ಬೆಂಗಳೂರು:ಅಂದು ಶ್ರೀವಿಜಯನು “ಕಾವೇರಿಯಿಂದಮಾ ಗೋದಾವರಿವರೆಗಿರ್ದ, ನಾಡಾದ ಕನ್ನಡನಾಡೊಳ್” ಎಂದು  ಕನ್ನಡ ನಾಡು ಕಾವೇರಿಯಿಂದ ಗೋದಾವರಿ ತೀರದವರಗೆ ಇತ್ತೆಂದು ಬಣ್ಣಿದ್ದನ್ನು. ಈ ಬಾರಿಯ ಸಿರಿಗನ್ನಡಕೂಟ ಮ್ಯೂನಿಕ್​ನ ಕನ್ನಡ ರಾಜ್ಯೋತ್ಸವ ಸಂಭ್ರಮ 2023ರ ಸಂಭ್ರಮವನ್ನು ನೋಡಿದಾಗ “ಕಾವೇರಿಯಿಂದಮಾ ಮ್ಯೂನಿಕ್​ನ ಇಸಾರ್ನದಿವರೆಗಿರ್ಪ ನಾಡಾದ ಕನ್ನಡದೊಳ್”: ಕಾವೇರಿಯಿಂದ ಮ್ಯೂನಿಕ್​ನ ಇಸಾರ್ (ಮ್ಯೂನಿಕ್​ನಲ್ಲಿ ಹರಿಯುವ ನದಿ) ನದಿವರೆಗೆ ಕನ್ನಡವಿದೆಯೇನೋ ಎಂದೆನಿಸುತ್ತಿತ್ತು.
ಇದನ್ನೂ ಓದಿ:‘ಕುಮಾರಸ್ವಾಮಿಗೆ ಸುಳ್ಳು ಹೇಳುವುದು ಬಿಟ್ಟರೆ ಬೇರೇನೂ ತಿಳಿದಿಲ್ಲ, ಸುಳ್ಳೇ ಅವರ ಮನೆದೇವರು’: ಸಿಎಂ
ಅಬ್ಬಾ. . . ಏನು ಜನಸಾಗರ! ಏನು ವೈಭವ, ಏನು ಕನ್ನಡ ಸಂಸ್ಕೃತಿಯ ಮೆರುಗು, ಹಬ್ಬದೂಟ!! ಅಬ್ಬಬ್ಬಾ…ನವೆಂಬರ್ 4ರಂದು ಸಿರಿಗನ್ನಡಕೂಟ ಮ್ಯೂನಿಕ್ನ ವತಿಯಿಂದ ಇಲ್ಲಿನ ಬ್ಯುರ್ಗರ್ ಹೌಸ್ (ಸಮುದಾಯ ಭವನ) ಗಾರ್ಷಿಂಗ್​ನ ರಂಗಮಂದಿರದಲ್ಲಿ 68ನೇ ಕರ್ನಾಟಕ ರಾಜ್ಯೋತ್ಸವವನ್ನು, ಸಾಂಸ್ಕೃತಿಕವಾಗಿ, ವೈಭವದಿದಂದ ಆಚರಿಸಲಾಯಿತು.
