ಕಲಬುರಗಿ:ನಗರಸಭೆ ಮಾಜಿ ಅಧ್ಯಕ್ಷರೊಬ್ಬರನ್ನು ಹಾಡಹಗಲೇ ಬರ್ಬರವಾಗಿ ಕೊಲೆ ಮಾಡಿದ್ದಲ್ಲದೆ, ಹೊಟ್ಟೆಗೆ ತಲವಾರ್ ಚುಚ್ಚಿದ ಹಂತಕರು ಅದನ್ನು ಹಾಗೇ ಬಿಟ್ಟು ಹೋಗಿರುವಂಥ ಭೀಕರ ಪ್ರಕರಣ ನಡೆದಿದೆ. ಕಲಬುರಗಿ ಜಿಲ್ಲೆಯಲ್ಲಿ ಈ ಕೊಲೆ ನಡೆದಿದೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಶಹಬಾದ್ ಪಟ್ಟಣದಲ್ಲಿ ಅದೂ ಶಹಬಾದ್ ನಗರದ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಈ ಭೀಕರ ಕೊಲೆ ನಡೆದಿದೆ. ಶಹಬಾದ್ ನಗರಸಭೆ ಮಾಜಿ ಅಧ್ಯಕ್ಷ, ನಗರಸಭೆಯ ಹಾಲಿ ಅಧ್ಯಕ್ಷೆಯ ಪತಿ ಗಿರೀಶ್ ಕಂಬಾನುರ್ ಕೊಲೆಗೀಡಾದ ವ್ಯಕ್ತಿ.
ನಾಲ್ವರು ಯುವಕರು ಮಾರಕಾಸ್ತ್ರಗಳಿಂದ ಮನಸೋ ಇಚ್ಛೆ ದಾಳಿ ಮಾಡಿ, 15 ರಿಂದ 20 ಬಾರಿ ಇರಿದಿದ್ದಾರೆ. ಬಳಿಕ ತಲವಾರ್​ನಿಂದ ಎದೆಗೆ ಚುಚ್ಚಿ ಅದನ್ನು ಹಾಗೇ ಇಟ್ಟು ಹೋಗಿದ್ದಾರೆ. ಗಂಭೀರ ಗಾಯಗೊಂಡ ಗಿರೀಶ್​ ಅವರನ್ನು ತಕ್ಷಣ ಕಲಬುರಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಬದುಕುಳಿಯಲಿಲ್ಲ.
ಇದನ್ನೂ ಓದಿ:ತಂದೆಯನ್ನೇ ಗುಂಡಿಟ್ಟು ಕೊಲ್ಲಿಸಿದ ಮಗಳು; ಅಪ್ಪ ಗಿಫ್ಟ್ ಕೊಟ್ಟಿದ್ದ ವಜ್ರದುಂಗುರವನ್ನೇ ಸುಪಾರಿಯಾಗಿ ನೀಡಿದ್ದಳು!
2020ರ ಫೆಬ್ರವರಿಯಲ್ಲಿ ಗಿರೀಶ್ ಕಂಬಾನೂರ್ ಸಹೋದರ ಸತೀಶ್ ಕಂಬಾನೂರ್ ಕೊಲೆಯಾಗಿತ್ತು. ಇದೀಗ ಗಿರೀಶ್​ ಕೂಡ ಕೊಲೆಯಾಗಿ ಹೋಗಿದ್ದು, ಶಹಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೈಕಲ್​ನಲ್ಲೇ ಬೆಂಗಳೂರು-ಕನ್ಯಾಕುಮಾರಿ; ಬರೀ 36 ಗಂಟೆಗಳಲ್ಲಿ 650 ಕಿ.ಮೀ. ಸವಾರಿ!

ವರ್ಣರಂಜಿತ ಕೆಆರ್​ಎಸ್​: ಬಣ್ಣಗಳಿಂದ ಕಂಗೊಳಿಸುತ್ತಿರುವ ಕನ್ನಂಬಾಡಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × four =
Remember me
