ಬೆಂಗಳೂರು:ಕರೊನಾ ವಿಚಾರದಲ್ಲಿ ಮುಂಬೈ ನಂಟಿನಿಂದ ಈಗಾಗಲೆ ನಲುಗಿರುವ ರಾಜ್ಯಕ್ಕೆ, ಜೂ.1ರ ನಂತರ ಮತ್ತೊಂದು ಅಘಾತ ಎದುರಾಗಲಿದೆ. ಸೇವಾ ಸಿಂಧು ಮೂಲಕ ನೋಂದಣಿಯಾಗಿ ದೆಹಲಿ, ಮುಂಬೈ, ಗುಜರಾತ್ ಇನ್ನಿತರ ನಗರಗಳಿಂದ ಸಾವಿರಾರು ಜನ ರಾಜ್ಯಕ್ಕಾಗಮಿಸಿದ್ದಾರೆ. ಈ ಪೈಕಿ ಮುಂಬೈನಿಂದ ಬಂದವರಲ್ಲೇ ಹೆಚ್ಚಾಗಿ ಸೋಂಕು ಕಾಣಿಸಿಕೊಂಡಿದೆ. ಇದೀಗ ಮುಂಬೈನಿಂದ ಜೂ.1ರಿಂದ ರೈಲು ಸೇವೆ ಆರಂಭಿಸಲಾಗುತ್ತಿದ್ದು, ಸೋಂಕಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.
ರಾಜ್ಯದಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ 2,500ರ ಗಡಿಯಲ್ಲಿದೆ. 10 ದಿನಗಳಿಂದೀಚೆಗೆ 1 ಸಾವಿರಕ್ಕೂ ಹೆಚ್ಚಿನ ಸೋಂಕಿತರು ಪತ್ತೆಯಾಗಿದ್ದಾರೆ. ಅದರಲ್ಲಿ 700ಕ್ಕೂ ಹೆಚ್ಚಿನವರು ಮುಂಬೈನಿಂದ ಬಂದವರಾಗಿದ್ದಾರೆ. ಈ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, 1 ಸಾವಿರ ದಾಟುವ ಅಂದಾಜಿದೆ.
ಇದನ್ನೂ ಓದಿಟೆಸ್ಟ್ ಕ್ರಿಕೆಟ್‌ನಲ್ಲಿ ಹೆಚ್ಚು ಶೂನ್ಯ ಸುತ್ತಿದವರು ಇವರೇ
ಪ್ರತಿನಿತ್ಯ 2 ಸಾವಿರ ಜನ
ದೇಶದಲ್ಲೇ ಮಹಾರಾಷ್ಟ್ರದಲ್ಲಿ ಅದರಲ್ಲೂ ಮುಂಬೈನಲ್ಲಿ ಅತಿಹೆಚ್ಚು ಕರೊನಾ ಪ್ರಕರಣಗಳಿವೆ. ಹೀಗಾಗಿ ಮುಂಬೈನಿಂದ ಬರುವ ಬಹುತೇಕರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಮುಂಬೈ ಸೇರಿ ಹೊರರಾಜ್ಯದಿಂದ ಬರುವ ಪ್ರತಿಯೊಬ್ಬರ ಮೇಲೂ ನಿಗಾ ವಹಿಸಲಾಗುತ್ತಿದೆ. ಇದೀಗ, ಬೆಂಗಳೂರು ನಗರ ಕೆಎಸ್​ಆರ್ ರೈಲು ನಿಲ್ದಾಣ ಮತ್ತು ಗದಗಕ್ಕೆ ಮುಂಬೈನಿಂದ ರೈಲು ಸೇವೆ ನೀಡಲಾಗುತ್ತಿದೆ. ಈ ಎರಡೂ ರೈಲುಗಳಿಂದ ಪ್ರತಿನಿತ್ಯ 2 ಸಾವಿರಕ್ಕೂ ಹೆಚ್ಚಿನ ಜನರು ರಾಜ್ಯದೊಳಗೆ ಬರಲಿದ್ದಾರೆ.