ಸಿರಿಗನ್ನಡಕೂಟ ಮ್ಯೂನಿಕ್​ಗೆ ಇದು ಬರೋಬ್ಬರಿ 12ನೇ ರಾಜ್ಯೋತ್ಸವಾಚರಣೆ. ಮ್ಯೂನಿಕ್ ನಗರದ ಭಾರತೀಯ ಕಾನ್ಸುಲೇಟ್ ನ ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾ ಶ್ರೀ ಮೋಹಿತ್ ಯಾದವ್, ಕಾನ್ಸುಲ್ ಫಾರ್ ಕಲ್ಚರಲ್ ಶ್ರೀ ನಿರಂಜನ್ ಮತ್ತು ಗಾರ್ಷಿಂಗ್ ನಗರದ ಮೇಯರ್ ಶ್ರೀ ಜುರ್ಗೆನ್ ಆಶೆರ್ಲ್ ಅವರು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಇದನ್ನೂ ಓದಿ:ನಮ್ಮ ಪರಂಪರೆ ಬಗ್ಗೆ ಹೆಮ್ಮೆ ಪಡುವ ರೀತಿಯಲ್ಲಿ ಮೋದಿ ಆಡಳಿತ : ಚಕ್ರವರ್ತಿ ಸೂಲಿಬೆಲೆ
ಕನ್ನಡ ಆಡುಭಾಷೆಯಾಗಿ, ಬಳಕೆಯ ಭಾಷೆಯಾಗಿ, ಸಾಹಿತ್ಯಕ ಅಭಿವ್ಯಕ್ತಿಯಾಗಿ, ಸಾಂಸ್ಕೃತಿಕ ಭೂಮಿಕೆಯಾಗಿ, ಕನ್ನಡದ ಅಸ್ಮಿತೆ ತನ್ನ ಛಾಪು ಮತ್ತು ಹೊಳಪನ್ನು ಕನ್ನಡೇತರ ನಾಡುಗಳಲ್ಲಿ(ಯೂ) ಉಳಿಸಿಕೊಂಡು, ನಮ್ಮ ತನದ ನಂಟನ್ನು ಮತ್ತದರ ಜಾಡನ್ನು ಬೆಳೆಸಿಕೊಂಡು, ಮುಂದಿನ ಪೀಳಿಗೆಗೆ ತಿಳಿಸಲು ಒಂದು ದೊಡ್ಡ ಸಮುದಾಯದ ಸಹಾಯವೇ ಬೇಕಾಗುತ್ತದೆ. ವಿದೇಶಿ ನೆಲಗಳಲ್ಲಿ ಕನ್ನಡ ಸಂಘಗಳು ಅತಿ ಮುಖ್ಯವಾಗುವುದು ಇಲ್ಲಿಯೇ. ಇದೇ ನಿಟ್ಟಿನಲ್ಲಿ ಈ ಬಾರಿಯ ಸಿರಿಗನ್ನಡಕೂಟ ಮ್ಯೂನಿಕ್ ಸಂಘದ ವತಿಯಿಂದ ಆಚರಿಸಲ್ಪಟ್ಟ ಕರ್ನಾಟಕ ರಾಜ್ಯೋತ್ಸವ ವೈವಿದ್ಯಮಯ ಮತ್ತು ಅತ್ಯಂತ ವಿಶೇಷವಾದುದು.
ಓಂ ಧೋಲ್ ಥಾಷಾ ಪಾಠಕ್, ಜರ್ಮನಿಯ ತಂಡದೊಂದಿಗೆ ಡೊಳ್ಳು ಕುಣಿತದ ಮುಖೇನ ತಾಯಿ ಭುವನೇಶ್ವರಿ ರಥೋತ್ಸವದ ಮೂಲಕ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಸಾಂಸ್ಕೃತಿಕ ಚಾಲನೆ ದೊರೆಯಿತು. ಈ ಬಾರಿಯ ಸಂಭ್ರಮ 2023ರಲ್ಲಿ ಕರುನಾಡ ಇತಿಹಾಸದ ಹೆಮ್ಮೆಯ ಯಶೋಗಾಥೆಯನ್ನು “ವೈಭವಯಾನ” ಎಂಬ ವಿಶೇಷ-ವೈವಿಧ್ಯಪೂರ್ಣ ನಾಟಕದ ನಿರೂಪಣೆಯಲ್ಲಿ ಅತ್ಯಂತ ಸೊಗಸಾಗಿ ಪ್ರಸ್ತುತ ಪಡಿಸಲಾಯಿತು.“ಮಾಲ್ಗುಡಿ ಚಾ ಅಂಗಡಿ”ಯಲ್ಲಿ ಅಂಗಡಿಯ ಒಡತಿ ಚಂದ್ರಿಕ (ಶ್ರೀದೇವಿ ಹೊಸೂರ್), ಇತಿಹಾಸದ ಮೇಷ್ಟ್ರು (ಗಿರೀಶ್ ರಾವಂದೂರ್), ಸೌಮ್ಯ ನಾಯಕ್ ಮತ್ತು ಸಿದ್ದಣ್ಣ (ಅರವಿಂದ ಬಾಯರಿ) ನೆಂಬ ಚಿರಪರಿಚಿತ ಗ್ರಾಹಕರ ಮಧ್ಯೆ ನಡೆಯುವ ಕರ್ನಾಟಕದ ಇತಿಹಾಸದ ವಿಚಾರಧಾರೆಯ ಸಂಭಾಷಣೆ ಮತ್ತು ಆಯಾ ಸಾಮ್ರಾಜ್ಯಗಳ ಇತಿಹಾಸವನ್ನು ಭರತನಾಟ್ಯ, ನೃತ್ಯ, ನಾಟಕ, ಹಾಡುಗಳ ಮೂಲಕ ಪ್ರೇಕ್ಷಕರಿಗೆ ಕರ್ನಾಟಕದ ಇತಿಹಾಸ ಪರಂಪರೆಯನ್ನು ನೆನೆದು ಸಂಭ್ರಮಿಸುವಲ್ಲಿ ಯಶಸ್ವಿಯಾಗಿ ನಿರೂಪಿಸಲಾಯಿತು.
