ಬೆಂಗಳೂರು:ಸಾಂಸ್ಥಿಕ ಕ್ವಾರಂಟೈನ್​ಗೆ ಒಪ್ಪದೆ ಪರಾರಿ..! ಪರೀಕ್ಷೆಗೆ ಸರತಿ ಸಾಲಿನಲ್ಲಿ ನಿಲ್ಲಲು ಕಿರಿಕಿರಿ..! 100 ರೂ. ಪ್ರಯಾಣ ದರ ವಿಧಿಸಿದ್ದಕ್ಕೆ ಗಲಾಟೆ..! ಇದು ಮಂಗಳವಾರ ಬೆಳಗ್ಗೆ ಮುಂಬೈನಿಂದ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರ ಕೂಗಾಟ, ರಂಪಾಟ. ಮುಂಬೈನಿಂದ ಬಂದವರಿಂದ ಕರೊನಾ ಸೋಂಕು ಹರಡುವ ಆತಂಕದ ಜತೆಗೆ ಅವರನ್ನು ಸಮಾಧಾನಗೊಳಿಸಲು ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಇನ್ನಿಲ್ಲದ ಸಂಕಷ್ಟ ಅನುಭವಿಸಿದರು.
ಕೇಂದ್ರ ಸರ್ಕಾರದ ಸೂಚನೆಯಂತೆ ಹೊರರಾಜ್ಯಗಳ ರೈಲು ಸೇವೆಯನ್ನು ಸೋಮವಾರ ಆರಂಭಿಸಲಾಗಿದೆ. ಅದರಂತೆ ಸೋಮವಾರ ರಾತ್ರಿ ಮುಂಬೈನಿಂದ ಹೊರಟ ಉದ್ಯಾನ್ ಎಕ್ ್ಸ ಪ್ರೆಸ್ ವಿಶೇಷ ರೈಲು ಮಂಗಳವಾರ ಬೆಳಗ್ಗೆ 8.30ಕ್ಕೆ ಕೆಎಸ್​ಆರ್ ರೈಲು ನಿಲ್ದಾಣಕ್ಕೆ ಆಗಮಿಸಿತು. ರೈಲಿನಲ್ಲಿ 52 ಮಕ್ಕಳು ಸೇರಿ 644 ಮಂದಿ ಬಂದಿಳಿದರು. ಪ್ರಯಾಣಿಕರ ಪೈಕಿ ಕೆಲವರು ಸಾಂಸ್ಥಿಕ ಕ್ವಾರಂಟೈನ್ ವಿರೋಧಿಸಿ ನಿಲ್ದಾಣದಲ್ಲಿ ರಂಪಾಟ ಮಾಡಿದರು. ಕೊನೆಗೆ ಅವರ ಮನವೊಲಿಸಿ ಅಧಿಕಾರಿಗಳು ಕ್ವಾರಂಟೈನ್​ಗೆ ಒಳಪಡಿಸಿದರು.
ಇದನ್ನೂ ಓದಿ:ಮೊಬೈಲ್ ಕಳ್ಳನ ಹೊಡೆದು ಕೊಂದ ಜನ!
ರೈಲು ಬಂದಿಳಿಯುತ್ತಿದ್ದಂತೆ ಇಬ್ಬರು ಪ್ರಯಾಣಿಕರು ಅಧಿಕಾರಿಗಳ ಕಣ್ತಪ್ಪಿಸಿ ಪರಾರಿಯಾಗಿದ್ದರು. ರೈಲು ನಿಲ್ದಾಣದಿಂದ ಹೊರ ಬಂದು ಆಟೋ ಹತ್ತಿ ಹೋಗಿದ್ದರು. ವಾಪಸ್ ಬರದಿದ್ದರೆ ಕೇಸ್ ದಾಖಲಿಸುವುದಾಗಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಎಚ್ಚರಿಸಿದ್ದರು. ರೈಲ್ವೆ ಇಲಾಖೆಯಿಂದ ವಿಳಾಸ ಪಡೆದ ಪೊಲೀಸರು ಸಂಜೆ ವೇಳೆಗೆ ಇಬ್ಬರನ್ನೂ ಪತ್ತೆಹಚ್ಚಿ ಕ್ವಾರಂಟೈನ್​ಗೆ ಒಳಪಡಿಸಿದರು.
