವೇಶದ ಸಂಶೋಧನೆಗಳಲ್ಲಿ ವಿಶ್ವವಿದ್ಯಾಲಯ, ಉದ್ಯಮ ಹಾಗೂ ಸರ್ಕಾರಗಳನ್ನು ಒಳಗೊಂಡಿರುತ್ತವೆ. ಸರ್ಕಾರದ ಯೋಜನೆಗಳ ಪರಿಕಲ್ಪನೆ, ಆನುಷ್ಠಾನ ಮತ್ತು ವಿಶ್ಲೇಷಣೆಗಾಗಿ ಸಂಶೋಧನೆಗಳ ಪ್ರಸ್ತುತತೆ ಕುರಿತು ವಿವರಿಸಿದರು.
ವ್ಹೋಲ್ವರ್ ಹ್ಯಾಪ್ಟಂನ್ ವಿವಿ ನಿಯೋಗವು ಆ.19ರ ವರೆಗೆ ಬೆಂ.ನಗರ ವಿವಿ ವ್ಯಾಪ್ತಿಯಲ್ಲಿರುವ ಮೌಂಟ್ ಕಾರ್ಮೆಲ್ ಮಹಿಳಾ ಕಾಲೇಜು ಹಾಗೂ ಇಂಟರ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆ್ ಸೈಕಾಲಜಿಕಲ್ ರಿಸರ್ಚ್ ಸಂಸ್ಥೆಗಳೊಂದಿಗೆ ಚರ್ಚೆ ನಡೆಸಲಿದೆ.
ಈ ವೇಳೆ ಬೆಂ.ನಗರ ವಿವಿ ಕುಲಸಚಿವ ಜವರೇಗೌಡ, ಮೌಲ್ಯಮಾಪನ ಕುಲಸಚಿವ ಡಾ. ವಿ. ಲೋಕೇಶ್, ವಿತ್ತಾಧಿಕಾರಿ ಜೆ.ಪಿ. ರಘು ಉಪಸ್ಥಿತರಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
