ಬೆಂಗಳೂರು:ಲಾಕ್‌ಡೌನ್ ನಡುವೆಯೂ ಮೃತದೇಹವೊಂದನ್ನು ಎರಡು ರಾಜ್ಯಗಳ ಸುಮಾರು 24 ಚೆಕ್‌ಪೋಸ್ಟ್‌ಗಳನ್ನು ಯಶಸ್ವಿಯಾಗಿ ದಾಟಿಸಿಕೊಂಡು ತಂದು ಮಂಡ್ಯ ಜಿಲ್ಲೆಯಲ್ಲಿ ಅಂತ್ಯಕ್ರಿಯೆ ನೆರವೇರಿಸಿರುವುದು ಕರೊನಾ ಸೋಂಕಿನ ಆತಂಕ ಹೆಚ್ಚುವುದಕ್ಕೆ ಕಾರಣವಾಗಿದೆಯಲ್ಲದೆ, ರಾಜಕೀಯ ಮೇಲಾಟಕ್ಕೂ ಸಾಕ್ಷಿಯಾಗಿದೆ.
ಪಾಂಡವಪುರ ತಾಲೂಕಿನ ಬಿ. ಕೊಡಗಹಳ್ಳಿ ನಿವಾಸಿ 53 ವರ್ಷದ ವ್ಯಕ್ತಿಯೊಬ್ಬರು ಕಳೆದ 15 ವರ್ಷಗಳಿಂದ ಮುಂಬೈನ ಸಾಂತಾಕ್ರಾಜ್‌ನ ನಿವಾಸಿಯಾಗಿದ್ದರು. ಅಲ್ಲಿ ಆಟೋ ಚಾಲನೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ರಕ್ತದೊತ್ತಡ ಹಾಗೂ ರಕ್ತಹೀನತೆಯಿಂದ ಬಳಲುತ್ತಿದ್ದರು. ಏ. 23ರಂದು ಬೆಳಗ್ಗೆ ಎದೆನೋವು ಕಾಣಿಸಿಕೊಂಡಿದ್ದರಿಂದ ವಿ.ಎನ್. ದೇಸಾಯಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದು, ವೈದ್ಯರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಪ್ರಮಾಣ ಪತ್ರ ನೀಡಿದ್ದರು.
ನಂತರ ಮೃತದೇಹವನ್ನು ದೇಸಾಯಿ ಆಸ್ಪತ್ರೆಯ ಆಂಬ್ಯುಲೆನ್ಸ್‌ನಲ್ಲಿ ಬಿ.ಕೊಡಗಹಳ್ಳಿಗೆ ಕರೆತರಲಾಯಿತು. ಶವದ ಜತೆಯಲ್ಲಿ ಪತ್ನಿ, ಪುತ್ರ, ಪುತ್ರಿ, ಅಳಿಯ, ಮೊಮ್ಮಗ ಬಂದಿದ್ದು, ಈಗ ಪತ್ನಿ, ಅಳಿಯ ಹೊರತುಪಡಿಸಿ ಉಳಿದ ಮೂವರಿಗೂ ಸೋಂಕು ಬಂದಿದೆ. ಜತೆಗೆ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಮತ್ತೊಬ್ಬ ಮಗಳಿಗೂ ಕರೊನಾ ತಗುಲಿರುವುದು ಆತಂಕ ಹೆಚ್ಚಿಸಿದೆ.
ಅಂತ್ಯಕ್ರಿಯೆ ಮುಗಿದ ತಕ್ಷಣ ಕುಟುಂಬದ 7 ಸದಸ್ಯರು ಹಾಗೂ ಮೃತನ ಪತ್ನಿಗೆ ಸೀರೆ ಉಡಿಸಿದ್ದ ಮಹಿಳೆಯರನ್ನೂ ಕ್ವಾರಂಟೈನ್ ಮಾಡಲಾಗಿತ್ತು.
ಪಾಸಿಟಿವ್ ಬಂದ ನಾಲ್ವರನ್ನು ಮಿಮ್ಸ್ ಐಸೋಲೇಷನ್ ವಾರ್ಡಿಗೆ ದಾಖಲಿಸಲಾಗಿದೆ. ವಿಶೇಷವೆಂದರೆ ಇವರಾರಿಗೂ ಸೋಂಕಿನ ಲಕ್ಷಣಗಳು ಕಂಡುಬಂದಿರಲಿಲ್ಲ. ಸದ್ಯ ಇವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಗುರುತಿಸಿ ಕ್ವಾರಂಟೈನ್ ಮಾಡಲಾಗಿದೆ. ಆಂಬ್ಯುಲೆನ್ಸ್ ಚಾಲಕನನ್ನು ಕ್ವಾರಂಟೈನ್ ಮಾಡುವಂತೆ ಮುಂಬೈನ ದೇಸಾಯಿ ಆಸ್ಪತ್ರೆಯವರಿಗೆ ತಿಳಿಸಲಾಗಿದೆ.