ಇದನ್ನೂ ಓದಿ:ಬರ ಪರಿಹಾರದ ಹಣ ತಕ್ಷಣ ಜಮೆ ಮಾಡಲು ಮಲ್ಲಿಕಾರ್ಜುನ ಬಳ್ಳಾರಿ ಆಗ್ರಹ
ಕರ್ನಾಟಕದ ಹೆಮ್ಮೆಯ ರಾಜವಂಶಗಳಾದ ಕದಂಬ, ರಾಷ್ಟ್ರಕೂಟ, ಚಾಲುಕ್ಯ, ಗಂಗ, ಹೊಯ್ಸಳ, ವಿಜಯನಗರದ ಅರಸರು, ಮೈಸೂರು ಅರಸರು, ವೀರ ಪುರುಷರು, ವೀರ ವನಿತೆಯರು, ಮಯೂರವರ್ಮ, ಪುಲಿಕೇಶಿ, ನೃಪತುಂಗ, ವಿಷ್ಣುವರ್ಧನ, ಕೃಷ್ಣದೇವರಾಯ,ಶ್ರೀ ರಾಘವೇಂದ್ರ ಸ್ವಾಮಿಗಳು, ಬಸವಣ್ಣ, ಕಿತ್ತೂರ ಚನ್ನಮ್ಮ, ರಾಣಿ ಅಬ್ಬಕ್ಕ, ಒನಕೆ ಓಬವ್ವ ಮುಂತಾದ ಕನ್ನಡದ ಮಣ್ಣಿನಲ್ಲಿ ಮೆರೆದವರು! ಆಳಿ ಸಿರಿಸಮೃದ್ಧವಾದ ನೆಲವನ್ನು ಮತ್ತಷ್ಟು ಸಮೃದ್ಧವನ್ನಾಗಿಸಿ ಕರ್ನಾಟಕವ ಮೆರೆಸಿದವರನ್ನು ಈ ವೈಭವಯಾನದ ಮೂಲಕ ವೈಭವದಿಂದ ನೆನೆಯಲಾಯಿತು. ಒಟ್ಟಾರೆ ಸುಮಾರು ಮೂರು ತಾಸು ನಡೆದ ಈ ವೈಭವಯಾನದಲ್ಲಿ 19 ಭಾರತೀಯ ಸಮುದಾಯ ಸಂಘಗಳನ್ನೊಳಗೊಂಡ 80ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿದರು.