ಎಲ್ಲ ಒಳ, ಹೊರ ದ್ವಾರಗಳು ಬಂದ್
ಮುಂಬೈನಿಂದ ರೈಲು ಬರುವ ಹಿನ್ನೆಲೆಯಲ್ಲಿ ಬಿಬಿಎಂಪಿ, ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರಯಾಣಿಕರ ತಪಾಸಣೆ ಹಾಗೂ ಸಾಂಸ್ಥಿಕ ಕ್ವಾರಂಟೈನ್​ಗೆ ಕರೆದೊಯ್ಯಲು ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಪ್ಲಾಟ್​ಫಾಮರ್್​ಗೆ ರೈಲು ಬಂದ ತಕ್ಷಣ ನಿಲ್ದಾಣದ ದ್ವಾರಗಳನ್ನು ಬಂದ್ ಮಾಡಲಾಯಿತು. ಒಂದೊಂದೇ ಬೋಗಿಯಿಂದ ಪ್ರಯಾಣಿಕರನ್ನು ಇಳಿಸಿ ಥರ್ಮಲ್ ಸ್ಕ್ರೀನಿಂಗ್​ಗೆ ಒಳಪಡಿಸಲಾಯಿತು.
ಇದನ್ನೂ ಓದಿ:12 ಲಕ್ಷ ರೂಪಾಯಿ ಬೆಲೆಯ ಸೈಕಲ್!
ಗಂಟಲ ದ್ರವ ಸಂಗ್ರಹ
ರೈಲಿನಲ್ಲಿ ಬಂದ ಪ್ರತಿ ಪ್ರಯಾಣಿಕರ ಗಂಟಲು ದ್ರವ ಸಂಗ್ರಹಿಸಲಾಯಿತು. ಜತೆಗೆ ಪ್ರಯಾಣಿಕರ ಹೆಸರು, ಆಧಾರ್ ಸಂಖ್ಯೆ, ವಿಳಾಸ, ಮೊಬೈಲ್ ಸಂಖ್ಯೆ ಸೇರಿ ಅಗತ್ಯ ಮಾಹಿತಿಯನ್ನು ಸಂಗ್ರಹಿಸಲಾಯಿತು. ನಂತರ ರಾಜ್ಯ ಸರ್ಕಾರದ ಮಾರ್ಗಸೂಚಿ ಅನ್ವಯ ಪ್ರಯಾಣಿಕರನ್ನು ಬಿಎಂಟಿಸಿ ಬಸ್​ಗಳಲ್ಲಿ ಕ್ವಾರಂಟೈನ್ ಸ್ಥಳಕ್ಕೆ ಕರೆದೊಯ್ಯಲಾಯಿತು.
ಸರತಿ ಸಾಲಿನ ಗೊಂದಲ
ಪ್ರಯಾಣಿಕರ ಗಂಟಲ ದ್ರವ ಸಂಗ್ರಹಿಸುವ ವೇಳೆ ಕೆಲ ಕಾಲ ಗೊಂದಲ ಉಂಟಾಯಿತು. ಪ್ರಯಾಣಿಕರು ಸರತಿ ಸಾಲಿನಲ್ಲಿ ನಿಲ್ಲಲು ಹಿಂದೇಟು ಹಾಕಿದರು. ನಾ ಮುಂದು ತಾ ಮುಂದು ಎನ್ನುವಂತೆ ಗಂಟಲು ದ್ರವ ಪರೀಕ್ಷೆಗೆ ಮುಂದಾದರು. ಅದರಿಂದ ಕೆಲಕಾಲ ನೂಕುನುಗ್ಗಲು ಉಂಟಾಯಿತು. ಈ ವೇಳೆ ಪೊಲೀಸರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಮಧ್ಯೆ ಪ್ರವೇಶಿಸಿ, ಸರತಿ ಸಾಲಿನಲ್ಲಿ ಬಂದು ಪರೀಕ್ಷೆಗೆ ಒಳಗಾಗುವಂತೆ ಸೂಚಿಸಿದರು.
ದುಬಾರಿ ಪ್ರಯಾಣ ದರಕ್ಕೆ ವಿರೋಧ
ಸಾಂಸ್ಥಿಕ ಕ್ವಾರಂಟೈನ್​ಗೆ ಕರೆದೊಯ್ಯಲು ಪ್ರತಿ ಪ್ರಯಾಣಿಕರಿಗೆ ಬಿಎಂಟಿಸಿ 100 ರೂ. ಪ್ರಯಾಣ ದರವನ್ನು ನಿಗದಿ ಮಾಡಿತ್ತು. ಆದರೆ. ಪ್ರಯಾಣ ದರ ಹೆಚ್ಚಾಯಿತು ಎಂಬ ಕಾರಣ ನೀಡಿ ಕೆಲ ಪ್ರಯಾಣಿಕರು ಬಿಎಂಟಿಸಿ ಸಿಬ್ಬಂದಿ ಜತೆಗೆ ವಾಗ್ವಾದಕ್ಕಿಳಿದರು. ಕೊನೆಗೆ ಬಿಬಿಎಂಪಿ ಅಧಿಕಾರಿಗಳು ಅವರನ್ನು ಸಮಾಧಾನಪಡಿಸಿ, ನಿಯಮದಂತೆ ಪ್ರಯಾಣ ದರ ನೀಡಬೇಕು ಎಂದು ತಿಳಿಹೇಳಿ ಬಸ್​ಗೆ ಹತ್ತಿಸುವಲ್ಲಿ ಯಶಸ್ವಿಯಾದರು.
