ಮಂಡ್ಯ:ರೆಡ್​ ಝೋನ್​ನಿಂದ ಚೇತರಿಸಿಕೊಳ್ಳುತ್ತಿದ್ದ ಮಂಡ್ಯಕ್ಕೆ ಮುಂಬೈ ಕರೊನಾ ಸಂಪರ್ಕ ಕಂಟಕವಾಗಿ ಪರಿಣಮಿಸಿದೆ. ಈ ಹಿಂದೆ ತಬ್ಲಿಘಿ ಜಮಾತ್​ ಮಂಡ್ಯ ಜಿಲ್ಲೆಯನ್ನು ಕಾಡಿತ್ತು. ಅದು ದೂರವಾಗುತ್ತಿದ್ದಂತೆ ಮತ್ತೊಂದು ಕಂಟಕ ಎದುರಾಗಿದೆ.
ಇದನ್ನೂ ಓದಿ:ಸದ್ಗುರು ಕಾರ್ಯಕ್ರಮ ಕರೊನಾ ಹರಡುವ ಹಾಟ್​ಸ್ಪಾಟ್​ ಆಯಿತೇ? ಫ್ಯಾಕ್ಟ್​ಚೆಕ್​ನಲ್ಲಿ ಸತ್ಯಾಂಶ ಬಯಲು!​
ತಬ್ಲಿಘಿಗಳು ಮಂಡ್ಯಕ್ಕೆ ಮೊದಲು ಕರೊನಾ ಸೋಂಕು ತಂದಿದ್ದರು. ತಬ್ಲಿಘಿ ನಂಟಿನಿಂದ ಮಳವಳ್ಳಿಯ 20 ಮಂದಿಗೆ ಸೋಂಕು ತಗುಲಿತ್ತು. ಇದರಿಂದ ಮಂಡ್ಯ ಜಿಲ್ಲೆ ಆತಂಕಗೊಂಡಿತ್ತು. ಇದೀಗ ತಬ್ಲಿಘಿಗಳ ಹೊಸ ಪ್ರಕರಣಗಳು ಕಡಿಮೆಯಾಗುತ್ತಿದ್ದು, 6 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರೊಟ್ಟಿ ನಂಜನಗೂಡಿನ ನಂಜು ಸಹ ಬಹುತೇಕ ನಿವಾರಣೆಯಾಗಿದೆ. ಜ್ಯುಬಿಲಿಯಂಟ್ ಕಾರ್ಖಾನೆಯ ಇಬ್ಬರಿ ಸೋಂಕು ತಗುಲಿತ್ತು. ಓರ್ವ ಸೋಂಕಿತ ಗುಣವಾಗಿದ್ರೆ, ಕ್ವಾರಂಟೈನ್​ನಲ್ಲಿದ್ದವರನ್ನು ಮನೆಗೆ ವಾಪಸ್ ಕರೆಯಿಸಲಾಗಿದೆ.
ಮಂಡ್ಯದಲ್ಲಿ ಕರೊನಾ ದೂರವಾಗುತ್ತಿದ್ದೆ ಎನ್ನುವಷ್ಟರಲ್ಲೇ ಮತ್ತೊಂದು ತಲೆನೋವು ಎದುರಾಗಿದೆ. ಮುಂಬೈನಿಂದ ಬಂದವರಿಂದಾಗಿ ಮಂಡ್ಯದಲ್ಲಿ ಸೋಂಕಿತರು ಹೆಚ್ಚಳವಾಗಿದೆ. ಶವ ತಂದು ಅಂತ್ಯಕ್ರಿಯೆ ನೆರವೇರಿಸಿದ್ದ ನಾಲ್ವರು ಸೇರಿ 7 ಮಂದಿ ಸೋಂಕಿತರಿಗೂ ಮುಂಬೈ ಸಂಪರ್ಕವಿದೆ. ಮತ್ತಷ್ಟು ಸೋಂಕಿತರು ಹೆಚ್ಚಾಗುವ ಆತಂಕ ತಲೆದೂರಿದೆ. ಮಂಡ್ಯ ಜಿಲ್ಲಾಡಳಿತಕ್ಕೆ ಮುಂಬೈನಿಂದ ವಾಪಸ್ಸಾದ ವಲಸಿಗರು ತಲೆನೋವಾಗಿ ಪರಿಣಮಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಇದನ್ನೂ ಓದಿ:ಎಣ್ಣೆ ಪಾರ್ಟಿಯಲ್ಲಿ ಲವ್​ ವಿಚಾರ ಪ್ರಸ್ತಾಪಿಸಿದ್ದಕ್ಕೆ ನಡೆದೇ ಹೋಯ್ತು ಸ್ನೇಹಿತನ ಬರ್ಬರ ಹತ್ಯೆ
ಮದ್ಯದ ಅಮಲಿನಿಂದ ಅತಿಯಾದ ವೇಗದಲ್ಲಿ ಕಾರು ಚಲಾಯಿಸಿ ದುರಂತ ಸಾವಿಗೀಡಾದ ವ್ಯಕ್ತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 1 =
Remember me