ಊಟದ ವಿರಾಮದ ನಂತರ ಮುಂದುವರೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಕ್ಕಳು ಹಾಗೂ ಯುವಕ ಯುವತಿಯರ ಮನೋರಂಜನೀಯ ಹಾಡು, ನೃತ್ಯ, ನಾಟಕ ಕಾರ್ಯಕ್ರಮಗಳು, “ರಾಗ ಕಲೆಕ್ಟೀವ್” ಎಂಬ ಸಂಗೀತ ಬ್ಯಾಂಡ್​ನ ಸುಮಧುರ ಸಂಗೀತ ಪ್ರೇಕ್ಷಕರ ಮನ ಸೆಳೆದವು. ನಿರೂಪಕಿಯರಾದ ಶ್ರೀಮತಿ ವೈಷ್ಣವಿ ಕುಲ್ಕರ್ಣಿ ಹಾಗೂ ಚಂದನಾ ಮಾವಿನಕೆರೆ ಅವರು ಸಕ್ಕೂ ಮತ್ತು ಶೇಷು ಎಂಬ ಪಾತ್ರಧಾರಿಗಳ ರೂಪದಲ್ಲಿ ಅತ್ಯಂತ ಉತ್ಸಾಹ ಹಾಗು ಹಾಸ್ಯಭರಿತವಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಇದನ್ನೂ ಓದಿ:ಎಮ್ಮೆಕರೆ ಕ್ರಿಕೆಟ್ ಮೈದಾನ ಅಭಿವೃದ್ಧಿಗೆ ಕಾಂಗ್ರೆಸ್ ನಿರ್ಲಕ್ಷೃ -ಶಾಸಕ ವೇದವ್ಯಾಸ್ ಕಾಮತ್
ವಿಶೇಷವೆಂದರೆ, ಕನ್ನಡಿಗರಲ್ಲದೆ ಕನ್ನಡೇತರರು ಹಾಗು ಭಾರತೀಯರೇತರರು ಸೇರಿ ಸರಿಸುಮಾರು 650ಕ್ಕೂ ಹೆಚ್ಚು ಪ್ರೇಕ್ಷಕರು ರಾಜ್ಯೋತ್ಸವ ಸಂಭ್ರಮದಲ್ಲಿ ಭಾಗವಹಿಸಿದ್ದರು. ಕರ್ನಾಟಕ ಪ್ರವಾಸೋದ್ಯಮದ ದೃಷ್ಠಿಯಿಂದ ರಂಗಮಂದಿರದ ಮುಂಬಾಗದಲ್ಲಿ ಕರ್ನಾಟಕದ 31 ಜಿಲ್ಲೆಯ ವಿಶೇಷತೆಗಳನ್ನು ಪ್ರದರ್ಶಿಸಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಮ್ಯೂನಿಕ್ ನಗರದ ಭಾರತೀಯ ಕಾನ್ಸುಲೇಟ್ ನ ಕಾನ್ಸುಲ್ ಜೆನೆರಲ್ ಆಫ್ ಇಂಡಿಯಾ ಶ್ರೀ ಮೋಹಿತ್ ಯಾದವ್ ರವರು ತಮ್ಮ ಟ್ವಟ್ಟರ್ ಖಾತೆಯಲ್ಲಿ  “Indian Diaspora in#Munich are flag bearers of#IndiaGermany partnership. At#Karnataka Rajyotsava 2023, culture and cuisine showcased the rich heritage- connecting history to the new future that our strong work ethics is creating. We are stronger together!” ( ಕೊಂಡಿ: https://t.ly/hsz8g) ಎಂದು ಸಿರಿಗನ್ನಡಕೂಟ ಮ್ಯೂನಿಕ್ ನ ಅರ್ಥಪೂರ್ಣ ರಾಜ್ಯೋತ್ಸವ ಆಚರಣೆಯನ್ನು ಶ್ಲಾಘಿಸಿದರು.