ಕ್ವಾರಂಟೈನ್ ಸಮಸ್ಯೆ
ಮುಂಬೈ ಜತೆಗೆ ದೆಹಲಿಯ ನಿಜಾಮುದ್ದೀನ್, ಗೋವಾದ ವಾಸ್ಕೋ ಡ ಗಾಮ, ಕೊಲ್ಕತಾದ ಹೌರಾ ಹಾಗೂ ಉತ್ತರ ಪ್ರದೇಶದ ದಾನಪುರಕ್ಕೆ ರೈಲು ಸೇವೆ ನೀಡಲಾಗುತ್ತಿದೆ. ಇಲ್ಲಿಂದ ಪ್ರತಿದಿನ 5 ಸಾವಿರಕ್ಕೂ ಹೆಚ್ಚಿನ ಜನರು ರಾಜ್ಯಕ್ಕೆ ಬರಲಿದ್ದಾರೆ. ನಿತ್ಯ ವಿಮಾನಗಳ ಮೂಲಕ 4 ಸಾವಿರಕ್ಕೂ ಹೆಚ್ಚಿನ ಜನರು ಹೊರ ರಾಜ್ಯಗಳಿಂದ ಆಗಮಿಸುತ್ತಿದ್ದಾರೆ. ಹೀಗೆ ನಿತ್ಯ 9 ಸಾವಿರಕ್ಕೂ ಹೆಚ್ಚಿನ ಜನ ರಾಜ್ಯಕ್ಕೆ ಆಗಮಿಸಿದರೆ ಅವರನ್ನೆಲ್ಲ ಕ್ವಾರಂಟೈನ್​ಗೆ ಒಳಪಡಿಸುವುದಕ್ಕೆ ಹರಸಾಹಸ ಪಡಬೇಕಿದೆ. ಪ್ರಮುಖವಾಗಿ ಜಾಗದ ಕೊರತೆ ಎದುರಾಗಲಿದೆ. ಇದಕ್ಕೆ ಪರಿಹಾರ ಎನ್ನುವಂತೆ ರೋಗಲಕ್ಷಣ ಇಲ್ಲದವರನ್ನು ಹೋಂ ಕ್ವಾರಂಟೈನ್ ಮಾಡುತ್ತೇವೆಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಹೋಂ ಕ್ವಾರಂಟೈನ್​ನಲ್ಲಿ ಇಟ್ಟರೂ ನಿಗಾ ವಹಿಸುವುದಕ್ಕೂ ಸಾಕಷ್ಟು ಶ್ರಮ ಪಡಬೇಕಿದೆ.
ಇದನ್ನೂ ಓದಿಜೇವರ್ಗಿ ಕ್ವಾರಂಟೈನ್ನಲ್ಲಿ 14 ಜನರಿಗೆ ವೈರಸ್
ಆನ್​ಲೈನ್ ಬುಕ್ಕಿಂಗ್ ಆರಂಭ
ಜೂ.1ರಿಂದ 16 ಮಾರ್ಗಗಳಲ್ಲಿ ಕಾರ್ಯಾರಂಭ ಮಾಡಲಿರುವ ವೇಳಾಪಟ್ಟಿಯನ್ನು ನೈಋತ್ಯ ರೈಲ್ವೆ ಪ್ರಕಟಿಸಿದೆ. ಗುರುವಾರದಿಂದಲೇ ಟಿಕೆಟ್ ಮುಂಗಡ ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗಿದೆ. ಈಗಾಗಲೆ ಬಹುತೇಕ ಟಿಕೆಟ್​ಗಳು ಮಾರಾಟವಾಗಿದೆ.
ಸಮುದಾಯಕ್ಕೆ ಹರಡುವ ಭೀತಿ
ಸದ್ಯ ರಾಜ್ಯದಲ್ಲಿ ಕರೊನಾ ಸೋಂಕು ಸಮುದಾಯಕ್ಕೆ ಹರಡುತ್ತಿಲ್ಲ. ಬದಲಿಗೆ ರೋಗಿ ಮತ್ತು ಆತನ ಪ್ರಾಥಮಿಕ ಸಂಪರ್ಕದಲ್ಲಿ ಇರುವವರಲ್ಲಷ್ಟೇ ಕಾಣಿಸಿಕೊಳ್ಳುತ್ತಿದೆ. ಒಂದೊಮ್ಮೆ ಹೋಂ ಕ್ವಾರಂಟೈನ್​ನಲ್ಲಿ ಇರುವವರಲ್ಲಿ ಸೋಂಕು ಕಾಣಿಸಿಕೊಂಡು, ಅವರ ಮೇಲೆ ನಿಗಾವಹಿಸದಿದ್ದರೆ ಸೋಂಕು ಸಮುದಾಯಕ್ಕೆ ಹರಡುವ ಸಾಧ್ಯತೆಗಳಿರುತ್ತದೆ. ಹಾಗೇನಾದರೂ ಆದರೆ ರಾಜ್ಯ ಕರೊನಾ ಸೋಂಕಿನ ಹಾಟ್​ಸ್ಪಾಟ್ ಆಗಿ ಪರಿವರ್ತನೆಯಾಗಲಿದೆ.
ಲಾಕ್‌ಡೌನ್ 5.0: ಮುಖ್ಯಮಂತ್ರಿಗಳ ಜತೆ ಅಮಿತ್ ಶಾ ಮಾತುಕತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 13 =
Remember me