ಪುತ್ರಿಯ ಆಸೆ ಮುಳುವಾಯಿತಾ?:ಮೃತ ತಂದೆಯ ಅಂತಿಮ ದರ್ಶನ ಪಡೆಯಬೇಕೆಂದು ಕೆ.ಆರ್. ಪೇಟೆಗೆ ವಿವಾಹವಾಗಿದ್ದ ಪುತ್ರಿ ಆಸೆ ವ್ಯಕ್ತಪಡಿಸಿದ್ದರಿಂದ ಶವವನ್ನು ಮುಂಬೈನಿಂದ ತವರೂರಿಗೆ ತರಲಾಯಿತು ಎನ್ನಲಾಗಿದೆ.
ಮುಂಬೈನಲ್ಲಿ ಕರೊನಾ ತಾಂಡವವಾಡುತ್ತಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರು ವಿರೋಧಿಸಿ, ಪ್ರತಿಭಟನೆಯನ್ನೂ ನಡೆಸಿದ್ದರು. ಪರಿಣಾಮ ಗ್ರಾಮದ ಒಳಗೆ ಕೊಂಡೊಯ್ಯುವ ಬದಲಿಗೆ ನೇರವಾಗಿ ಸ್ಮಶಾನಕ್ಕೆ ಕೊಂಡೊಯ್ದು ಅಂತ್ಯಕ್ರಿಯೆ ನೆರವೇರಿಸಲಾಗಿತ್ತು.
ಸಚಿವರ ಪಾತ್ರ ಇದೆಯಾ:ಮೃತ ವ್ಯಕ್ತಿಯ ಶವವನ್ನು ಹೊತ್ತ ಸರ್ಕಾರಿ ಆಂಬ್ಯುಲೆನ್ಸ್ ಮುಂಬೈನಿಂದ 42 ಚೆಕ್‌ಪೋಸ್ಟ್‌ಗಳನ್ನು ದಾಟಿ ಪಾಂಡವಪುರ ತಾಲೂಕಿನ ಬಿ. ಕೊಡಗಹಳ್ಳಿ ಗ್ರಾಮಕ್ಕೆ ಬಂದಿದ್ದು ಇದಕ್ಕೆ ಸಚಿವರೊಬ್ಬರ ಸಹಕಾರ ಇತ್ತೆಂದು ಹೇಳಲಾಗಿದೆ. ಈ ವಿಷಯ ಈಗ ಜಿಲ್ಲೆಯಲ್ಲಿ ಮಾತ್ರವಲ್ಲದೆ ರಾಜ್ಯ ರಾಜಕೀಯ ವಲಯದಲ್ಲಿ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗುತ್ತಿದೆ.
ಈ ಮಧ್ಯೆ, ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಈ ಕುರಿತು ಸ್ಪಷ್ಟನೆ ನೀಡಿ, ಸರ್ಕಾರಿ ಆಂಬ್ಯುಲೆನ್ಸ್‌ಗಳಿಗೆ ಪ್ರವೇಶ ಕಲ್ಪಿಸಬೇಕೆಂಬ ಕೇಂದ್ರ ಸರ್ಕಾರದ ನಿಯಮದ ಅನುಸಾರ ಎಲ್ಲ ಚೆಕ್‌ಪೋಸ್ಟ್‌ಗಳನ್ನು ಸುಲಭವಾಗಿ ದಾಟಿ ಬಂದಿದೆ. ಇದರಲ್ಲಿ ಜಿಲ್ಲಾಡಳಿತ ನಿಯಮ ಉಲ್ಲಂಘನೆ ಮಾಡಿಲ್ಲ ಎಂದು ತಿಳಿಸಿದ್ದಾರೆ.
ಸರ್ಕಾರದಿಂದ ತನಿಖೆ:ಈ ವಿವಾದದ ಕುರಿತು ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಬಿ. ಶ್ರೀರಾಮುಲು, ‘‘ಮುಂಬೈನಿಂದ ಮಂಡ್ಯಕ್ಕೆ ಶವ ಸಾಗಿಸಿರುವ ಕುರಿತು ಸರ್ಕಾರದ ಮಟ್ಟದಲ್ಲಿ ತನಿಖೆ ನಡೆಯುತ್ತಿದೆ’’ ಎಂದು ಹೇಳಿದ್ದಾರೆ.
ಎಣ್ಣೆ ಪ್ರಿಯರಿಗೆ ಸಿಹಿ ಸುದ್ದಿ: ಮಾರಾಟಕ್ಕೆ ಸಿಕ್ತು ಪರ್ಮಿಷನ್; ಹಾಗಾದ್ರೆ ಯಾವಾಗಿಂದ ಶುರುವಾಗ್ತವೆ ಮದ್ಯದಂಗಡಿಗಳು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 2 =
Remember me