ಸಿರಿಗನ್ನಡಕೂಟ ಮ್ಯೂನಿಕ್​ನ ಅಧ್ಯಕ್ಷರಾದ ಶ್ರೀ ಕಾರ್ತಿಕ್ ಮಂಜುನಾಥ್ ರವರು ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡುತ್ತಾ ಕಾರ್ಯಕ್ರಮದ ಯೋಜನಾ ಹಂತದಿಂದ, ಯಶಸ್ವಿಯಾಗಿ ಕಾರ್ಯಗತಗೊಳಿಸುವತನಕ ಕಾರಣೀಕರ್ತರಾದ ಮಂಡಳಿಯ ಎಲ್ಲಾ ಸದಸ್ಯರುಗಳಿಗೂ, ಕಾರ್ಯಕ್ರಮದ ಆಧಾರಸ್ಥಂಭಗಳಾದ ಸ್ವಯಂಸೇವಾ ಕಾರ್ಯಕರ್ತರಿಗೂ, ಪ್ರೇಕ್ಷಕ ವರ್ಗದವರಿಗೂ ಮತ್ತು ತೆರೆಮರೆಯಲ್ಲಿ ಕೈ ಜೋಡಿಸಿ ಸಹಕರಿಸಿದ ಸಕಲರಿಗೂ ಕೃತಜ್ಞತೆಗಳನ್ನು ಅರ್ಪಿಸಿದರು.ಅಷ್ಟೇ ಅಲ್ಲದೆ ಅಕ್ಟೋಬರ್ ತಿಂಗಳು ದಿನಂಪ್ರತಿ “ಕರ್ನಾಟಕದ ಇತಿಹಾಸದಲೀ” ಎಂಬ ಬಹು ಆಯ್ಕೆ ಆನ್ಲೈನ್ ರಸಪ್ರಶ್ನೆ ಕಾರ್ಯಕ್ರವನ್ನು ಆಯೋಜಿಸಲಾಗಿತ್ತು. ಮ್ಯೂನಿಕ್ ನಗರವಲ್ಲದೆ ಜರ್ಮನಿಯ ಮತ್ತಿತರ ನೆರೆಯ ರಾಜ್ಯಗಳಿಂದಲೂ ಅಸಕ್ತರು ಭಾಗವಹಿಸಿ ಸಿರಿಗನ್ನಡಕೂಟ ಮ್ಯೂನಿಕ್​ನ ಈ ಪ್ರಯತ್ನವನ್ನು ಪ್ರಶಂಸಿಸಿ ಶ್ಲಾಘಿಸಿದರು.
ಇದನ್ನೂ ಓದಿ:ವಿಪಕ್ಷ ನಾಯಕರ ಆಯ್ಕೆ: ರಾಜ್ಯದ ಮತ್ತೊಂದು ಪ್ರಬಲ ಸಮುದಾಯಕ್ಕೆ ಮಹತ್ವ ಕೊಟ್ಟ ಬಿಜೆಪಿ
ರಾಜ್ಯೋತ್ಸವ ಆಚರಣೆಯ ನಂತರ 10 ದಿನಗಳ ಕಾಲ ಸಾಹಿತ್ಯ ಸಂಭ್ರಮ 2023 ಎಂಬ ಉಪಕಾರ್ಯಕ್ರಮದಲ್ಲಿ 8 ರಿಂದ 16ನೇ ಶತಮಾನದ ಆಯ್ದ ಕವಿಗಳನ್ನು ನೆನೆಪಿಸಿಕೊಳ್ಳುತ್ತಾ “ಕವಿ-ಕಾವ್ಯ ನಮನ”ದ ನಾಮಾಂಕಿತದಲ್ಲಿ ಆದಿಕವಿ ಪಂಪ, ರನ್ನ, ಪೊನ್ನ, ಜನ್ನ, ಹರಿಹರ, ರಾಘವಾಂಕ, ರತ್ನಾಕರವರ್ಣಿ, ಕುಮಾರವ್ಯಾಸ ಮತ್ತು ಸರ್ವಜ್ಞರ “ಕವಿ-ಕಾವ್ಯ” ಪರಿಚಯವನ್ನು ನೀಡಿ, ಆಯ್ದ ಒಂದು ಕವಿತೆಯ ವಾಚನ ಪ್ರಸ್ತುತ ಪಡಿಸುವುದರ ಮೂಲಕ ಈ ಬಾರಿಯ ರಾಜ್ಯೋತ್ಸವ ಸಂಭ್ರಮವು ನಿಜಕ್ಕೂ ವಿಶೇಷ, ವೈವಿಧ್ಯಮಯ ಮತ್ತು ಅತ್ಯಂತ ಅರ್ಥಪೂರ್ಣವಾದ ಆಚರಣೆಯಾಗಿತ್ತು.
ನೀರ್​ ದೋಸೆ ಹಾಕಿದ ‘ಸಿರಿ’ಯಲ್ಲಿ ರಾಜ್​ ಬಿ.ಶೆಟ್ಟಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