ಇದನ್ನೂ ಓದಿ:ಖೇಲ್​ರತ್ನಕ್ಕೆ ರಾಣಿ, ಮನಿಕಾ ಹೆಸರು ಶಿಫಾರಸು
ನೆಗೆಟಿವ್ ವರದಿ ಬಂದಲ್ಲಿ ಹೋಂ ಕ್ವಾರಂಟೈನ್
ಗಂಟಲ ದ್ರವ ಪಡೆದ ಪ್ರಯಾಣಿಕರ ಲ್ಯಾಬ್ ವರದಿ ನೆಗೆಟಿವ್ ಬಂದಲ್ಲಿ ಅವರನ್ನು ಸಾಂಸ್ಥಿಕ ಕ್ವಾರಂಟೈನ್​ಗೆ ಬದಲು ಹೋಂ ಕ್ವಾರಂಟೈನ್​ಗೊಳಪಡಿಸುವ ಕುರಿತು ಚಿಂತಿಸಲಾಗಿದೆ. ಆದರೆ, ಅವರ ಮೇಲೆ ನಿಗಾವಹಿಸುವುದು ಬಹಳ ಮುಖ್ಯವಾಗಿದೆ.
ಗರ್ಭಿಣಿಯರು, ಮಕ್ಕಳಿಗೆ ಗೃಹ ನಿಗಾಬಂಧನ
ವಿಶೇಷ ರೈಲಿನಲ್ಲಿ ಬಂದ 655 ಪ್ರಯಾಣಿಕರ ಪೈಕಿ ವಿಶೇಷ ವರ್ಗದಡಿ 52 ಮಕ್ಕಳು, ಹಿರಿಯ ನಾಗರಿಕರು, ಗರ್ಭಿಣಿಯರು ಸೇರಿ 114 ಮಂದಿಗೆ ಸಾಂಸ್ಥಿಕ ಕ್ವಾರಂಟೈನ್​ನಿಂದ ವಿನಾಯಿತಿ ನೀಡಿ ಹೋಂ ಕ್ವಾರಂಟೈನ್​ಗೆ ಸೂಚಿಸಲಾಯಿತು.
ಪರೀಕ್ಷೆ ವಿಳಂಬ, ಆಕ್ರೋಶ
ಎಲ್ಲ 655 ಪ್ರಯಾಣಿಕರ ಗಂಟಲ ದ್ರವ ಸಂಗ್ರಹ ಮಾಡಲು ಹೆಚ್ಚು ಸಮಯ ಅಗತ್ಯವಾಗಿತ್ತು. ಅದರಿಂದ ಸರತಿ ಸಾಲಿನಲ್ಲಿ ನಿಂತಿದ್ದವರು ಹಸಿವಿನಿಂದ ಬಳಲಿದರು. ಪರೀಕ್ಷಾ ಪ್ರಕ್ರಿಯೆ ವಿಳಂಬವಾದಷ್ಟು ಕೆಲ ಪ್ರಯಾಣಿಕರು ಅಧಿಕಾರಿಗಳೊಂದಿಗೆ ವಾಗ್ವಾದಕ್ಕೆ ಮುಂದಾದರು. ಬೆಳಗ್ಗೆಯಿಂದ ಆಹಾರ ಸೇವಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ರಾಜ್ಯಸಭೆ ಚುನಾವಣೆ: ಮೂರೂ ಪ್ರಮುಖ ಪಕ್ಷಗಳಲ್ಲಿ ತಯಾರಾಗುತ್ತಿದೆ ರಣತಂತ್ರ
ಸೋಂಕಿತರ ಸಂಖ್ಯೆ ಹೆಚ್ಚುವ ಭೀತಿ
ಕಳೆದ 15 ದಿನಗಳಿಂದ ಪತ್ತೆಯಾಗುತ್ತಿರುವ ಸೋಂಕಿತರ ಸಂಖ್ಯೆಯಲ್ಲಿ ಮುಂಬೈ ನಂಟಿರುವವರೇ ಹೆಚ್ಚಿದ್ದಾರೆ. ಇದೀಗ ನಿತ್ಯ ಮುಂಬೈನಿಂದ ನೂರಾರು ಜನರು ಬೆಂಗಳೂರಿಗೆ ಬರುತ್ತಿರುವುದರಿಂದ ಅವರೆಲ್ಲರ ಮೇಲೆ ನಿಗಾವಹಿಸಬೇಕಿದೆ. ಸ್ವಲ್ಪ ಹೆಚ್ಚುಕಮ್ಮಿಯಾದರೂ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆಗಳಿವೆ.
ಜೂ. 5ರಂದು ಚಂದ್ರಗ್ರಹಣ: ಇಲ್ಲಿದೆ ಗೋಚರಿಸುವ ಸ್ಥಳ, ಸಮಯ ಮತ್ತಿತರ ವಿವರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
