ಮುಂಬೈ:ಮೂಖಪ್ರಾಣಿಗಳು ಹಸಿವಾದರೆ ಬಾಯಿಬಿಟ್ಟು ಕೇಳಲಾರವು. ಹೀಗಾಗಿ ಪ್ರಾಣಿ ಪ್ರೇಮಿಗಳು ಆಹಾರ ನೀಡಿ ಮಾನವೀಯತೆ ಮೆರೆಯುತ್ತಾರೆ. ಹೀಗೆ ಬೆಕ್ಕುಗಳಿಗೆ ಆಹಾರ ಹಾಕಿ ಸಾಕುತ್ತಿದ್ದ ಯುವತಿ ಮೇಲೆ ಅಕ್ಕ ಪಕ್ಕದ ಮನೆಯವರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ನಡೆದಿದೆ.
ಭುಲೇಶ್ವರ್ ಎಂಬಲ್ಲಿ ಸಿಮ್ರಿನ್ ಶುಕ್ಲಾ ಎಂಬ 23 ವರ್ಷ ಯುವತಿ ಬೆಕ್ಕಿನ ಪ್ರೇಮಿಯಾಗಿದ್ದು, ಬೆಕ್ಕುಗಳಿಗ ಆಹಾರ ನೀಡುತ್ತಿದ್ದರು. ಇದೇ ಕಾರಣಕ್ಕೆ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು,ಆಕೆಯ ಕೈಗಳಿಗೆ ವೈದ್ಯರು 32 ಹೊಲಿಗೆ ಹಾಕಿದ್ದಾರೆ.
ಇದನ್ನೂ ಓದಿ:International Yoga Day 2023; ಯೋಗವಾಗಲಿ ಜೀವನದ ಭಾಗ…ದೂರವಾಗುವುದು ಹಲವು ರೋಗ
ಬೆಕ್ಕುಗಳ ಪ್ರೇಮಿಯಾಗಿರುವ ಸಿಮ್ರಿನ್ ಅವರು ಬೆಕ್ಕುಗಳಿಗೆ ಆಹಾರ ನೀಡುತ್ತಾರೆ. ಬೆಕ್ಕುಗಳಿಗೆ ಆಹಾರ ನೀಡೋದು ಏಕೆ ಎಂದು ಸಿಮ್ರಿನ್‌ಗೆ  ಪ್ರಶ್ನಿಸುವಾಗ ಮಾತಿಗೆ ಮಾತು ಬೆಳೆದು ಗಲಾಟೆಯಾಯ್ತು. ಇದೇ ಕಾರಣಕ್ಕಾಗಿ 40 ವರ್ಷ ವಯಸ್ಸಿನ ರಾಜಕುಮಾರ್ ಮಿಶ್ರಾ ಎಂಬುವರು ತಮ್ಮ ಕುಟುಂಬಸ್ಥರ ಜತೆಗೆ ಸಿಮ್ರಿನ್‌ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಮುಂಬೈನ ವಿ. ಪಿ. ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
A girl who was feeding dogs was attacked by several men with knives and blades in Mumbai.Simran is going for medical. Police van has come.Uncouth behaviour just because someone was feeding a voiceless animal who is dependent on us for survival.Sikka nagar, C. P. Tank area.pic.twitter.com/oi6x1I6qdj
— Kamya Patel (@Kamyap8)June 24, 2023
ಈ ಹಿಂದೆ ಸಿಮ್ರಿನ್‌ನ 14 ವರ್ಷದ ಸಹೋದರನ ಮೇಲೂ ಅದೇ ನೆರೆಹೊರೆಯವರು ಪ್ರಾಣಿಗಳಿಗೆ ಆಹಾರ ನೀಡುವ ವಿಷಯದಲ್ಲಿ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಗಾಯಗೊಂಡಿರುವ ಸಿಮ್ರಿನ್ ಮಾತನಾಡಿ, ನನ್ನ ಮೇಲೆ ಕೆಟ್ಟದಾಗಿ ಹಲ್ಲೆ ನಡೆಸಲಾಯಿತು, ಅದಕ್ಕಾಗಿ ನನ್ನ ತೋಳಿಗೆ ಹೊಲಿಗೆ ಹಾಕಿದ್ದಾರೆ. ಬೆಕ್ಕುಗಳಿಗೆ ಆಹಾರ ನೀಡುತ್ತಿರುವುದಕ್ಕಾಗಿ ನಮಗೆ ಕಿರುಕುಳ ನೀಡುತ್ತಿದ್ದಾರೆಂದು ಹೇಳಿದ್ದಾರೆ.
ಕಣ್ಣುಗಳ ಆರೋಗ್ಯಕ್ಕಾಗಿ ನಿಮ್ಮ ಆಹಾರದಲ್ಲಿರಲಿ ಈ ಪೌಷ್ಟಿಕ ಪದಾರ್ಥಗಳು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − twelve =
Remember me
