ಮುಂಬೈ:ನಟಿ ಹಾಗೂ ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್​ ಉರ್ಫಿ ಜಾವೇದ್​ಗೆ ವಾಟ್ಸ್​ಆ್ಯಪ್​ ಮೂಲಕ ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಹಾಕಿದ್ದ ಆರೋಪಿಯನ್ನು ಗೋರೆಗಾಂವ್ ಪೊಲೀಸರು ಗುರುವಾರ (ಡಿ.22) ಬಂಧಿಸಿದ್ದಾರೆ.
ಬಂಧಿತನನ್ನು ನವೀನ್​ ಗಿರಿ ಎಂದು ಗುರುತಿಸಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 (ಎ) (ಲೈಂಗಿಕ ಕಿರುಕುಳ), 354 (ಡಿ) (ಹಿಂಬಾಲಿಸುವಿಕೆ), 509, 506 (ಕ್ರಿಮಿನಲ್ ಬೆದರಿಕೆ) ಮತ್ತು ಐಟಿ ಕಾಯ್ದೆಯ ವಿವಿಧ ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಉರ್ಫಿ ಜಾವೇದ್​ ಪ್ರಸ್ತುತ ದುಬೈನಲ್ಲಿದ್ದಾರೆ. ಸಾರ್ವಜನಿಕ ಪ್ರದೇಶದಲ್ಲಿ ಕಾನೂನಿಗೆ ವಿರುದ್ಧವಾಗಿ ಅರೆಬರೆ ಮೈ ಪ್ರದರ್ಶಿಸುವ ಶೂಟಿಂಗ್​ನಲ್ಲಿ ಭಾಗಿಯಾಗಿದ್ದಕ್ಕೆ ದುಬೈ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ. ಆದರೆ, ಇದನ್ನು ತಳ್ಳಿಹಾಕಿರುವ ಉರ್ಫಿ, ಬಟ್ಟೆ ಕಾರಣಕ್ಕೆ ಏನು ನಡೆದಿಲ್ಲ. ಸಾರ್ವಜನಿಕ ಪ್ರದೇಶದಲ್ಲಿ ಶೂಟಿಂಗ್​ ಸಮಯದ ಬಗ್ಗೆ ಒಂದಿಷ್ಟು ಗೊಂದಲ ಉಂಟಾಯಿತು. ನಮ್ಮ ತಂಡ ಪೊಲೀಸರೊಂದಿಗೆ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಅಂದಹಾಗೆ ಉರ್ಫಿ ಅವರು ಈ ವರ್ಷ ಹಲವಾರು ವಿವಾದಗಳ ಕೇಂದ್ರವಾಗಿದ್ದಾರೆ. ಇತ್ತೀಚೆಗೆ, ಮುಂಬೈ ಮೂಲದ ವಕೀಲರೊಬ್ಬರು “ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಕಾನೂನುಬಾಹಿರ ಮತ್ತು ಅಶ್ಲೀಲ ಕೃತ್ಯಗಳನ್ನು” ಎಸಗುತ್ತಿದ್ದಾರೆ ಎಂದು ಆರೋಪಿಸಿ ಉರ್ಫಿ ವಿರುದ್ಧ ದೂರು ದಾಖಲಿಸಿದ್ದಾರೆ.
ಇನ್ನು ಬಿಗ್​ ಬಾಸ್​ ಒಟಿಟಿ ಷೋನಲ್ಲಿ ಸ್ಪರ್ಧಿಸಿ ಬಂದ ಬಳಿಕ ಭಾರಿ ಪ್ರಸಿದ್ಧಿ ಪಡೆದಿರುವ ಈ ಉರ್ಫಿ ಜಾವೇದ್, ಯಾವುದಕ್ಕೂ ಕೇರ್‌ ಮಾಡದೇ ತನ್ನ ಮೈಮಾಟ ಪ್ರದರ್ಶನ ಮಾಡುವಲ್ಲಿ ಎತ್ತಿದ ಕೈ. ಪ್ರತಿದಿನ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಪಡ್ಡೆ ಹುಡುಗರ ಮೈ ಬಿಸಿಯೇರಿಸುವಂತಹ ಫೋಟೋಗಳನ್ನು ಶೇರ್​ ಮಾಡುತ್ತಲೇ ಇರುತ್ತಾರೆ. ಅವರ ಹಾಟ್​ ಅವತಾರಕ್ಕೆ ಫಿದಾ ಆಗಿರುವ ಅಭಿಮಾನಿಗಳು ಪ್ರತಿದಿನ ಅವರ ಫೋಟೋ ಅಥವಾ ವಿಡಿಯೋಗಳಿಗೆ ಎದುರು ನೋಡುತ್ತಲೇ ಇರುತ್ತಾರೆ.(ಏಜೆನ್ಸೀಸ್​)
ಮೈಮಾಟ ಪ್ರದರ್ಶಿಸಲು ಹೋಗಿ ಎಡವಟ್ಟು: ದುಬೈನಲ್ಲಿ ಬೋಲ್ಡ್​ ಬ್ಯೂಟಿ ಉರ್ಫಿ ಜಾವೇದ್​ ಬಂಧನ

ಬೆಂಗಳೂರು ವಿಮಾನ ನಿಲ್ದಾಣ ಸ್ಫೋಟಿಸುವುದಾಗಿ ಟ್ವೀಟ್​ ಮೂಲಕ ಬೆದರಿಕೆ ಹಾಕಿದ್ದ ಆರೋಪಿ ಯುವಕ ಅರೆಸ್ಟ್​!

ಸಿನಿಮಾ ಎಫೆಕ್ಟ್​! ಮನೆ ಬಾಡಿಗೆ ಕೊಡಲು ಹೋದಾಗ ಮಾಲೀಕನಿಂದ ಅನುಭವಿಸಿದ ಕಹಿ ಘಟನೆ ಬಿಚ್ಚಿಟ್ಟ ಬಾಲಿವುಡ್​ ನಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + twenty =
Remember me
